ವೇಣುಗೋಪಾಲ್‌ ಹತ್ಯೆ ಧರ್ಮ, ರಾಜಕೀಯ ವ್ಯಾಪ್ತಿಗೆ ಬರಲ್ಲ: ಸಚಿವ ಮಹದೇವಪ್ಪ

ವೇಣುಗೋಪಾಲ್‌ ನಾಯಕ ಹತ್ಯೆ ಧರ್ಮ, ರಾಜಕೀಯ ವ್ಯಾಪ್ತಿ ಎರಡಕ್ಕೂ ಬರಲ್ಲ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು.

Venugopals killing does not come under the purview of religion politics Says HC Mahadevappa gvd

ಮೈಸೂರು (ಜು.14): ವೇಣುಗೋಪಾಲ್‌ ನಾಯಕ ಹತ್ಯೆ ಧರ್ಮ, ರಾಜಕೀಯ ವ್ಯಾಪ್ತಿ ಎರಡಕ್ಕೂ ಬರಲ್ಲ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು. ಮೈಸೂರು ಜಿಲ್ಲೆಯ ಟಿ. ನರಸೀಪುರದ ಪಟ್ಟಣದಲ್ಲಿರುವ ಮೃತ ವೇಣುಗೋಪಾಲ್‌ ನಿವಾಸಕ್ಕೆ ಗುರುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ವೇಣುಗೋಪಾಲ್‌ ಅವರು ಬ್ರಿಗೇಡ್‌ ಕಟ್ಟಿಕೊಂಡು ಹನುಮಂತ ಜಯಂತಿ ಚೆನ್ನಾಗಿಯೆ ಮಾಡಿದ್ದಾರೆ. ಹನುಮ ಜಯಂತಿಗೆ ಯಾರದೆ ಅಡ್ಡಿ, ತಕಾರರು ಇರಲಿಲ್ಲ ಎಂದು ಹೇಳಿದರು. ಹನುಮ ಜಯಂತಿ ವೇಳೆ ಬ್ರಿಗೇಡ್‌ನಲ್ಲಿದ್ದವರೇ ಬೈಕ್‌ ನಿಲ್ಲಿಸುವ ವಿಚಾರ, ಪೋಟೋ ವಿಚಾರಕ್ಕೆ ಜಗಳ ನಡೆದಿವೆ. ನಂತರ ಬ್ರಿಗೇಡ್‌ನಲ್ಲಿದ್ದವರೆ ಗಲಾಟೆ ಮಾಡಿಕೊಂಡಿದ್ದಾರೆ. ಆ ವೇಳೆ ಈ ಕೊಲೆಯಾಗಿದೆ. ಈ ಕೊಲೆಯಲ್ಲಿ ರಾಜಕೀಯ ಪಿತೂರಿ ಮಾಡಬಾರದು ಎಂದರು.

ಶಕ್ತಿ ಯೋಜನೆ ಎಫೆಕ್ಟ್: ಸವದತ್ತಿ ಯಲ್ಲಮ್ಮನಿಗೆ 1.37 ಕೋಟಿ ಕಾಣಿಕೆ

ಹಿಂದುತ್ವದ ಅಜೆಂಡಾ- ಬಿಜೆಪಿಯ ಸಂಚು: ಕೊಲೆಗೆ ಹಿಂದುತ್ವದ ಅಜೆಂಡಾ ಫಿಕ್ಸ್‌ ಮಾಡುವ ಸಂಚನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿ ಈ ಆಟ ಬಹಳ ಕಾಲ ನಡೆಯಲ್ಲ. ಎಲ್ಲದಕ್ಕೂ ಹಿಂದುತ್ವದ ಅಜೆಂಡಾ ಫಿಕ್ಸ್‌ ಮಾಡೋದು ಬಿಜೆಪಿ ಚಾಳಿ. ಹತ್ಯೆಯ ಪ್ರಕರಣದಲ್ಲಿ ನನ್ನ ಮಗನ ಹೆಸರನ್ನು ಬಿಜೆಪಿ ವಿನಾಕಾರಣ ಎಳೆದು ತರುತ್ತಿದೆ. ನನ್ನ ಮಗನ ಮೇಲೆ ಹೀಗೆ ಹಿಂದೆಯೂ ವಿನಾಕಾರಣ ಆರೋಪ ಮಾಡಿದ್ದರು. ಮಾಫಿಯಾ ಮಾಡಿದ್ದವರೇ ಹಿಂದೆಯೂ ಮಗನ ಮೇಲೆ ಕೇಸ್‌ ಕೊಟ್ಟಿದ್ದರು. ಬಿಜೆಪಿ ಅವರು ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ ಎಂದು ಅವರು ಕಿಡಿಕಾರಿದರು.

ಪೊಲೀಸರ ತನಿಖೆ ಸರಿ ದಾರಿಯಲ್ಲಿ ಇದೆ. ಘಟನೆಯಾದ 6 ಗಂಟೆಯೊಳಗೆ ಆರೋಪಿಗಳ ಬಂಧಿಸಿದ್ದಾರೆ. ಧರ್ಮದ ಕಲರ್‌ ಕೊಡಲು ಬಿಜೆಪಿ ಹೊರಟ್ಟಿದ್ದಾರೆ. ಈ ಕೊಲೆ ದೌರ್ಜನ್ಯ ಪ್ರಕರಣ ಅಲ್ಲ. ಆದರೆ, ಎಸ್ಸಿ ಎಸ್ಟಿಸಮುದಾಯದ ಯಾರಾದರೂ ಈ ರೀತಿ ಕೊಲೆಯಾದರೆ . 8 ಲಕ್ಷ ಪರಿಹಾರ ಕೊಡಬಹುದು. ಪರಿಹಾರದ ಮೊದಲ ಕಂತು . 4.12 ಲಕ್ಷ ಈಗ ಕೊಟ್ಟಿದ್ದೇವೆ. ಪ್ರಕರಣದ ಚಾಜ್‌ರ್‍ಶೀಟ್‌ ಆದ ಮೇಲೆ ಉಳಿದ ಹಣ ಕೊಡುತ್ತೇವೆ. ಕೊಲೆಯಾದ ವ್ಯಕ್ತಿಯ ಪತ್ನಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಕೊಡಿಸಲು ಯತ್ನಿಸುವುದಾಗಿ ಅವರು ಹೇಳಿದರು.

ಸೂಲಿಬೆಲೆ ಆರೋಪ ರಾಜಕೀಯ ಷಡ್ಯಂತ್ರ: ಟಿ. ನರಸೀಪುರದ ಯುವ ಬ್ರಿಗೇಡ್‌ ಕಾರ್ಯಕರ್ತ ವೇಣುಗೋಪಾಲ್‌ ನಾಯಕ್‌ ಹತ್ಯೆಗೂ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರ ಪುತ್ರ ಸುನಿಲ್‌ ಬೋಸ್‌ ಅವಿರಗೂ ಯಾವುದೇ ಸಂಬಂಧವಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಕ್ರವರ್ತಿ ಸೂಲಿಬೆಲೆ ಅವರು ಮಾಡುತ್ತಿರುವ ಆರೋಪಗಳು ರಾಜಕೀಯ ಷಡ್ಯಂತ್ರವಾಗಿದೆ ಎಂದು ದಲಿತ ಮಹಾಸಭಾ ಅಧ್ಯಕ್ಷ ಎಸ್‌. ರಾಜೇಶ್‌ ಕಿಡಿಕಾರಿದರು.

ಸುನಿಲ್‌ ಬೋಸ್‌ ಅವರ ಬೆಂಬಲಿಗರಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಕ್ಷುಲ್ಲಕ ಕಾರಣಗಳಿಗಾಗಿ ಈ ಕೊಲೆ ನಡದಿದೆ. ಈ ಹಿಂದೆಲ್ಲ ದಲಿತರ ಮೇಲೆ ಉತ್ತರ ಭಾರತ ಹಾಗೂ ರಾಜ್ಯದ ಇನ್ನಿತರ ಕಡೆ ದೌರ್ಜನ್ಯ ನಡೆದಾಗ ಚಕ್ರವರ್ತಿ ಸೂಲಿಬೆಲೆ ಏಕೆ ಸುಮ್ಮನಿದ್ದರು? ವೇಣುಗೋಪಾಲ್‌ ಕೊಲೆ ಪ್ರಕರಣ ಬಳಸಿಕೊಂಡು ಸುನಿಲ್‌ ಬೋಸ್‌ ಅವರ ದಮನಕ್ಕೆ ಬಿಜೆಪಿ ಯತ್ನಿಸುತ್ತಿದೆ. ಸತ್ಯಶೋಧನಾ ಸಮಿತಿ ಎಂಬ ಹೆಸರಿನಲ್ಲಿ ಈ ಪಿತೂರಿ ನಡೆಯುತ್ತಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಡಿಕೆಶಿ ವಿರುದ್ಧದ ತನಿಖೆ ತಡ ಆಗಿಲ್ಲ: ಹೈಕೋರ್ಟ್‌ನಲ್ಲಿ ಸಿಬಿಐ ವಾದ

ಕೊಲೆ ಆರೋಪಿಗಳಿಗೂ ಕೊಲೆಯಾದವರಿಗೂ ಬಹಳಷ್ಟುವರ್ಷಗಳಿಂದ ಸ್ನೇಹ ಸಂಬಂಧವಿತ್ತು. ಇದು ವೈಯಕ್ತಿಕ ವಿಚಾರದ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಆದರೆ, ಕಾಂಗ್ರೆಸ್‌ ನಾಯಕರ ವಿರುದ್ಧ ಬಿಜೆಪಿಯವರು ಆರೋಪ ಮಾಡುತ್ತಿರುವುದು ರಾಜಕೀಯ ದ್ವೇಷದಿಂದ ಕೂಡಿದೆ ಎಂದು ಅವರು ದೂರಿದರು. ಮುಖಂಡರಾದ ಕುರುಬಾರಹಳ್ಳಿ ಪ್ರಕಾಶ್‌, ಎಸ್‌.ಎ. ರಹೀಂ, ಜ್ಯೋತಿಪ್ರಕಾಶ್‌, ಪಿ. ರಾಜು ಇದ್ದರು.

Latest Videos
Follow Us:
Download App:
  • android
  • ios