ರಾಜ್ಯದಲ್ಲಿ ಪ್ರಸ್ತುತ 46,149 ರೌಡಿ ಶೀಟರ್‌ಗಳಿದ್ದು, 2018ರಿಂದ ಈವರೆಗೆ 27,294 ಜನರನ್ನು ರೌಡಿ ಶೀಟರ್ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ವಿಧಾನ ಪರಿಷತ್ (ಜು.14): ರಾಜ್ಯದಲ್ಲಿ ಪ್ರಸ್ತುತ 46,149 ರೌಡಿ ಶೀಟರ್‌ಗಳಿದ್ದು, 2018ರಿಂದ ಈವರೆಗೆ 27,294 ಜನರನ್ನು ರೌಡಿ ಶೀಟರ್ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಕಾಂಗ್ರೆಸ್‌ನ ಅರವಿಂದ ಕುಮಾರ್ ಅರಳಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮಹಿಳೆಯರು, ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ಎಸಗುವವರು, ಬೆದರಿಸಿ, ದೌರ್ಜನ್ಯದಿಂದ ವಸೂಲಿ ಮಾಡುವವರು ಸೇರಿದಂತೆ ವಿವಿಧ ಕೃತ್ಯ ಎಸಗುವವರನ್ನು ರೌಡಿ ಪಟ್ಟಿಗೆ ಸೇರಿಸಲಾಗುತ್ತದೆ. ಅದೇ ರೀತಿ ರೌಡಿ ಶೀಟ್‌ನಲ್ಲಿದ್ದ ವ್ಯಕ್ತಿ 65 ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾಗಿದ್ದು, ನಿಷ್ಕ್ರಿಯನಾಗಿದ್ದಲ್ಲಿ, ರೌಡಿ ವ್ಯಕ್ತಿ ಸಂಪೂರ್ಣ ಅಂಗವಿಕಲ ಅಥವಾ ಮಾನಸಿಕ ಅಸ್ವಸ್ಥನಾಗಿದ್ದಲ್ಲಿ ಕಳೆದ 10 ವರ್ಷದಿಂದ ಯಾವುದೇ ಪ್ರಕರಣದಲ್ಲಿ ಭಾಗವಹಿಸದೇ ಸನ್ನಡೆಯಿಂದ ಇರುವುದು ಕಂಡು ಬಂದಲ್ಲಿ ರೌಡಿ ಶೀಟರ್ ಪಟ್ಟಿಯಿಂದ ಕೈ ಬಿಡಲಾಗುವುದು ಎಂದರು.
ಯಾವುದೇ ವ್ಯಕ್ತಿಯನ್ನು ರೌಡಿ ಶೀಟರ್‌ಗೆ ಸೇರಿಸಬೇಕಾದರೆ ಅಥವಾ ತೆಗೆಯಬೇಕಾದರೆ ಆತನ ಜಾತಿಯನ್ನು ಪರಿಗಣಿಸುವುದಿಲ್ಲ. ಪ್ರಸಕ್ತ ವರ್ಷ ಈವರೆಗೆ 8516 ಜನರನ್ನು ರೌಡಿ ಪಟ್ಟಿಯಿಂದ ಕೈ ಬಿಡಲಾಗಿದೆ. ಈ ಪೈಕಿ ಪ್ರಮುಖವಾಗಿ ಮಂಗಳೂರು ನಗರದಲ್ಲಿ 783, ಮಂಡ್ಯ ಜಿಲ್ಲೆ 613, ಉತ್ತರ ಕನ್ನಡ 530, ಹುಬ್ಬಳ್ಳಿ-ಧಾರವಾಡ 480, ದಾವಣಗೆರೆ 385, ಬೀದರ್ 368, ಹಾಸನ 360, ಬೆಂಗಳೂರು ಜಿಲ್ಲೆ 364 ಹಾಗೂ ಮೈಸೂರು ಜಿಲ್ಲೆಯಲ್ಲಿ 356 ರೌಡಿ ಶೀಟರ್ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಸಚಿವರು ವಿವರಿಸಿದರು.
ಹೈಕೋರ್ಟ್‌ನಲ್ಲಿ ಮೊಳಗಿದ ನಾಡಗೀತೆ: 5 ರಾಗಗಳಲ್ಲಿ ಹಾಡಿ ಕೋರ್ಟ್‌ನಲ್ಲಿ ವಾದ
ಮುಂಬಡ್ತಿಗೆ ಅರ್ಹತಾ ಸೇವೆ ಅವಧಿ ಇಳಿಕೆ ಅಸಾಧ್ಯ: ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಮುಂಬಡ್ತಿಗೆ ನಿಗದಿಪಡಿಸಿರುವ ಅರ್ಹತಾ ಸೇವೆಯನ್ನು ಐದು ವರ್ಷದಿಂದ ಮೂರು ವರ್ಷಕ್ಕೆ ಇಳಿಸಲು ವೃಂದ ಮತ್ತು ನೇಮಕಾತಿ ನಿಯಮದ ಪ್ರಕಾರ ಅಸಾಧ್ಯ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು. ಇಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ ಹಾಗೂ ಸಿಬ್ಬಂದಿಗಳು ಕಾರ್ಯನಿರ್ವಹಣೆ ಜ್ಞಾನ, ತಾಂತ್ರಿಕವಾಗಿ ನೈಪುಣ್ಯತೆ ಹಾಗೂ ಭೌತಿಕ ಮತ್ತು ಮಾನಸಿಕ ಸದೃಢವಾಗಿ ಪರಿಣತಿ ಹೊಂದಿರಬೇಕಾಗುತ್ತದೆ. ಆದ್ದರಿಂದ ಬಡ್ತಿ ವೇಳೆ ಅರ್ಹತಾ ಸೇವೆಯ ಅವಧಿಯನ್ನು ಕಡಿಮೆ ಮಾಡಲು ಆಗುವುದಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಭಿಪ್ರಾಯ ಪಟ್ಟಿದೆ ಎಂದು ವಿವರಿಸಿದರು.
ವೇಣುಗೋಪಾಲ್ ಹತ್ಯೆ ಧರ್ಮ, ರಾಜಕೀಯ ವ್ಯಾಪ್ತಿಗೆ ಬರಲ್ಲ: ಸಚಿವ ಮಹದೇವಪ್ಪ
ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸದರಿ ಇಲಾಖೆಯು ತಾಂತ್ರಿಕ ಇಲಾಖೆಯಾಗಿದೆ. ಪ್ರವಾಹ, ಭೂಕಂಪ, ಜ್ವಾಲಾಮುಖ ಮುಂತಾದ ಪ್ರಕೃತಿ ವಿಕೋಪಗಳು ಮಾನವ ಸೃಷ್ಟಿಸಿದ ಕೈಗಾರಿಕಾ ಮತ್ತು ರಾಸಾಯನಿಕ ವಿಪತ್ತುಗಳು, ಕಟ್ಟಡ ಕುಸಿತ, ರಸ್ತೆ ಅಪಘಾತಗಳು, ರೈಲು ದುರಂತಗಳು, ಅಗ್ನಿ ಅನಾಹುತಗಳ ಸಂದರ್ಭದಲ್ಲಿ ಆಸ್ತಿಪಾಸ್ತಿ ರಕ್ಷಿಸಲು ಜೀವ ಹಾನಿ ತಪ್ಪಿಸುವಂತಹ ಮಹತ್ವವಾದ ಇಲಾಖೆ ಇದಾಗಿದೆ. ಒಂದು ವೇಳೆ ಐದು ವರ್ಷದ ಅವಧಿಯಲ್ಲಿ ಪಡೆಯುವ ನೈಪುಣ್ಯತೆ ಇತ್ಯಾದಿಗಳನ್ನು ಮೂರು ವರ್ಷದಲ್ಲಿ ಪಡೆಯುವಂತಹ ಅವಕಾಶವಿದ್ದಲ್ಲಿ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.