
ಕಲಬುರಗಿ (ಸೆ.17): ರಾಜ್ಯದಲ್ಲಿ ಮೂವರು ಉಪ ಮುಖ್ಯಮಂತ್ರಿಗಳನ್ನು ಮಾಡುವ ಬಗ್ಗೆ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ. ಅವರು ಅಭಿಪ್ರಾಯ ಹೇಳಲು ಮುಕ್ತ ಅವಕಾಶವಿದೆ. ಆದರೆ ಕಾಂಗ್ರೆಸ್ ವರಿಷ್ಠರ ಹಂತದಲ್ಲಿ ಅಂತಹ ಯಾವುದೇ ವಿಚಾರಗಳ ಚರ್ಚೆ ಆಗಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕಲಬುರಗಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ತಮ್ಮ ಅಭಿಪ್ರಾಯ ಹೇಳಲು ಎಲ್ಲರಿಗೂ ಮುಕ್ತ ಅವಕಾಶವವಿದೆ. ಅದೇನಿದ್ದರೂ ಹೈಕಮಾಂಡ್ ನಿರ್ಣಯ ಕೈಗೊಳ್ಳುತ್ತದೆ ಎಂದು ತಿಳಿಸಿದರು. ಪಕ್ಷದ ಹಿರಿಯ ನಾಯಕರಾದ ಹರಿಪ್ರಸಾದ್ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಸಂಪರ್ಕದಲ್ಲಿದ್ದಾರೆ.
ಅವರು ಎಲ್ಲಿಯೂ ಕೂಡಾ ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡಿಲ್ಲ ಎಂದು ಪ್ರಿಯಾಂಕ್ ಸಮರ್ಥಿಸಿಕೊಂಡರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬಿಜೆಪಿ ಬಳಿ ಸುಳ್ಳಿನ ಫ್ಯಾಕ್ಟರಿ ಇದೆ. ಅದಕ್ಕೆ ಅವರು ಫ್ಯಾಕ್ಟ್ ಚೆಕ್, ಸುಳ್ಳು ಸುದ್ದಿ ತಡೆಯುವ ಘಟಕ ವಿರೋಧಿಸುತ್ತಿದ್ದಾರೆ. ಅವರಿಗೆ ಸಾಮಾನ್ಯ ಜ್ಞಾನ ಇಲ್ಲ. ನಾವು ಕಾನೂನು ಬದಲಾಯಿಸುತ್ತಿಲ್ಲ. ಅಗತ್ಯ ಮಾರ್ಪಾಡು ಮಾಡುತ್ತಿದ್ದೇವೆ. ಜನ, ಮಾಧ್ಯಮ ಸ್ವಾಗತಿಸುತ್ತಿದೆ. ಬಿಜೆಪಿಗೆ ಅದು ಅಪಥ್ಯವಾಗಿದೆ ಎಂದರು. ಕಲಬುರಗಿಯ ಕಡಗಂಚಿ ಹತ್ತಿರವಿರುವ ಕೇಂದ್ರೀಯ ವಿವಿಯಲ್ಲಿ ಸಂಘ ಪರಿವಾರದ ಚಟುವಟಿಕೆಗಳು ನಡೆದಿವೆ. ಅದನ್ನು ಸಂಘದ ಕೇಂದ್ರವಾಗಲು ಬಿಡೋದಿಲ್ಲ. ಮೊದಲು ಅವರಿಗೆ ಸೂಚಿಸಿದ್ದೆ. ಅವರು ಸೂಚನೆ ಪಾಲಿಸುತ್ತಿಲ್ಲವೆದು ಕಾಣುತ್ತಿದೆ. ಶೀಘ್ರ ಅಲ್ಲಿಗೆ ಬೇಟಿ ನೀಡುವೆ ಎಂದು ಹೇಳಿದರು.
ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುತ್ತಿರುವ ಶಿಕ್ಷಕ: ಅಲ್ಹಾಭಕ್ಷ ಕೈಯಲ್ಲಿ ಅರಳಿವೆ ನೂರಾರು ಗಣಪ ವಿಗ್ರಹ!
ಸನಾತನ ಧರ್ಮದ ನನ್ನ ಹೇಳಿಕೆ ತಪ್ಪಲ್ಲ: ‘ಸನಾತನ ಧರ್ಮದ ಹೇಳಿಕೆ ವಿಚಾರದಲ್ಲಿ ನಾನು ಮಾಡಿದ ಟ್ವೀಟ್‌ನಲ್ಲಿ ಏನೂ ತಪ್ಪಿಲ್ಲ. ಸಂವಿಧಾನದಿಂದ ಸ್ವಾಭಿಮಾನದ ಬದುಕು ಸಿಗುತ್ತಿದ್ದು, ಸಂವಿಧಾನದಿಂದ ಏನೂ ಇಲ್ಲ ಎಂಬುದನ್ನು ಬಿಜೆಪಿಯವರು ಹೇಳಲಿ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಂವಿಧಾನವೇ ನನ್ನ ಧರ್ಮ ಎಂದಿದ್ದೇನೆ. ಸಂವಿಧಾನದಿಂದ ಸ್ವಾಭಿಮಾನದ ಬದುಕು ಸಿಗುತ್ತದೆ. ಮೊಸರಲ್ಲಿ ಕಲ್ಲು ಹುಡುಕುವುದು ಬೇಡ. ನಿಮ್ಮ ಆಚರಣೆ ವಿರುದ್ಧ ನಾನಿಲ್ಲ, ನನ್ನ ಆಚರಣೆ ವಿರುದ್ಧ ಯಾಕೆ ಇದ್ದೀರಿ? ನನಗೆ ಸಂವಿಧಾನದ ಬಗ್ಗೆ ನಂಬಿಕೆ ಇದೆ. ನಾನು ಯಾರಿಗೆ ಯಾಕೆ ಸಮರ್ಥನೆ ಮಾಡಬೇಕು? ನನ್ನ ವಿರುದ್ಧ ಎಫ್‌ಆರ್‌ಐ ಎಲ್ಲಿಯಾದರೂ ಹಾಕಿಕೊಳ್ಳಬಹುದು.
ಸೇವಂತಿಗೆ ಹೂವಿನ ದರ ಕುಸಿತದಿಂದ ಕಂಗಾಲಾದ ಅನ್ನದಾತ: ಬೆಳೆ ನಾಶಪಡಿಸಿದ ರೈತ!
ಸಂವಿಧಾನ ಗೌರವಿಸುತ್ತೇನೆ ಎಂದರೆ ಎಫ್‌ಐಆರ್ ಹಾಕುತ್ತೇವೆ ಎಂದರೆ ಹಾಕಿಕೊಳ್ಳಲಿ’ ಎಂದು ಕಿಡಿಕಾರಿದರು. ‘ರಿಪಬ್ಲಿಕ್ ಆಫ್ ಭಾರತ’ ಎಂದು ಹೆಸರು ನಾಮಕರಣ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ‘ವಾಟ್ಸಾಪ್ ವಿಶ್ವವಿದ್ಯಾಲಯದಲ್ಲಿ ಬೆಳೆದು ಬಂದವರು. ಇತಿಹಾಸ ತಿಳಿದುಕೊಂಡು ಬಂದಿಲ್ಲ. ಭಾರತ, ಇಂಡಿಯಾ ಹೇಗೆ ಬಂತು ಎಂಬುದನ್ನು ತಿಳಿದುಕೊಳ್ಳಲಿ. ರಸ್ತೆ ಹೆಸರು ಬದಲಿಸುತ್ತಿದ್ದರು. ಈಗ ದೇಶದ ಹೆಸರು ಬದಲಿಸುತ್ತಿದ್ದಾರೆ. ಮೊದಲು ದೇಶದ ಹಣೆಬರಹ ಬದಲಿಸಲಿ. ಹಸಿವಿನಿಂದ ಎಷ್ಟುಜನ ಸಾಯುತ್ತಿದ್ದಾರೆ. ದೇಶದ ಹಣಕಾಸಿನ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಲಿ’ ಎಂದು ಒತ್ತಾಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.