ಲೋಕಸಭೆ ಚುನಾವಣೆ ಬಳಿಕ 4 ರಾಜ್ಯಗಳ ಅಸೆಂಬ್ಲಿ ಎಲೆಕ್ಷನ್‌

By Kannadaprabha NewsFirst Published Jun 5, 2024, 12:29 PM IST
Highlights

ಲೋಕಸಭೆ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ, ಇದೇ ವರ್ಷ ನಡೆಯಲಿರುವ 3-4 ರಾಜ್ಯಗಳ ವಿಧಾನಸಭಾ ಚುನಾವಣೆಯ ಕುರಿತ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.

ನವದೆಹಲಿ(ಜೂ.05):  ಲೋಕಸಭೆ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ, ಇದೇ ವರ್ಷ ನಡೆಯಲಿರುವ 3-4 ರಾಜ್ಯಗಳ ವಿಧಾನಸಭಾ ಚುನಾವಣೆಯ ಕುರಿತ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಚುನಾವಣಾಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿಗೆ ಭರ್ಜರಿ ಬಹುಮತದ ಸುಳಿವು ನೀಡಿದ್ದ ಕಾರಣ, ಈ ವರ್ಷ ನಡೆಯಲಿರುವ ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್ ಮತ್ತು ಸಂಭವನೀಯ ಜಮ್ಮು ಮತ್ತು ಕಾಶ್ಮೀರ ಚುನಾವಣೆ ಎನ್‌ಡಿಎಗೆ ಸುಲಭದ ತುತ್ತಾಗಬಹುದು ಎಂದೆಣಿಸಲಾಗಿತ್ತು. ಆದರೆ ಮಂಗಳವಾರ ಪ್ರಕಟವಾದ ಫಲಿತಾಂಶ ಮುಂಬರುವ ಚುನಾವಣೆಯ ದಿಕ್ಕನ್ನೇ ಬದಲಿಸುವ ಸುಳಿವು ನೀಡಿದೆ. ಅದರಲ್ಲೂ ದೇಶದ ಆರ್ಥಿಕ ಶಕ್ತಿ ಕೇಂದ್ರವಾಗಿರುವ ಮಹಾರಾಷ್ಟ್ರ ಬಿಜೆಪಿಗೆ ಬಹುದೊಡ್ಡ ಸವಾಲಾಗಿ ಹೊರಹೊಮ್ಮುವ ಸಾಧ್ಯತೆ ಇದೆ. 

ಹಾಲಿ ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಅಧಿಕಾರಲ್ಲಿದ್ದು, ಬಿಜೆಪಿ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಪಾಲುದಾರ ಪಕ್ಷಗಳಾಗಿವೆ. ಆದರೆ ಲೋಕಸಭಾ ಚುನಾವಣೆಯ ಫಲಿತಾಂಶ ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಶಾಕ್ ನೀಡಿರುವುದು 288 ಸ್ಥಾನಬಲದ ವಿಧಾನಸಭಾ ಚುನಾವಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

Latest Videos

ನಿಜವಾಯ್ತು ಕಾಪ್ಸ್‌ ಚುನಾವಣೋತ್ತರ ಸಮೀಕ್ಷೆ:ಬಿಜೆಪಿಗೆ 15, ಕಾಂಗ್ರೆಸ್ 11,ಜೆಡಿಎಸ್‌ಗೆ 2 ಸ್ಥಾನ ಎಂದಿದ್ದ ಸರ್ವೆ

ಇನ್ನೊಂದೆಡೆ ಹರ್ಯಾಣದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವ ಹೊರತಾಗಿಯೂ ಬಿಜೆಪಿಗೆ ಲೋಕಸಭಾ ಚುನಾವಣೆ ಫಲಿತಾಂಶ ಆಘಾತ ನೀಡಿದೆ. ಇತ್ತೀಚಿನ ರೈತ ಹೋರಾಟ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಿರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ, ಹೀಗಾಗಿ 90 ಸ್ಥಾನ ಬಲದ ವಿಧಾನಸಭೆ ಬಿಜೆಪಿ ಪಾಲಿಗೆ ದೊಡ್ಡ ಸವಾಲಾಗುವುದು ಸುಳ್ಳಲ್ಲ. ಮತ್ತೊಂದೆಡೆ ಇದು ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ಶಕ್ತಿವರ್ಧನೆಗೆ ದೊಡ್ಡ ಬಲ ನೀಡುವ ಸಾಧ್ಯತೆಯೂ ಸುಳ್ಳಲ್ಲ.

ಮತ್ತೊಂದೆಡೆ ಇಂಡಿಯಾ ಕೂಟದ ಪಾಲುದಾರ ಪಕ್ಷ ಜೆಎಂಎಂ ಅಧಿಕಾರ ನಡೆಸುತ್ತಿರುವ ಜಾರ್ಖಂಡ್ ಕೂಡಾ, ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಸುಲಭ ತುತ್ತಾಗಿಲ್ಲ. ಹೀಗಾಗಿ 81 ಕ್ಷೇತ್ರದ ರಾಜ್ಯ ವಿಧಾನಸಭೆ ಸಹಜವಾಗಿಯೇ ಉಭಯ ಬಣಗಳಿಗೂ ದೊಡ್ಡ ಸವಾಲಾಗಲಿದೆ.

ಹಿಮಾಚಲಪ್ರದೇಶ ಉಪಚುನಾವಣೆ ಕೈಗೆ 4 ಸ್ಥಾನಗಳಲ್ಲಿ ಗೆಲುವು

ಶಿಮ್ಲಾ: ಹಿಮಾಚಲಪ್ರದೇಶದ 6 ವಿಧಾನಸಭಾ ಕ್ಷೇತ್ರಗಳಿಗೆ ಜೂ.1 ರಂದು ನಡೆದ ಉಪಚುನಾ ವಣೆಯಲ್ಲಿ ಕಾಂಗ್ರೆಸ್ 4 ಸ್ಥಾನಗಳಲ್ಲಿ ಜಯ ಗಳಿಸಿದ್ದು, ಬಿಜೆಪಿ 2 ಸ್ಥಾನ ಗಳಿಗೆ ತೃಪ್ತಿ ಪಟ್ಟುಕೊಂಡಿದೆ.ಲಹೌ ಲ್ ಮತ್ತು ಸ್ಥಿತಿ, ಸುಜಾನ್‌ಪುರ್‌ಮತ್ತು ಗ್ಯಾಗ್ರೆಟ್, ಕುಟ್ಟಿಹಾರ್ ಕ್ಷೇತ್ರಗಳ ಕಾಂಗ್ರೆಸ್ ನಾಯಕರು ಗೆಲುವು ಸಾಧಿಸಿದ್ದಾರೆ. ಧರ್ಮಶಾಲಾ ಮತ್ತು ಬಾರ್ಸರ್ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಫೆ.29 ರಂದು ನಡೆದ ರಾಜ್ಯಸಭಾ ಚುನಾವಣೆ ಯಲ್ಲಿ ಆರು ಬಂಡಾಯ ಶಾಸಕರು ಬಿಜೆಪಿಗೆ ಮತ ಹಾಕಿದ್ದರಿಂದ ಕಾಂಗ್ರೆಸ್ ಅವರನ್ನು ಅನರ್ಹಗೊಳಿ ಸಿತ್ತು. ಆ ಆರು ಕಾಂಗ್ರೆಸ್ ನಾಯಕರು ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಯಿಂದ ಕಣಕ್ಕಿಳಿದಿದ್ದರು.

click me!