ಸತತ 3ನೇ ಬಾರಿ ಬಿಜೆಪಿ ಗದ್ದುಗೆ ಏರಿದ್ದು ಹೇಗೆ?

Published : Jun 05, 2024, 12:17 PM IST
ಸತತ 3ನೇ ಬಾರಿ ಬಿಜೆಪಿ ಗದ್ದುಗೆ ಏರಿದ್ದು ಹೇಗೆ?

ಸಾರಾಂಶ

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಕೊಂಚ ಹಿನ್ನಡೆಯಾಗಿದ್ದು, ಸ್ಪಷ್ಟ ಬಹುಮತ ಸಿಕ್ಕಿಲ್ಲ, ಆದರೆ ಮಿತ್ರ ಪಕ್ಷಗಳ ನೆರವಿನೊಂದಿಗೆ ಬಹುಮತದ ಸಂಖ್ಯೆಯನ್ನು ಪಡೆದುಕೊಂಡಿದೆ. ಬಿಜೆಪಿ ಸ್ವಲ್ಪ ಯಾಮಾರಿದ್ದರೂ ಈ ಬಾರಿ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇತ್ತು. ಆದರೆ ಅದು ಬಹಿರಂಗವಾಗಿ ಗೋಚರವಾಗಿರಲಿಲ್ಲ ಎಂಬುದು ಫಲಿತಾಂಶದ ಬಳಕ ಸ್ಪಷ್ಟವಾಗಿ ಗೊತ್ತಾಗುತ್ತಿದೆ. 

ಬೆಂಗಳೂರು(ಜೂ.05): 10 ವರ್ಷ ಅಧಿಕಾರ ನಡೆಸಿದ ಪಕ್ಷಕ್ಕೆ ಆಡಳಿತ ವಿರೋಧಿ ಅಲೆ ಬಾಧಿಸುತ್ತಿರುತ್ತದೆ. ಆಡಳಿತದಲ್ಲಿರುವ ಪಕ್ಷಗಳು ಸಾಮಾನ್ಯವಾಗಿ ಧೂಳೀಪಟವಾಗಿ ಬಿಡುತ್ತವೆ. 2014ರಲ್ಲಿ ಕಾಂಗ್ರೆಸ್ಸಿಗೆ ಆಗಿದ್ದೂ ಇದೆ. ಆದರೆ ಇದಕ್ಕೆ ತದ್ವಿರುದ್ದವಾಗಿ ಈ ಬಾರಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಏರಲು ಸಜ್ಜಾಗಿದೆ. ಇದು ಹೇಗೆ ಸಾಧ್ಯವಾಯಿತು?

ನಿಜ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಕೊಂಚ ಹಿನ್ನಡೆಯಾಗಿದ್ದು, ಸ್ಪಷ್ಟ ಬಹುಮತ ಸಿಕ್ಕಿಲ್ಲ, ಆದರೆ ಮಿತ್ರ ಪಕ್ಷಗಳ ನೆರವಿನೊಂದಿಗೆ ಬಹುಮತದ ಸಂಖ್ಯೆಯನ್ನು ಪಡೆದುಕೊಂಡಿದೆ. ಬಿಜೆಪಿ ಸ್ವಲ್ಪ ಯಾಮಾರಿದ್ದರೂ ಈ ಬಾರಿ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇತ್ತು. ಆದರೆ ಅದು ಬಹಿರಂಗವಾಗಿ ಗೋಚರವಾಗಿರಲಿಲ್ಲ ಎಂಬುದು ಫಲಿತಾಂಶದ ಬಳಕ ಸ್ಪಷ್ಟವಾಗಿ ಗೊತ್ತಾಗುತ್ತಿದೆ. 

ಪಿಎಂ ಮೋದಿ, ಎನ್‌ಡಿಎ ಕೂಟಕ್ಕೆ ಪ್ರಧಾನಿ ಮೆಲೋನಿ ಸೇರಿದಂತೆ ವಿದೇಶಿ ಗಣ್ಯರ ಶುಭಾಶಯ

ಈ ಬಾರಿಯ ಚುನಾವಣೆಯಲ್ಲಿ 400 ಸ್ಥಾನಗಳ ಹೆಗ್ಗುರಿಯನ್ನು ಬಿಜೆಪಿ ಹಾಕಿಕೊಂಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರಂತಹ ಪ್ರಭಾವಿ ನಾಯಕರಿದ್ದಾರೆ. ಅಮಿತ್ 2 ಅವರಂತಹ ರಣತಂತ್ರಗಾರ ಪಕ್ಷದಲ್ಲಿದ್ದಾರೆ. ತಳಮಟ್ಟದಲ್ಲಿ ಸಂಘಟನೆ ಬಲವಾಗಿದೆ, ಸಂಘಪರಿವಾರದ ಬೆಂಬಲವಿದೆ ಎಂದು ಪಕ್ಷ ಸುಮ್ಮನೆ ಕೂರಲಿಲ್ಲ. ತನ್ನದೇ ಆದ ಕಾರ್ಯತಂತ್ರಗಳನ್ನು ರೂಪಿಸಿತು. 

1. 132 ಹಾಲಿ ಸಂಸದರಿಗೆ ಕೊಕ್: 

ಆಡಳಿತ ವಿರೋಧಿ ಅಲೆಯನ್ನು ಹತ್ತಿಕ್ಕಲು ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಿತು. 2019ರಲ್ಲಿ 303 ಸ್ಥಾನ ಗೆದ್ದಿದ್ದ ಬಿಜೆಪಿ, ಆ ಪೈಕಿ 132 ಹಾಲಿಗಳಿಗೆ ಕೊಕ್ ನೀಡಿತು. ಅಂದರೆ ಶೇ.43ರಷ್ಟು ಸಂಸದರನ್ನು ಕಣದಿಂದ ಹೊರಕ್ಕೆ ಸರಿಸಿತು. ಆರಂಭದಲ್ಲಿ ಇದರಿಂದ ಕೆಲವೆಡೆ ಬಂಡಾಯ ಎದುರಾಯಿತು. ಆದರೆ ಪಕ್ಷ ಅದನ್ನು ಕಾರ್ಯವೈಖರಿ ಸರಿ ಇಲ್ಲದಿದ್ದರೆ, ಅಂತಹ ಸಂಸದರನ್ನು ಸೋಲಿಸಲು ಜನರು ಮುಂದಾಗುತ್ತಾರೆ. ಆಗ ಪಕ್ಷಕ್ಕೆ ಹೊಡೆತ ಬೀಳುತ್ತದೆ ಎಂಬುದು ಇದರ ಹಿಂದಿನ ಸರಳ ಲೆಕ್ಕಾಚಾರ. ಗುಜರಾತ್ ಸೇರಿ ಹಲವು ವಿಧಾನಸಭೆ ಚುನಾವಣೆಗಳಲ್ಲೂ ಆ ಪಕ್ಷ ಇದೇ ತಂತ್ರಗಾರಿಕೆ ಮಾಡಿ ಗೆದ್ದಿತ್ತು. ಅದನ್ನು ಲೋಕಸಭೆ ಚುನಾವಣೆಯಲ್ಲೂ ಪ್ರಯೋಗಿಸಿತು. ಒಂದು ವೇಳೆ, ಹಾಲಿ ಸಂಸದರಿಗೆ ಕೊಕ್ ನೀಡದೆ ಇದ್ದಿದ್ದರೆ ಇನ್ನಷ್ಟು ಸ್ಥಾನ ಕಳೆದುಕೊಳ್ಳಬೇಕಾಗಿತ್ತು.

2. ದಕ್ಷಿಣ ಭಾರತ ಟಾರ್ಗೆಟ್ 

ದಕ್ಷಿಣ ಭಾರತದ 130 ಸ್ನಾನಗಳ ಪೈಕಿ 2019ರಲ್ಲಿ ಬಿಜೆಪಿ ಕೇವಲ 29 ಸ್ಥಾನಗಳನ್ನು ಗೆದ್ದಿತ್ತು. ಆ ಪೈಕಿ 25 ಸ್ಥಾನ ಕರ್ನಾಟಕದ್ದೇ ಆಗಿದ್ದವು. ಈ ಬಾರಿ ದಕ್ಷಿಣ ಭಾರತವನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಜೆಪಿ, ಹೆಚ್ಚು ಸ್ಥಾನಗಳನ್ನು ಗೆಲ್ಲಲು ಕಾರ್ಯತಂತ್ರ ರೂಪಿಸಿತು. ಇದರ ಫಲವಾಗಿ ಈ ಬಾರಿ 49 ಸ್ಥಾನಗಳನ್ನು ಗೆದ್ದಿದೆ. ಅಂದರೆ, ಕಳೆದ ಬಾರಿಗಿಂತ 20 ಸ್ಥಾನ ಹೆಚ್ಚು ದಕ್ಷಿಣ ಭಾರತಕ್ಕೆ ಒತ್ತು ನೀಡದೇ ಹೋಗಿದ್ದರೆ, ಬಿಜೆಪಿಯ ಒಟ್ಟಾರೆ ಗಳಿಕೆ ಇನ್ನಷ್ಟು ಕುಸಿಯುವ ಅಪಾಯವಿತ್ತು.

3. ಒಡಿಶಾ ಜಗನ್ನಾಥ ಕೃಪೆ: 

ಬಿಜೆಪಿ ಈ ಬಾರಿ ಹೆಚ್ಚು ಗಮನಹರಿಸಿದ ಮತ್ತೊಂದು ರಾಜ್ಯ ಒಡಿಕಾ, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಪ್ರಬಲ ನಾಯಕರಾಗಿದ್ದರು. ಅವರಿಗೆ ಬಲಾಡ್ಯ ಪ್ರತಿಪಕ್ಷವೇ ಇರಲಿಲ್ಲ. ನರೇಂದ್ರ ಮೋದಿ ಆದಿಯಾಗಿ ಬಿಜೆಪಿ ನಾಯಕರು ಒಡಿಶಾದಲ್ಲಿ ಬಿಜೆಪಿಯನ್ನು ಸಂಘಟಿಸಲು ಒತ್ತು ನೀಡಿದರು. ಬಿಜೆಪಿ ಈ ಬಾರಿ ಆ ರಾಜ್ಯದಲ್ಲಿ 19 ಸ್ಥಾನ ಗೆದ್ದಿದೆ. ಕಳೆದ ಬಾರಿ ಗದ್ದಿದ್ದ (8)ಕ್ಕಿಂತ 11 ಸ್ಥಾನ ಹೆಚ್ಚು,

Narendra Modi: ಎನ್‌ಡಿಎಗೆ ಹ್ಯಾಟ್ರಿಕ್‌ ಗೆಲುವು..1962ರ ಬಳಿಕ ಸತತ 3ನೇ ಬಾರಿ ಗೆದ್ದ ಮೊದಲ ಸರ್ಕಾರ!

4. ಸಕಾಲದಲ್ಲಿ ದೋಸ್ತಿ: 

ಕರ್ನಾಟಕದಲ್ಲಿ ಜೆಡಿಎಸ್, ವಿಹಾರದಲ್ಲಿ ಜೆಡಿಯು, ಲೋಕಜನಶಕ್ತಿ ಪಕ್ಷ, ಜೀತನ್ ರಾಂ ಮಾಂಝಿ ಅವರ ಎಚ್‌ಎಎಂ, ಉತ್ತರಪ್ರದೇಶದ ಆರ್‌.ಎಲ್‌ಎಡಿ, ಆಂಧ್ರದಲ್ಲಿ ತೆಲುಗುದೇಶಂ- ಜನಸೇನಾದಂತಹ ಪಕ್ಷಗಳ ಜತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಹಕಾರಿಯಾಗಿದೆ.

5. ವರ್ಷದ ಮೊದಲೇ ಸಿದ್ಧತೆ: 

ಲೋಕಸಭೆ ಚುನಾವಣೆಗೆ ಪೈಪೋಟಿ ಎದುರಾಗಬಹುದು ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಒಂದು ವರ್ಷದಿಂದಲೇ ತಯಾರಿ ನಡೆಸಿತ್ತು. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶ ಸುತ್ತಿ ಪಕ್ಷದ ಪರ ಪ್ರಚಾರ ಮಾಡಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: ಮಹಾಮೇಳಾವ್ ಅನುಮತಿ ನಿರಾಕರಣೆ - ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ