'ಶೀಘ್ರದಲ್ಲೇ ಬಿಜೆಪಿಯಿಂದ ಕಾಂಗ್ರೆಸ್‌ಗೆ 40 ಶಾಸಕರು'

By Suvarna News  |  First Published Oct 3, 2021, 11:21 AM IST

*   ಬೆಳಗಾವಿಯ ಮೂರು ಜನ ಪ್ರಭಾವಿಗಳಿಗೆ ತಪ್ಪಿದ ಸಚಿವ ಸ್ಥಾನ
*   ದಿನದಿಂದ‌ ದಿನಕ್ಕೆ ಕಡಿಮೆಯಾಗುತ್ತಿರುವ ಮೋದಿ ವರ್ಚಸ್ಸು
*   ಬಿಜೆಪಿ ಪಕ್ಷದ ಮೇಲಿನ‌ ನಂಬಿಕೆ ಕಳೆದುಕೊಳ್ಳುತ್ತಿರುವ ಜನತೆ 


ಬೆಳಗಾವಿ(ಅ.03):  ಶೀಘ್ರದಲ್ಲೇ ಬಿಜೆಪಿಯಿಂದ(BJP) ಕಾಂಗ್ರೆಸ್‌ಗೆ(Congress) 40 ಶಾಸಕರು ಬರುತ್ತಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಮಾಜಿ ಶಾಸಕ ರಾಜು ಕಾಗೆ(Raju Kage) ಹೊಸ ಬಾಂಬ್ ಸಿಡಿಸಿದ್ದಾರೆ. 

ಇಂದು(ಭಾನುವಾರ) ಬೆಳಗಾವಿ(Belagavi) ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬೆಳಗಾವಿಯ ಮೂರು ಜನ ಪ್ರಭಾವಿಗಳಿಗೆ ಸಚಿವ ಸ್ಥಾನ ಕೈ ತಪ್ಪಿಸಲಾಗಿದೆ. ಇದರಿಂದ ಬಿಜೆಪಿಯಲ್ಲಿ ಈಗ ಆಂತರಿಕ ಕಚ್ಚಾಟ ಶುರುವಾಗಿದೆ. ಮೂವರು ಪ್ರಭಾವಿ ಶಾಸಕರೊಂದಿಗೆ ಒಟ್ಟು ನಲವತ್ತು ಜನ ಕಾಂಗ್ರೆಸ್‌ಗೆ ಬರಲಿದ್ದಾರೆ ಎಂದು ಹೇಳಿದ್ದಾರೆ. 

Tap to resize

Latest Videos

ಬೆಲೆ ಏರಿಕೆಯಿಂದ ಪ್ರಧಾನಿ ನರೇಂದ್ರ ಮೋದಿ(Narendra Modi) ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ(BS Yediyurappa) ರಾಜ್ಯದ ಜನ ಹಿಡಿಶಾಪ ಹಾಕುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ದಿನದಿಂದ‌ ದಿನಕ್ಕೆ ಕಡಿಮೆಯಾಗುತ್ತಿದೆ. ಬಿಜೆಪಿ ಪಕ್ಷದ ಮೇಲಿನ‌ ನಂಬಿಕೆಯನ್ನು ಜನರು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ನಮ್ಮ ಪಕ್ಷಕ್ಕೆ ಬಿಜೆಪಿಯಿಂದ 40 ಜನ ಶಾಸಕರು ಬರ್ತಾರೆ ಎಂದು ಕಾಗವಾಡ ಮಾಜಿ ಶಾಸಕ ರಾಜು ಕಾಗೆ ಬಾಂಬ್ ಸಿಡಿಸಿದ್ದಾರೆ. 

ಸಂಜಯ್‌ ಹೇಳಿಕೆ ವೈಯಕ್ತಿಕವೇ? ಪಕ್ಷದ ಹೇಳಿಕೆಯೇ?: ಹೆಬ್ಬಾಳಕರ್‌

ಕುತೂಹಲ ಮೂಡಿಸಿದ ಸತೀಶ ಜಾರಕಿಹೊಳಿ, ಸಚಿವ ನಿರಾಣಿ ಭೇಟಿ

ಕೆಲವು ದಿನಗಳ ಹಿಂದೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಖಾತೆ ಸಚಿವ ಮುರಗೇಶ ನಿರಾಣಿ(Murugesh Nirani) ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಒಂದೇ ಕಾರಿನಲ್ಲಿ ಸಂಚರಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಎಡೆಮಾಡಿ ಕೊಟ್ಟಿತ್ತು. 

ಬೆಳಗಾವಿ ನಗರದ ಖಾಸಗಿ ಹೊಟೇಲ್ಲೊಂದರಲ್ಲಿ ನಿರಾಣಿ ಮತ್ತು ಸತೀಶ ಜಾರಕಿಹೊಳಿ(Satish Jarkiholi) ಮಾತುಕತೆ ನಡೆಸಿದ್ದು, ಬಳಿಕ ಇಬ್ಬರೂ ನಾಯಕರು ಒಂದೇ ಕಾರಿನಲ್ಲಿ ಅಜ್ಞಾತ ಸ್ಥಳಕ್ಕೆ ತೆರಳಿದ್ದರು. ಯಾವ ವಿಚಾರವಾಗಿ ಚರ್ಚೆ ಮಾಡಿದ್ದಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ. ಅಲ್ಲದೇ, ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು. 

ಏತನ್ಮಧ್ಯೆ ರಾಜು ಕಾಗೆ ಹೊಸ ಬಾಂಬ್ ಸಿಡಿಸುವುದರ ಮೂಲಕ ರಾಜ್ಯ ರಾಜಕೀಯ ಹೊಸ ಸಂಚಲನಕ್ಕೆ ಕಾರಣವಾಗಿದೆ. ಬಿಜೆಪಿ ಯಾರ್ಯಾರು ಕಾಂಗ್ರೆಸ್‌ಗೆ ಬರ್ತಾರೆ ಎನ್ನುವುದನ್ನ ಕಾಲವೇ ಉತ್ತರಿಸಬೇಕಿದೆ.
 

click me!