ಬಿಬಿಎಂಪಿಯಿಂದ ವಿಧಾನಸೌಧಕ್ಕೆ ಸಿಗುತ್ತಾ ಪ್ರಮೋಷನ್..!?

By Girish Goudar  |  First Published Apr 2, 2023, 12:20 PM IST

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಜನರ ಪ್ರೀತಿಗೆ ಪಾತ್ರರಾಗಿದ್ದ ಈ  ಜನಪ್ರತಿನಿಧಿಗಳು ಶಾಸಕರಾಗುವ ಆಕಾಂಕ್ಷಿಗೆ ರಾಷ್ಟ್ರೀಯ ಪಕ್ಷಗಳು ಟಿಕೆಟ್ ನೀಡಿದಲ್ಲಿ ಇವರಲ್ಲಿ ಕೆಲವರು ಗೆಲ್ಲುವ ಸಾಧ್ಯತೆ ಹೆಚ್ಚಿದೆ.
 


ಬೆಂಗಳೂರು(ಏ.02):  ಬಿಬಿಎಂಪಿಯ ಅರ್ಧ ಡಜನ್ ಸದಸ್ಯರ ನಡಿಗೆ ವಿಧಾನಸಭೆ ಕಡೆಗೆ ನೆಟ್ಟಿದೆ.‌ ಬಿಬಿಎಂಪಿ ಅಂಗಳದಲ್ಲೀಗ ಕಾರ್ಪೋರೇಟರ್‌ಗಳ ಕಸರತ್ತು ಕುತೂಹಲ ತೀವ್ರಗೊಳಿಸಿದೆ. ವಿಧಾನಸಭೆ ಪ್ರವೇಶಿಸಲು ಬಿಬಿಎಂಪಿಯ 6 ಸದಸ್ಯರ ಕಸರತ್ತು ಶುರುಮಾಡಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಯ ತಲಾ ಮೂರು ಸದಸ್ಯರಿಂದ ವಿಧಾನಸಭೆ ಟಿಕೆಟ್‌ಗೆ ಕಸರತ್ತು ಜೋರಾಗಿದ್ದು ತಮ್ಮ ಪಕ್ಷದ ನಾಯಕರುಗಳ ಸಪೋರ್ಟ್‌ನೊಂದಿಗೆ ಹೈಕಮಾಂಡ್ ಮನ ಓಲೈಕೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ಗಳು ಹಾಗೂ ಮಾಜಿ ಮೇಯರ್‌ಗಳಿಂದ ಕಸರತ್ತು ಹೆಚ್ಚಾಗಿದೆ. 

Tap to resize

Latest Videos

ಇನ್ನು 6 ರಲ್ಲಿ ಮೂವರು ಮಾಜಿ ಮೇಯರ್‌ಗಳಾಗಿದ್ದು ಈ ಹಿಂದೆ ಬಿಬಿಎಂಪಿಯಲ್ಲಿ ಮೇಯರ್ ಹುದ್ದೆ ಅಲಂಕರಿಸಿ ಜನರಿಗೆ ಹತ್ತಿರವಾಗಿದ್ದ ಸ್ಥಳೀಯ ಜನಪ್ರತಿನಿಧಿಗಳಾಗಿದ್ದಾರೆ. ಇದೀಗ ವಿಧಾನಸಭೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವ ಮೊದಲ ಅಸ್ತ್ರವಾಗಿ ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಕೃಷ್ಣರಾಜದಲ್ಲಿ ಯಾರು ರಾಜ?: ಹಳೇ ಹುಲಿಗಳ ನಡುವೆ ಟಿಕೆಟ್‌ಗಾಗಿ ಹೊಸಬರ ಪೈಪೋಟಿ..!

ಯಾರ ಕಸರತ್ತು .. ಯಾವ ಪಕ್ಷದಿಂದ .. ಯಾವ ಕ್ಷೇತ್ರಗಳಲ್ಲಿ .. ಅನ್ನೋದನ್ನ ನೋಡೋದಾದ್ರೆ.

ಸರ್ವಜ್ಞನಗರದಿಂದ ಬಿಜೆಪಿ ಮಾಜಿ ಕಾರ್ಪೊರೇಟರ್ ಪದ್ಮನಾಭ ರೆಡ್ಡಿಗೆ ಟಿಕೆಟ್ ಬಹುತೇಕ ಖಚಿತವಾಗಿದ್ದು ಸ್ಪರ್ಧೆಗೆ ಸಿದ್ಧತೆ ನಡೆಸಿದರೆ. ಈ ಹಿಂದೆಯೂ ಸಹ  ಕೆ.ಜೆ ಜಾರ್ಜ್‌ ವಿರುದ್ಧ ಪದ್ಮನಾಭ ರೆಡ್ಡಿ ಸ್ಪರ್ದಿಸಿದ್ರು, ಇನ್ನೂ ಜಯನಗರದಿಂದ ಬಿಜೆಪಿ ಅಭ್ಯರ್ಥಿಯಾಗಲು ಎನ್.ಆರ್ ರಮೇಶ್ ಸಿದ್ಧತೆ ನಡೆಸಿದ್ದಾರೆ. 

ಕಾಂಗ್ರೆಸ್ ವಿರುದ್ಧ ಅಕ್ರಮಗಳ ಬಯಲಿಗೆಳೆಯುವಲ್ಲಿ ಸದಾ ಮುಂದಿರುವ‌ ಎನ್.ಆರ್. ರಮೇಶ್ ಈ ಬಗ್ಗೆ ಪಕ್ಷದ ವರಿಷ್ಠರೊಟ್ಟಿಗೆ ಮಾತುಕತೆ ನಡೆಸಿದ್ದು, ನನ್ನ ಪಕ್ಷ ನಿಷ್ಟೆ ಹಾಗೂ ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟವನ್ನು ಪಕ್ಷ ಗುರುತಿಸಿದ್ದು ನನಗೆ ಟಿಕೆಟ್ ಸಿಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಶಾಂತಿನಗರದಿಂದ ಬಿಜೆಪಿ ಟಿಕೆಟ್‌ಗೆ ಮಾಜಿ ಮೇಯರ್ ಗೌತಮ್ ಪ್ರಯತ್ನ ನಡೆಸುತ್ತಿದ್ದಾರೆ, ಅಚ್ಚರಿ ರೀತಿಯಲ್ಲಿ ಮೇಯರ್ ಆಗಿದ್ದ ಗೌತಮ್ ಕುಮಾರ್ ಈಗಲೂ ಅಚ್ಚರಿ‌ ರೀತಿಯಲ್ಲಿ ಧಾಂತಿ ನಗರದಿಂದ ಟಿಕೆಟ್ ಪಡೆಯುವ  ಸಾಧ್ಯತೆ ಇದೆ. ಇನ್ನು ಕಾಂಗ್ರೆಸ್ ನಲ್ಲಿಯೂ ಬಿಬಿಎಂಪಿ ಯಿಂದ ವಿಧಾನ ಸೌಧಕ್ಕೆ ದಾಪುಗಾಲಿಡಲು ಸದಸ್ಯರು ಸಿದ್ದವಾಗಿದ್ದಾರೆ, ಪ್ರಮುಖವಾಗಿ  ಚಿಕ್ಕಪೇಟೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ  ಮಾಜಿ ಮೇಯರ್  ಗಂಗಾಂಬಿಕ ಮಲ್ಲಿಕಾರ್ಜುನ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬೆಂಗಳೂರು ನಗರದಿಂದ ಲಿಂಗಾಯತರಿಗೊಂದು ಟಿಕಟ್‌ಗಾಗಿ ಪಟ್ಟು ಹಿಡಿದಿರುವ ಗಂಗಾಂಬಿಕೆಗೆ ಕಾಂಗ್ರೆಸ್‌ನ ಪ್ರಮುಖ ಮುಖಂಡರುಗಳ ಸಹಕಾರ ಸಹ ಇದೆ. 

ಸಿವಿ ರಾಮನ್ ನಗರದಿಂದ ಕಾಂಗ್ರೆಸ್ ಟಿಕೆಟ್‌ಗಾಗಿ ಮಾಜಿ ಮೇಯರ್ ಸಂಪತ್ ರಾಜ್ ಕಸರತ್ತು ಜೋರಾಗಿದೆ. ಕಳೆದ ಬಾರಿ ಸಿವಿ ರಾಮನ್ ನಗರದಿಂದ ಸ್ಪರ್ದಿಸಿ ಸೋತ್ತಿದ್ದ ಸಂಪತ್ ರಾಜ್. ಈ ಬಾರಿ ಟಿಕೆಟ್ ಆಕಾಂಕ್ಷೆಯಿಂದ ಕ್ಷೇತ್ರದಲ್ಲಿ ಜನಪರ ಕೆಲಸಗಳನ್ನು ಮಾಡುತ್ತ ಟಿಕೆಟ್ ಗಾಗಿ ಕಸರತ್ತು ಮಾಡುತ್ತಿದ್ದಾರೆ. 

Karnataka Assembly Elections 2023: ಬೆಂಗಳೂರಿನ ನಿವಾಸಿಗಳಿಂದ ಚುನಾವಣೆ ಬಹಿಷ್ಕಾರ..!

ಮಹಾಲಕ್ಷ್ಮೀ ಲೇಔಟ್ ನಿಂದ ಕೈ ಟಿಕೆಟ್ ಕೇಶವಮೂರ್ತಿಗೆ ಬಹುತೇಕ ಖಚಿತವಾಗಿದ್ದು, ಸಚಿವ ಗೋಪಾಲಯ್ಯ ವಿರುದ್ಧ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೇಶವಮೂರ್ತಿ ಪ್ರಚಾರ ಆರಂಭಿಸಿದ್ದಾರೆ. 

ಒಟ್ಟಾರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಜನರ ಪ್ರೀತಿಗೆ ಪಾತ್ರರಾಗಿದ್ದ ಈ  ಜನಪ್ರತಿನಿಧಿಗಳು ಶಾಸಕರಾಗುವ ಆಕಾಂಕ್ಷಿಗೆ ರಾಷ್ಟ್ರೀಯ ಪಕ್ಷಗಳು ಟಿಕೆಟ್ ನೀಡಿದಲ್ಲಿ ಇವರಲ್ಲಿ ಕೆಲವರು ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!