ಕಾಂಗ್ರೆಸ್‌ನ 5 ಗ್ಯಾರಂಟಿಗಳು ಐದೂ ವರ್ಷ ಇರುತ್ತೆ: ಸಂಸದ ಡಿ.ಕೆ.ಸುರೇಶ್‌

By Kannadaprabha News  |  First Published Aug 24, 2023, 11:57 AM IST

ಕಾಂಗ್ರೆಸ್‌ ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳು ಕೇವಲ ಲೋಕ​ಸಭಾ ಚುನಾವಣೆವರೆಗೂ ಎಂದು ವಿರೋಧಿಗಳು ವದಂತಿ ಹಬ್ಬಿ​ಸು​ತ್ತಿ​ದ್ದಾರೆ. ಐದು ವರ್ಷಗಳ ಕಾಲ ಐದು ಗ್ಯಾರಂಟಿಗಳು ಇರುತ್ತವೆ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದರು. 


ಮಾಗಡಿ (ಆ.24): ಕಾಂಗ್ರೆಸ್‌ ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳು ಕೇವಲ ಲೋಕ​ಸಭಾ ಚುನಾವಣೆವರೆಗೂ ಎಂದು ವಿರೋಧಿಗಳು ವದಂತಿ ಹಬ್ಬಿ​ಸು​ತ್ತಿ​ದ್ದಾರೆ. ಐದು ವರ್ಷಗಳ ಕಾಲ ಐದು ಗ್ಯಾರಂಟಿಗಳು ಇರುತ್ತವೆ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದರು. ತಾಲೂಕಿನ ಬ್ಯಾಲಕೆರೆ ಗ್ರಾಮದಲ್ಲಿ ಬೆಂಗಳೂರು ಸಹಕಾರಿ ಹಾಲು ಎನ್‌ಪಿಡಿಡಿ ಯೋಜನೆ ಅಡಿ ಹಾಲಸಿಂಗನಹಳ್ಳಿ, ಹರ್ತಿ, ತಗ್ಗೀಕುಪ್ಪೆ ಮತ್ತು ಬ್ಯಾಲಕೆರೆ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ನೂತನ ಬಿಎಂಸಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ವಿರೋಧ ಪಕ್ಷದವರು ಆ.15 ರವರೆಗೆ ಮಾತ್ರ ಶಕ್ತಿ ಯೋಜನೆ ಇರುತ್ತದೆ ಎಂದು ಅಪಪ್ರಚಾರ ಮಾಡಿದರು. ಶಕ್ತಿ ಯೋಜನೆಯ ಮೂಲಕ ಸಾರಿಗೆ ಬಸ್‌ಗಳಲ್ಲಿ ಈಗ ಮಹಿಳೆಯರು ಎಲ್ಲಾ ಕಡೆ ನಿರ್ಭೀತಿಯಾಗಿ ಪ್ರಯಾಣ ಮಾಡು​ತ್ತಿ​ದ್ದಾರೆ. ಖಾಲಿ ಓಡಾಡುತ್ತಿದ್ದ ಬಸ್‌ಗಳು ಈಗ ತುಂಬಿ ಹೋಗಿದ್ದು, ಲಾಭದಾಯಕವಾಗಿ ಸಂಸ್ಥೆಯಾಗಿ ನಡೆಯುತ್ತಿದೆ. ಅನ್ನಭಾಗ್ಯ ಯೋಜನೆ ಅಡಿ ಪ್ರತಿ ಕುಟುಂಬಕ್ಕೆ 5 ಕೆಜಿ ಅಕ್ಕಿಯ ಹಣವನ್ನು ನೀಡಲಾಗುತ್ತಿದೆ. ಈ ಹಿಂದೆ ಕಾಂಗ್ರೆಸ್‌ನ ಯುಪಿಎ ಸರ್ಕಾರ ಪ್ರತಿ ಕುಟುಂಬಕ್ಕೂ 5 ಕೆಜಿ ಅಕ್ಕಿ ಕೊಡಬೇಕೆಂಬ ಆದೇಶದ ಹಿನ್ನೆಲೆಯಲ್ಲಿ ಈಗಿನ ಕೇಂದ್ರ ಸರ್ಕಾರ ಯೋಜನೆಯನ್ನು ಮುಂದುವರಿಸಿದೆ ಎಂದ​ರು.

Tap to resize

Latest Videos

ಚಂದ್ರ​ಯಾ​ನ-3 ಯಶಸ್ವಿಗೆ ಮಂತ್ರಾ​ಲ​ಯದ ಸುಬು​ಧೇಂದ್ರ ತೀರ್ಥ​ರು ಹರ್ಷ

ಆ.30 ರಂದು ಗೃಹಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ ಬರಲಿದ್ದು ಮಾಗಡಿ ತಾಲೂಕಿನಲ್ಲಿ 48 ಸಾವಿರ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಪಂಚಾಯಿತಿವಾರು ಈ ಯೋಜನೆ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಹೇಳಲಾಗಿದೆ ಎಂದು ತಿಳಿ​ಸಿ​ದ​ರು. ನಮ್ಮ ಸರ್ಕಾರದ ಹೇಮಾವತಿ ಯೋಜನೆ ಈ ವರ್ಷ ಅನುಷ್ಠಾನ ಮಾಡಿ ಕೆರೆಗಳಿಗೆ ನೀರು ತುಂಬಿಸುತ್ತೇವೆ. ಎಕ್ಸೆರಸ್‌ ನಾಲೆ ಯೋಜನೆ ಅನುಷ್ಠಾನಕ್ಕೆ ಈಗಾಗಲೇ ಸರ್ಕಾರಕ್ಕೆ ತಿಳಿಸಲಾಗಿದ್ದು, ಯೋಜನೆ ಪೂರ್ಣಗೊಂಡ ಕೂಡಲೇ ಮಾಗಡಿ ತಾಲೂಕಿಗೆ ಹೇಮಾವತಿ ನೀರು ಬರಲಿದೆ. ವಿರೋಧಿಗಳು ಎಷ್ಟೇ ಟೀಕೆ ಮಾಡಲಿ ಈ ಯೋಜನೆ ಕಾಂಗ್ರೆಸ್‌ ಪಕ್ಷದ್ದು ಎಂಬುದನ್ನು ಮರೆಯಬೇಕಿಲ್ಲ ಎಂದು ತಿ​ಳಿ​ಸಿ​ದ​ರು.

ಬಮೂಲ್ ನಿರ್ದೇಶಕರಾದ ನರಸಿಂಮೂರ್ತಿ, ರಾಜಣ್ಣ, ದಿಶಾ ಸಮಿತಿ ಸದಸ್ಯ ಜೆಪಿ ಚಂದ್ರೇಗೌಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿಜಯಕುಮಾರ್‌, ಬ್ಯಾಲತ್ಕೆರೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಅಧ್ಯಕ್ಷ ನಟರಾಜು, ಯೋಗೇಶ್‌, ಹೊನ್ನ ಶಾಮಯ್ಯ, ಜಯರಾಮಯ್ಯ, ಬಮೂಲ್ ವ್ಯವಸ್ಥಾಪಕರಾದ ಡಾ.ಸುರೇಶ್‌, ಡಾ.ಶ್ರೀಧರ್‌ ಉಪ​ಸ್ಥಿ​ತ​ರಿ​ದ್ದ​ರು.

ಮಾಗಡಿ ತಾಲೂಕಿಗೆ ಎತ್ತಿನಹೊಳೆ ನೀರು: ನಾನು ಈ ಹಿಂದೆ ಅರ್ಕಾವತಿ ನದಿ ಸಂಪರ್ಕ ನಿರಂತರವಾಗಿ ನೀರು ಬರುವ ಕೆಲಸ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದೆ. ಅದರಂತೆ ನಾನು ಬದ್ಧನಾಗಿದ್ದು ಎತ್ತಿನಹೊಳೆ ಮೂಲಕ ತಿಪ್ಪಕೋನ್ನಳ್ಳಿ ಜಲಾಶಯ ಮತ್ತು ಮಂಚನಬೆಲೆ ಜಲಾಶಯಕ್ಕೆ ನೀರು ತುಂಬಿಸಿ ಅರ್ಕಾವತಿ ನದಿ ಹರಿಸುವ ಮೂಲಕ ಆ ಭಾಗದ ರೈತರ ಜೀವನ ಹಸನಾಗುವ ಕೆಲಸ ಮಾಡುತ್ತೇವೆ. ಮೊದಲ ಹಂತವಾಗಿ ನೂರು ದಿನದಲ್ಲಿ ಎತ್ತಿನಹೊಳೆ ಯೋಜನೆಗೆ ಚಾಲನೆ ದೊರೆಯಲಿದ್ದು ಇನ್ನೂ ಕೇವಲ 246 ಕಿ.ಮೀ ಪೈಪ್‌ಲೈನ್‌ ಮುಗಿದರೆ ಈ ಭಾಗದ ಜಲಾಶಯಗಳಿಗೆ ಎತ್ತಿನಹೊಳೆ ನೀರು ಬರಲಿದೆ ಎಂದು ಸಂಸದ ಡಿ.ಕೆ. ಸುರೇಶ್‌ ಹೇಳಿ​ದ​ರು.

ಸಚಿವ ಸಂಪುಟದಿಂದ ಈಶ್ವರ ಖಂಡ್ರೆ ಕೈಬಿಡಲು ಭಗವಂತ ಖೂಬಾ ಆಗ್ರಹ

ಅಭಿವೃದ್ಧಿ ಆಗದಿದ್ದರೆ ಮತ ನೀಡಬೇಡಿ: ಶಾಸಕ ಬಾಲಕೃಷ್ಣ ಮಾತನಾಡಿ, 20 ವರ್ಷಗಳ ಕಾಲ ಜೆಡಿಎಸ್‌ನಿಂದ ರಾಮನಗರ ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಾಗಲಿಲ್ಲ. ಈಗ ಐದು ವರ್ಷಗಳ ಕಾಲ ನಮಗೆ ಜನತೆ ಆಶೀರ್ವಾದ ನೀಡಿದ್ದಾರೆ. ರಾಮನಗರ ಜಿಲ್ಲೆಯನ್ನು ಅಭಿವೃದ್ಧಿ ಮಾಡಿ ನಿಮ್ಮ ಮುಂದೆ ಮತ ಕೇಳಲು ಬರುತ್ತವೆ. ಅಭಿವೃದ್ಧಿ ಮಾಡದಿದ್ದರೆ ನಮಗೆ ಮತ ನೀಡಬೇಡಿ ಎಂದು ಹೇಳಿದರು.

click me!