ಮುಡಾ, ವಾಲ್ಮೀಕಿ ನಿಗಮ ಹಗರಣವನ್ನು ಸಿಬಿಐ ತನಿಖೆ ನೀಡಿದರೆ ಸತ್ಯಾಂಶ ಹೊರಬರಲಿದೆ: ಸಂಸದ ಯದುವೀರ್ ಒಡೆಯರ್

By Govindaraj S  |  First Published Jul 11, 2024, 6:49 PM IST

ಮೈಸೂರು ರಾಜಮನೆತನದ ಕಾಲದಲ್ಲಿ ರಚನೆಯಾಗಿದ್ದ ಸಂಸ್ಥೆ ಬಡವರಿಗೆ ನಿವೇಶನ ಕೊಡುತಿತ್ತು. ಆದರೆ ಇಂದು ಅದೇ ಮೂಡ ಶ್ರೀಮಂತರಿಗೆ ನಿವೇಶನ ಕೊಡುವ ಸಂಸ್ಥೆಯಾಗಿ ಪರಿವರ್ತನೆಯಾಗಿದೆ ಎಂದು ಮೈಸೂರು ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜು.11): ಮೈಸೂರು ರಾಜಮನೆತನದ ಕಾಲದಲ್ಲಿ ರಚನೆಯಾಗಿದ್ದ ಸಂಸ್ಥೆ ಬಡವರಿಗೆ ನಿವೇಶನ ಕೊಡುತಿತ್ತು. ಆದರೆ ಇಂದು ಅದೇ ಮೂಡ ಶ್ರೀಮಂತರಿಗೆ ನಿವೇಶನ ಕೊಡುವ ಸಂಸ್ಥೆಯಾಗಿ ಪರಿವರ್ತನೆಯಾಗಿದೆ ಎಂದು ಮೈಸೂರು ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಡಗು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ (ದಿಶಾ) ಸಭೆ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾದಲ್ಲಿ ಆಗಿರುವ ಹಗರಣ ದೊಡ್ಡ ಹಗರಣಗಳು. 

Tap to resize

Latest Videos

ಎರಡರಲ್ಲೂ ಹಗರಣ ಆಗಿದೆ ಅಂತ ನಾವು ಎಲ್ಲಾ ಕಡೆ ಹೇಳಿದ್ದೇವೆ. ಇದೇ ವಿಚಾರವಾಗಿ ನಾಳೆ ಮೈಸೂರಲ್ಲಿ ನಮ್ಮ ಪಕ್ಷದಿಂದಲೂ ಪ್ರತಿಭಟನೆ ಇದೆ. ಸರ್ಕಾರ ಆಡಳಿತದಲ್ಲಿ ವಿಫಲವಾಗಿದೆ. ಜೊತೆಗೆ ಸಾರ್ವಜನಿಕರಿಗೆ ಇದರಿಂದ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಇದನ್ನ CBI ಗೆ ಕೊಡಬೇಕು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಒತ್ತಾಯಿಸಿದರು. ಎರಡು ಪ್ರಕರಣಗಳ ಸತ್ಯಾಂಶ ಹೊರ ಬರಬೇಕು ಅಂದ್ರೆ ಕೇಸ್ CBI ಗೆ ಹೊಗಬೇಕು ಎಂದು ಆಗ್ರಹಿಸಿದರು. ನನ್ನ ಪತ್ನಿಗೆ ಬಿಜೆಪಿ ಸರ್ಕಾರದಲ್ಲೇ ನಿವೇಶನ ನೀಡಲಾಗಿದೆ. ಇದು ಅಕ್ರಮವೇ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅದು ಸತ್ಯವೇ ಆಗಿದ್ದರೆ ಸಿಬಿಐಗೆ ಪ್ರಕರಣ ವರ್ಗಾಯಿಸಿ, ಸಿಬಿಐ ತನಿಖೆಗೆ ಕೊಡುವುದಕ್ಕೆ ನಿಮಗೇಕೆ ಭಯ. 

ಬೆಂಗಳೂರು ದಕ್ಷಿಣ ಜಿಲ್ಲೆಯಾದರೆ ಅಭಿವೃದ್ಧಿಗೆ ವೇಗ: ಎಚ್‌ಡಿಕೆ ವಿರುದ್ಧ ಶಾಸಕ ಇಕ್ಬಾಲ್ ವಾಗ್ದಾಳಿ

ಸಿಬಿಐ ತನಿಖೆಯಲ್ಲಿ ನಿಮಗೆ ಕ್ಲೀನ್ ಚಿಟ್ ಸಿಕ್ಕಿದರೆ ನೀವು ಮುಂದುವರಿಬಹುದು ಎಂದು ಹೇಳಿದರು. ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ, ಎರಡು ವರ್ಷಗಳಿಂದ ಗ್ರಾಮ ಸಡಕ್ ಯೋಜನೆಯಲ್ಲಿ ಗ್ರಾಮೀಣ ಪ್ರದೇಶಗಳ ರಸ್ತೆಗಳ ಗುಂಡಿ ಮುಚ್ಚುವ ಕೆಲಸಗಳಾಗಬೇಕಾಗಿದ್ದು ಹಲವು ಅಭಿವೃದ್ಧಿ ಕೆಲಸಗಳಿಗೆ ಯೋಜನೆ ರೂಪಿಸಲಾಗಿದೆ ಎಂದು ಮೈಸೂರು ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ. ಕೊಡಗು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮೊದಲ ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ (ದಿಶಾ) ಸಭೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. 

ಬೆಳಗೊಳ ಮತ್ತು ಕುಶಾಲನಗರ ನಡುವೆ ಆಗಬೇಕಾಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮತ್ತು ಬೆಳಗೊಳ ಹಾಗೂ ಕುಶಾಲನಗರದ ನಡುವಿನ ರೈಲು ಯೋಜನೆ ಕಾಮಗಾರಿಗೆ ಆದಷ್ಟು ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಹೇಳಿದರು. ಜಿಲ್ಲೆಯಲ್ಲಿ 150 ಕ್ಕೂ ಹೆಚ್ಚು ತೊಂದರೆ ಕೊಡುವ ಕಾಡಾನೆಗಳೆಂದು ಗುರುತ್ತಿಸಲಾಗಿದೆ. ಅವುಗಳನ್ನು ಸ್ಥಳಾಂತರ ಮಾಡುವ ಅಥವಾ ಅವುಗಳಿಗೆ ಪುರ್ವಸತಿ ಕಲ್ಪಿಸುವ ಬಗ್ಗೆ ಚಿಂತಿಸಲಾಗುತ್ತಿದೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. 

Dharwad: ನಕಲಿ ವೈದ್ಯನ ವಿರುದ್ಧ ಎಫ್‌ಐಆರ್ ದಾಖಲು: ಆಸ್ಪತ್ರೆ ಸೀಜ್ ಮಾಡಿದ ಡಿಎಚ್ಓ ತಂಡ

ವನ್ಯಜೀವಿ ತಜ್ಞರೊಂದಿಗೆ ಸಮಾಲೋಚಿಸಿ ಆನೆಗಳ ಪುನರ್ವಸತಿಗೆ ಯೋಜನೆ ರೂಪಿಸುವಂತೆ ಸೂಚಿಸಲಾಗಿದೆ. ಎಲ್ಲೆಲ್ಲಾ ರೈಲ್ವೇ ಕಂಬಿಗಳನ್ನು ಉಪಯೋಗಿಸಿ ಬ್ಯಾರಿಕೇಡ್ ಅಳವಡಿಸಿರುವ ಕಡೆಗಳಲ್ಲಿ ಆನೆಗಳು ಕಾಡಿನಿಂದ ಹೊರಗೆ ಬರುತ್ತಿಲ್ಲ. ಇಂತಹ ಶಾಶ್ವತ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದಿದ್ದಾರೆ. ಒಟ್ಟಿನಲ್ಲಿ ಮೊದಲ ದಿಶಾ ಸಭೆಯಲ್ಲಿ ಸೈಲೆಂಟ್ ಆಗಿಯೇ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಸಂಸದರು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕೆಲಸ ಮಾಡಲು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯನ್ನು ಕೊಡುತ್ತಾರೆಯೇ ನೋಡಬೇಕು.

click me!