RSSನ 4 ಸಾವಿರ IAS, IPS ಅಧಿಕಾರಿಗಳಾಗಿದ್ದಾರೆ: ಗುಡುಗಿದ ಕುಮಾರಸ್ವಾಮಿ

By Suvarna News  |  First Published Oct 5, 2021, 4:33 PM IST

* RSS ವಿರುದ್ದ ಗುಡುಗಿದ ಮಾಜಿ ಸಿಎಂ ಕುಮಾರಸ್ವಾಮಿ
* RSSನ 4 ಸಾವಿರ IAS, IPS ಅಧಿಕಾರಿಗಳಾಗಿದ್ದಾರೆ ಎಂದ ಕುಮಾರಸ್ವಾಮಿ
* ಜೆಡಿಎಸ್ ಕಾರ್ಯಾಗಾರದಲ್ಲಿ ಆರ್‌ಎಸ್‌ಎಸ್‌ ಬಗ್ಗೆ ಮಾಹಿತಿ ಬಿಚ್ಚಿಟ್ಟ ಎಚ್‌ಡಿಕೆ


ರಾಮನಗರ, (ಅ.05): 4 ಸಾವಿರ ಸಿವಿಲ್ ಸರ್ವೆಂಟ್‌ಗಳು ಬಿಜೆಪಿಯ ಕಾರ್ಯಕರ್ತರು ಇದ್ದಾರೆ. ಬಿಜೆಪಿ ಕಾರ್ಯಕರ್ತರು ಅಂದರೆ ಆರ್‌ಎಸ್‌ಎಸ್‌ (RSS) ಕಾರ್ಯಕರ್ತರು. ದೇಶದಲ್ಲಿ ಬಿಜೆಪಿಯ ಕಾರ್ಯಕರ್ತರು, 4 ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳಾಗಿದ್ದಾರೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ರಾಮನಗರದ ಬಿಡದಿ ಸಮೀಪ ಕೇತಗಾನಹಳ್ಳಿ ತೋಟದಮನೆಯಲ್ಲಿ ನಡೆದ ಜೆಡಿಎಸ್ ಕಾರ್ಯಾಗಾರದಲ್ಲಿ ಇಂದು (ಅ.04) ಮಾತನಾಡಿದ ಕುಮಾರಸ್ವಾಮಿ (HD Kumaraswamy),  ಆರ್​ಎಸ್​ಎಸ್​ನವರು ಐಪಿಎಸ್ (IPS), ಐಎಎಸ್ (IAS) ಅಧಿಕಾರಿಗಳಿದ್ದಾರೆಂದು ಹೇಳಿದ್ದಾರೆ. ಆರ್​ಎಸ್​ಎಸ್​ ಅಜೆಂಡಾ ಇಂಪ್ಲಿಮೆಂಟ್ ಮಾಡಲು ತರಬೇತಿ ಕೊಡುತ್ತಾರೆ. ಆರ್‌ಎಸ್‌ಎಸ್‌ ಅವರು ಕಾರ್ಯಕರ್ತರಿಗೆ ಟ್ರೈನಿಂಗ್ ಕೊಡ್ತಾರೆ. ಈ ಪರೀಕ್ಷೆ ಬರೆಯಲು ಟ್ರೈನಿಂಗ್ ಕೊಟ್ಟಿದ್ದಾರೆ. 2016ರ ಒಂದೇ ವರ್ಷದಲ್ಲಿ 676 ಜನ ಪಾಸ್ ಆಗಿದ್ದಾರೆ ಎಂದರು.

Latest Videos

undefined

ದೇಶಕ್ಕೆ ಸ್ವಾತಂತ್ರ್ಯ ಆರ್‌ಎಸ್‌ಎಸ್‌ನಿಂದ ಬಂದಿದೆಯಾ : ಸಿದ್ದರಾಮಯ್ಯ ಗರಂ

ದೇಶದ ಆಡಳಿತ ವ್ಯವಸ್ಥೆಯಲ್ಲಿ ಆರ್​ಎಸ್​ಎಸ್​ ಆರ್ಭಟ, ಇದನ್ನು ನಾನು ಹೇಳಿರುವುದಲ್ಲ, ಆರ್​ಎಸ್​ಎಸ್​ನಿಂದಲೇ ಈ ಮಾಹಿತಿ ಇದೆ.ಆರ್​ಎಸ್​ಎಸ್​ ಕೊಟ್ಟ ಮಾಹಿತಿಯನ್ನು ಜನತೆ ಮುಂದೆ ಇಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಆರ್‌ಎಸ್ಎಸ್ ಸಂಘಟನೆಯಿಂದ ಉತ್ತರ ಪ್ರದೇಶದಲ್ಲಿ ಸರ್ಕಾರ ರಚನೆ ಆಗಿದೆ. ಉತ್ತರ ಪ್ರದೇಶದಲ್ಲಿರುವುದು ಆರ್‌ಎಸ್ಎಸ್ ಸರ್ಕಾರ. ಉತ್ತರ ಪ್ರದೇಶ ಸರ್ಕಾರ ಆರ್‌ಎಸ್ಎಸ್ ಹಿಡಿತದಲ್ಲಿದೆ. ಮನುಸ್ಮೃತಿ ಯುಗಕ್ಕೆ ಕರೆದೊಯ್ಯುವುದು ನಿಮ್ಮ ಅಜೆಂಡಾ. ನಾವೂ ಹಿಂದೂಗಳೇ, ಆದ್ರೆ ಹಿಂದುತ್ವ ನಮ್ಮ ಅಜೆಂಡಾವಲ್ಲ. ಮೊದಲು ದುಡಿಯುವ ಕೈಗಳಿಗೆ ದುಡಿಮೆ ಕೊಡಿ ಎಂದು ಕಿಡಿಕಾರಿದರು.

 ಸರ್ಕಾರಗಳು ಬಡವರ ಬಗ್ಗೆ ಗಮನ ಕೊಡಬೇಕು. ರೈತರ ಮೇಲೆ ಗೌರವ ಇದ್ದರೆ ತಪ್ಪಿತಸ್ಥರನ್ನು ಬಂಧಿಸಿ. ಕಾರು ಹತ್ತಿಸಿದವರನ್ನು ಮೊದಲು ಬಂಧಿಸಬೇಕಾಗಿತ್ತು. ಕಾರು ಹತ್ತಿಸಿದವರಿಗೆ ಏಕೆ ರಕ್ಷಣೆ ಕೊಟ್ಟಿದ್ದೀರಿ? ಎಂದು ಪ್ರಶ್ನಿಸಿದರು. 

click me!