ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಂತಿಮ ಕಸರತ್ತು ದೆಹಲಿ ಮಟ್ಟದಲ್ಲಿ ನಡೆಯುತ್ತಿದೆ. ಬಹುತೇಕ ಅಧ್ಯಕ್ಷ ಪಟ್ಟ ಡಿ.ಕೆ ಶಿವಕುಮಾರ್ ಪಾಲಾಗುವ ಸಾಧ್ಯತೆ ಇದೆ. ಡಿಕೆಶಿಗೆ ಕೆಪಿಸಿಸಿ ಗಾದಿ ನೀಡಲು ಹೈಕಮಾಂಡ್ ಒಪ್ಪಿಗೆ ಸೂಚಿಸಿದ್ದು ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ. ಹಾಗಾದ್ರೆ ಡಿಕೆಶಿಗೆ ಕೆಪಿಸಿಸಿ ಪಟ್ಟ ಒಲಿಯಲು ಕಾರಣಗಳೇನು..?
ಬೆಂಗಳೂರು, (ಜ.17): ಕೆಪಿಸಿಸಿ ಅಧ್ಯಕ್ಷ ಆಯ್ಕೆ ಅಂತಿಮವಾಗಿದ್ದು, ಅಧಿಕೃತ ಪ್ರಕಟಣಯೊಂದೇ ಬಾಕಿ ಇದೆ. ಕಾರ್ಯಧ್ಯಕ್ಷರ ನೇಮಕ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷರ ಹೆಸರು ಅಧಿಕೃತವಾಗಿ ಘೋಷಣೆ ಮಾಡಲು ವಿಳಂಬವಾಗುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ.
ಸಿದ್ದರಾಮಯ್ಯ ಅವರು ತಮ್ಮ ಆಪ್ತರಾದ ಎಂಬಿ ಪಾಟೀಲ್‌ಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಕೊಡಿಸಲು ಸಾಕಷ್ಟು ಶ್ರಮವಹಿಸಿದರು. ಸಾಲದಕ್ಕೆ ದೆಹಲಿಯಲ್ಲೂ ಸಹ ಹೈಕಮಾಂಡ್ ಮುಂದೆ ತಮ್ಮ ಎಂಬಿ ಪಾಟೀಲ್ ಪರ ಬ್ಯಾಟಿಂಗ್ ಮಾಡಿದ್ದರು.
ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ್ರೆ ಕರ್ನಾಟಕ ಕಾಂಗ್ರೆಸ್‌ಗೆ ಆಗುವ 8 ಲಾಭ-ನಷ್ಟಗಳು..!
ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ್ದ ಸಿದ್ದರಾಮಯ್ಯ, ತಮ್ಮ ಬೆಂಬಲಿಗರನ್ನೇ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿ ಎಂಬ ಮನವಿಯನ್ನು ಸಲ್ಲಿಸಿದ್ದರು.
ವೈಯಕ್ತಿಕ ವರ್ಚಸ್ಸು, ಜಾತಿ, ಕಾರ್ಯಕ್ಷಮತೆ ನೋಡಿ ಆಯ್ಕೆ ಮಾಡಬೇಕು. ಒಕ್ಕಲಿಗರಿಗೆ ಕೊಡಬೇಕೆನಿಸಿದರೆ ಕೃಷ್ಣಭೈರೇಗೌಡ ಅವರಿಗೆ ನೀಡಿ, ಇನ್ನು ಲಿಂಗಾಯತರ ಪೈಕಿ ಎಂ.ಬಿ.ಪಾಟೀಲ್, ಈಶ್ವರ ಖಂಡ್ರೆಗೆ ಸ್ಥಾನ ನೀಡಿ. ಈ ಮೂಲಕ ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡಿದಂತೆ ಆಗುತ್ತದೆ ಎಂದು ಸಿದ್ದರಾಮಯ್ಯ ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಳ್ಳುವ ಮೂಲಕ ಪರೋಕ್ಷವಾಗಿ ಡಿಕೆ ಶಿವಕುಮಾರ್ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಆದ್ರೆ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಿದ್ದರಾಮಯ್ಯನವರ ಮನವಿಯನ್ನು ಕಸದಬುಟ್ಟಿಗೆ ಎಸೆದಿದ್ದು, ಡಿಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕಟ್ಟಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಕೆಪಿಸಿಸಿ ಅಧ್ಯಕ್ಷ ಹುದ್ದೆ: ಡಿಕೆಶಿ ಸುತ್ತ 4 ಗೋಡೆ ಕಟ್ಟಿದ ಸಿದ್ದರಾಮಯ್ಯ
ಇಷ್ಟೆಲ್ಲ ಸಿದ್ದು ವಿರೋಧದ ನಡುವೆಯೂ ಡಿಕೆಶಿಗೆ KPCC ಅಧ್ಯಕ್ಷ ಒಲಿಯಲು 5 ಕಾರಣಗಳನ್ನು ನೋಡುವುದಾದರೆ, ಅವುಗಳು ಈ ಕೆಳಗಿನಂತಿವೆ.
1. ಎಲ್ಲರನ್ನೂ ಕರೆದೊಯ್ಯುವ ನಾಯಕತ್ವ ಗುಣ
ಹೌದು...ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್. ಮಿನಿ ಬ್ಯಾಟಲ್‌ಗಳ ಗೆಲುವಿನ ಚತುರ. ಕರ್ನಾಟಕದ ಪವರ್‌ಫುಲ್ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದಾರೆ. ಪಕ್ಷದಲ್ಲಿ ಆಗುವ ಸಣ್ಣ-ಪಟ್ಟ ಭಿನ್ನಾಭಿಪ್ರಯಾಗಳನ್ನು ಶಮನ ಮಾಡುವ ಶಕ್ತಿ ಡಿಕೆಶಿ ಅವರಿಗಿದೆ. ಈ ಇದನ್ನು ಹಲವು ಬಾರಿ ಪ್ರೂವ್ ಮಾಡಿ ತೋರಿಸಿದ್ದೂ ಉಂಟು. ಈ ಹಿನ್ನೆಲೆಯಲ್ಲಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದ ಸಿಗಲು ಇದೊಂದು ಪ್ರಮಖ ಕಾರಣವಾಗಿದೆ.
2. ಪಕ್ಷ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಪಾರ್ಟಿ ನೆರವಿಗೆ ದೃಢವಾಗಿ ನಿಂತಿದ್ದು
ಸಾರ್ವತ್ರಿಕ ಚುನಾವಣೆ ಅಥವಾ ಉಪ ಚುನಾವಣೆಗಳಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಪಕ್ಷದ ಪರ ಕೆಲಸ ಮಾಡುತ್ತಾರೆ. ಅಲ್ಲದೇ ಪಕ್ಷ ಸಂಕಷ್ಟಕ್ಕೆ ಸಿಲುಕಿದಾಗ ನೆರವಿಗೆ ನಿಂತಿದ್ದಾರೆ. ಒಂದು ಉದಾಹರಣೆ ನೋಡುವುದಾರೆ, ಗುಜರಾತ್ ರಾಜ್ಯಸಭೆ ಚುನಾವಣೆ ವೇಳೆ ತಮ್ಮ ಪಕ್ಷದ ನಾಯಕರುಗಳನ್ನು ರೇಸಾರ್ಟ್‌ನಲ್ಲಿ ಇಟ್ಟು ಪಕ್ಷಕ್ಕೆ ನೆರವಾಗಿದ್ರು.
3. ಪಕ್ಷವನ್ನು ಸೋಲಿನ ಸಂಕಷ್ಟದಿಂದ ಪಾರು ಮಾಡಬಹುದು ಎಂಬ ನಂಬಿಕೆ
ಡಿಕೆಶಿ ಓರ್ವ ಮಾಸ್ ಲೀಡರ್ ಎನಿಸಿಕೊಕೊಂಡಿದ್ದು, ರಾಜ್ಯದೆಲ್ಲೆಡೆ ಅವರ ಅಭಿಮಾನಿಗಳು ಇದ್ದಾರೆ. ಅಷ್ಟೇ ಅಲ್ಲದೇ ಸಂದರ್ಭಕ್ಕೆ ತಕ್ಕಂತೆ ಪಕ್ಷಕ್ಕೆ ನೆರವಾಗಬಲ್ಲ ನಾಯಕ.
4. ಇತ್ತೀಚಿನ ಬೆಳವಣಿಗೆಯಿಂದ ಡಿಕೆಶಿಗೆ ಸಿಕ್ಕಿರುವ ಮಾಸ್ ಲೀಡರ್
ಡಿಕೆಶಿ ಇತ್ತೀಚೆಗೆ ಮತ್ತಷ್ಟು ಪವರ್ ಫುಲ್ ನಾಯಕರಾಗಿದ್ದಾರೆ. ಇಡಿ ಸಂಕಷ್ಟಕ್ಕೆ ಸಿಲುಕಿದ್ದ ಡಿಕೆಶಿ ಜೈಲಿಗೆ ಹೋಗಿ ಬಂದಿದ್ದಾರೆ. ಅದು ಕೇಂದ್ರ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣದಿಂದ ಅಂತ ಜನರಲ್ಲಿ ಭಾವನೆ ಮೂಡಿದ್ದು, ಡಿಕೆಶಿ ಬೆಂಬಲಿಕ್ಕೆ ನಿಂತಿದ್ದಾರೆ. ಅಷ್ಟೇ ಅಲ್ಲದೇ ದ್ವೇಷದ ರಾಜಕೀಯಕ್ಕೆ ಬಲಿಯಾಗಿದ್ದಾರೆ ಎನ್ನುವ ಅನುಕಂಪವನ್ನು ಗಿಟ್ಟಿಸಿಕೊಂಡಿದ್ದಾರೆ.
5. ಡಿಕೆಶಿ ಪರ ಕಾಂಗ್ರೆಸ್ ನಾಯಕರ ಒಮ್ಮತದ ಅಭಿಪ್ರಾಯ
ಡಿಕೆ ಬಾಸ್‌ಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಒಲಿಯಲು ಇದೊಂದು ಬಹಳ ಪ್ರಮುಖವಾದ ಕಾರಣ. ಲೋಕಸಭೆ ಹಾಗೂ ವಿಧಾನಸಭೆ ಬೈ ಎಲೆಕ್ಷನ್‌ನಲ್ಲಿ ಕಾಂಗ್ರೆಸ್ ಹೀನಾಯ ಸೋತಿರುವುದಕ್ಕೆ ಸಿದ್ದರಾಮಯ್ಯನವರ ಸರ್ವಾಡಳಿ ಎಂದು ಮೂಲ ಕಾಂಗ್ರೆಸ್ಸಿಗರು ಮುನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸಿದ್ದರಾಮಯ್ಯ ಅವರು ಯಾರ ಮಾತನ್ನು ಕೇಳದಿರುವುದರಿಂದ ಹಿರಿಯ ನಾಯಕರು ಡಿಕೆಶಿ ಪರ ಬ್ಯಾಟಿಂಗ್ ಮಾಡಿದ್ದಾರೆ.