ಕನಕ ಭವನಕ್ಕೆ 5 ಲಕ್ಷ ಅನುದಾನ ನೀಡುವೆ: ಎಚ್‌.ವಿಶ್ವನಾಥ್‌

By Kannadaprabha News  |  First Published Jan 28, 2024, 9:03 PM IST

ಕನಕ ಭವನಕ್ಕೆ ಐದು ಲಕ್ಷ ಅನುದಾನ ನನ್ನ ನಿಧಿಯಲ್ಲಿ ಕೊಡುತ್ತೇನೆ ಎಂದು ಮಾಜಿ ಸಚಿವ ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಅಡಗೂರು ಎಚ್‌ ವಿಶ್ವನಾಥ್‌ ಘೋಷಿಸಿದರು.


ಗುಂಡ್ಲುಪೇಟೆ (ಜ.28): ಕನಕ ಭವನಕ್ಕೆ ಐದು ಲಕ್ಷ ಅನುದಾನ ನನ್ನ ನಿಧಿಯಲ್ಲಿ ಕೊಡುತ್ತೇನೆ ಎಂದು ಮಾಜಿ ಸಚಿವ ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಅಡಗೂರು ಎಚ್‌ ವಿಶ್ವನಾಥ್‌ ಘೋಷಿಸಿದರು. ಪಟ್ಟಣದಲ್ಲಿ ಕನಕದಾಸ ಜಯಂತಿ ಆಚರಣಾ ಸಮಿತಿ ಆಯೋಜಿಸಿದ್ದ ಕನಕದಾಸ ಜಯಂತಿ ಮಹೋತ್ಸವ ಸಮಾರಂಭದಲ್ಲಿ ಕನಕದಾಸರಿಗೆ ಪುಷ್ಪಾರ್ಚನೆ ನೆರವೇರಿಸಿದ ಬಳಿಕ ಮಾತನಾಡಿ ನಾನು ಕೊಡುತ್ತಿರುವುದು ಜನರ ತೆರಿಗೆಯ ಹಣ ಎಂದರು. ಇದು ಶಾಸಕ, ಸಂಸದ, ವಿಪ ಸದಸ್ಯರ ಹಣವಲ್ಲ ಜನರ ತೆರಿಗೆಯ ಹಣವನ್ನು ಕೊಡುತ್ತೇನೆ. ನಮಗೊಂದು ಪತ್ರ ಕೊಡಿ ೫ ಲಕ್ಷ ಕೊಡುತ್ತೇನೆ ಎಂದು ಹೇಳಿದರು.

ರಾಜ್ಯದಲ್ಲಿ ೩೨ ಜಯಂತಿಗಳು, ಹಬ್ಬ, ಶನಿವಾರ, ಭಾನುವಾರಗಳ ರಜೆಯಲ್ಲೇ ಸರ್ಕಾರ ಕಾಲ ಕಳೆದರೆ ರಾಜ್ಯದ ಅಭಿವೃದ್ಧಿ, ಆಡಳಿತಕ್ಕೆ ಸಮಯವೇ ಇಲ್ಲ. ಹಾಗಾಗಿ ಎಲ್ಲಾ ವಿಭೂತಿ ಪುರುಷರ ಜಯಂತಿಗಳನ್ನು ಆಚರಿಸಿ ಆಡಳಿತ ನಡೆಸಿ ಆಗ ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದು ಮಾಜಿ ಸಚಿವ ಅಡಗೂರು ವಿಶ್ವನಾಥ್‌ ಸರ್ಕಾರಕ್ಕೆ ಸಲಹೆ ನೀಡಿದರು.

Tap to resize

Latest Videos

undefined

ಕನಕ ಭವನಕ್ಕೆ ಸಿಎಂ ಸಿದ್ದರಾಮಯ್ಯ 75 ಲಕ್ಷ ನೀಡಲು ಒಪ್ಪಿದ್ದಾರೆ: ಶಾಸಕ ಗಣೇಶ್‌ ಪ್ರಸಾದ್‌

ದೇಶದಲ್ಲಿ ಜಯಂತಿಗಳಿಗೇನು ಬರವಿಲ್ಲ, ನಡೆಯುತ್ತಿವೆ ಆದರೆ ಮರುದಿನ ಜಯಂತಿಯ ಅರ್ಥವೇ ಆಗಲ್ಲ ಹಾಗಾಗಿ ಜಯಂತಿಗಳ ಆಚರಣೆಗೆ ಪೂರ್ವ ಭಾವಿ ಸಭೆ ದಿನ ಕೆಲಸವಿಲ್ಲ. ಜಯಂತಿ ರಜೆ ಘೋಷಣೆ ಆದರೆ ಆಡಳಿತ ಹಾಗೂ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದರು. ವಿಭೂತಿ ಪುರುಷರು ಮನುಷ್ಯರು ಹೇಗೆ ಬದುಕಬೇಕು ಎಂಬ ಸಂದೇಶ ೧೨ ಮತ್ತು ೧೫ ನೇ ಶತಮಾನದಲ್ಲಿ ಹೇಳಿದ್ದಾರೆ. ಸ್ವಾತಂತ್ರ್ಯ ನಂತರ ಅಂಬೇಡ್ಕರ್‌ ಹೇಳಿದ್ದಾರೆ. ಹಾಗಾಗಿ ಜಯಂತಿಗಳು ಒಟ್ಟಿಗೆ ಆಚರಣೆ ಮಾಡಲಿ ಎಂದರು.

ರಾಜ್ಯ ಸರ್ಕಾರ ಸಂವಿಧಾನ ಅರಿಯಲು ಗ್ರಾಪಂ ಮಟ್ಟದಲ್ಲಿ ಅರಿವು ಮೂಡಿಸಲು ಮುಂದಾಗಿದೆ ಇದು ಸ್ವಾಗತಾರ್ಹ ಕ್ರಮ. ಸಂವಿಧಾನ ಜನಕ್ಕೆ ಅರ್ಥವಾಗುತ್ತಿಲ್ಲ ಅರ್ಥ ಮಾಡಿಕೊಳ್ಳಬೇಕು ಎಂದರು. ಶಾಲಾ, ಕಾಲೇಜು ಮಕ್ಕಳಿಗೆ ಅಪ್ಪ ಯಾವ ಪಕ್ಷ, ಯಾವ ಜಾತಿ, ಧರ್ಮ ಎಂಬುದು ಗೊತ್ತಿದೆ. ಆದರೆ ಜನಜಂತ್ರ ವ್ಯವಸ್ಥೆಯ ಬಗ್ಗೆ ಅರಿವಿಲ್ಲ. ನಾನು, ಸಿದ್ದರಾಮಯ್ಯ, ರೇವಣ್ಣ ಸೇರಿದಂತೆ ಹಲವರು ಸಮಾಜದ ಸಂಘಟನೆ ಮಾಡಿದ್ದೇವೆ. ಮಠ ಸ್ಥಾಪಿಸಿದ ಶ್ರೀಗಳು ಇದ್ದಾರೆ. ನಮಗೂ ವಯಸ್ಸಾಗಿದೆ ಮುಂದೆ ಸಂಘಟನೆ ಹಾಗೂ ಮಠದ ತೇರು ಎಳೆಯಲು ಯುವಕರು ಸಜ್ಜಾಗಬೇಕು ಎಂದರು.

ಕನಕ ಭವನಕ್ಕೆ 5ಲಕ್ಷ ಅನುದಾನ ನೀಡಿದ ವಿ.ಪ ಸದಸ್ಯ ಮರಿತಿಬ್ಬೇಗೌಡ: ಗುಂಡ್ಲುಪೇಟೆ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಕನಕ ಭವನಕ್ಕೆ ಈ ಹಿಂದೆ ಐದು ಲಕ್ಷ ಅನುದಾನ ನೀಡಿದ್ದೇ ಮತ್ತೆ ಐದು ಲಕ್ಷ ಅನುದಾನ ನೀಡುವುದಾಗಿ ವಿ.ಪ ಸದಸ್ಯ ಮರಿತಿಬ್ಬೇಗೌಡ ಘೋಷಿಸಿದರು. ಸಮಾರಂಭದಲ್ಲಿ ಮಾತನಾಡಿ ಶಾಸಕ ಎಚ್.‌ಎಂ.ಗಣೇಶ್‌ ಪ್ರಸಾದ್‌ ಅವರು ಕನಕ ಜಯಂತಿ ಮಹೋತ್ಸವಕ್ಕೆ ಹೆಚ್ಚಿನ ಸಹಕಾರ ನೀಡಿದ್ದಾರೆ. ಕನಕ ಭವನ ಅನುದಾನ ಕೊರತೆಯಿಂದ ಸ್ಥಗಿತಗೊಂಡಿದೆ ಹಾಗಾಗಿ ಐದು ಲಕ್ಷ ಅನುದಾನ ನೀಡುವೆ ಎಂದರು.

ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗಿರುವುದೇ ನನಗೆ ಹೆಮ್ಮೆ: ಸಚಿವ ಬೈರತಿ ಸುರೇಶ್‌

ಬಿಡಿಗಾಸು ಕೊಟ್ಟಿಲ್ಲ: ರಾಜ್ಯದಲ್ಲಿ ಭೀಕರ ಬರಗಾಲ ಬಂದಿದೆ. ಕೇಂದ್ರ ಸರ್ಕಾರ ಇಲ್ಲಿಯ ತನಕ ಬಿಡಿಗಾಸು ಕೊಟ್ಟಿಲ್ಲ. ರಾಜ್ಯ ಸರ್ಕಾರವೇ ಬರಗಾಲಕ್ಕೆ ಸಾಧ್ಯವಾದಷ್ಟು ಅನುದಾನ ನೀಡುತ್ತಿದೆ. ರಾಜ್ಯ ಸರ್ಕಾರ ರೈತರ ಸಾಲದ ಬಿಡ್ಡಿ ಮನ್ನಾ ಮಾಡಿದೆ ಅಸಲು ಮನ್ನಾ ಮಾಡಲಿ ಎಂದು ಒತ್ತಾಯಿಸಿದರು.

click me!