ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರ ಜೊತೆಗೆ ಗುರುತಿಸಿಕೊಂಡ ಹಿನ್ನೆಲೆ ಮತ್ತು ಬಿಜೆಪಿಯಲ್ಲೇ ಇದ್ದುಕೊಂಡು ಪಕ್ಷದ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಅವರನ್ನು ಬೆಂಬಲಿಸದ ಕಾರಣ ಮುಖಂಡರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದವರ ಉಚ್ಚಾಟನೆ.
ಹುಬ್ಬಳ್ಳಿ(ಏ.29): ಮಾಜಿ ಸಿಎಂ ಜಗದೀಶ ಶೆಟ್ಟರ್ ಬಿಜೆಪಿ ತೊರೆದ ಬೆನ್ನಲ್ಲೇ ಇದೀಗ ಅವರನ್ನು ಬೆಂಬಲಿಸಿರುವ 27 ಮುಖಂಡರನ್ನು ಪಕ್ಷ ಉಚ್ಛಾಟಿಸಿದೆ. ಆದರೆ ಪಕ್ಷಕ್ಕೆ ರಾಜೀನಾಮೆ ನೀಡಿರುವ ಕೆಲವರನ್ನೂ ಉಚ್ಛಾಟಿಸಿರುವುದು ವಿಶೇಷ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರ ಜೊತೆಗೆ ಗುರುತಿಸಿಕೊಂಡ ಹಿನ್ನೆಲೆ ಮತ್ತು ಬಿಜೆಪಿಯಲ್ಲೇ ಇದ್ದುಕೊಂಡು ಪಕ್ಷದ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಅವರನ್ನು ಬೆಂಬಲಿಸದ ಕಾರಣ ಮುಖಂಡರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು ಎಂದು ನಿಗಮ ಮಂಡಳಿ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಸಾವಕಾರ, ನಾಗೇಶ ಕಲಬುರ್ಗಿ (ಉಚ್ಚಾಟನೆಗೂ ಮೊದಲೇ ರಾಜೀನಾಮೆ ಕೊಟ್ಟಿದ್ದರು), ಪಾಲಿಕೆಯ ಮಾಜಿ ಸದಸ್ಯ ಮಹೇಶ ಬುರ್ಲಿ, ಶಂಕರ ಸುಂಕದ, ಮಂಜು ದಲಭಂಜನ, ವಿರೂಪಾಕ್ಷಿ ರಾಯನಗೌಡ ಸೇರಿದಂತೆ ಸದಸ್ಯರು, ಪಕ್ಷದ ಪದಾಧಿಕಾರಿಗಳು ಹಾಗೂ ನಿಗಮ ಮಂಡಳಿಗಳ ಮಾಜಿ ಅಧ್ಯಕ್ಷರು ಸೇರಿ 27 ಜನರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
KARNATAKA ELECTION 2023 ಅಭಿವೃದ್ದಿ ಮಾಡುವವರಿಗೆ ಮತ ನೀಡಿ: ಕಿಚ್ಚ ಸುದೀಪ್
ಶೆಟ್ಟರ್ ಕ್ಷೇತ್ರದಲ್ಲಿ ಸುದೀಪ್ ಭರ್ಜರಿ ರೋಡ್ ಶೋ
ಧಾರವಾಡ: ಕಳೆದ ಎರಡು ದಿನಗಳಿಂದ ಉತ್ತರ ಕರ್ನಾಟಕ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಇಳಿದಿರುವ ಚಿತ್ರನಟ ಕಿಚ್ಚ ಸುದೀಪ ಅವರು ಶುಕ್ರವಾರ ಇಡೀ ದಿನ ಜಿಲ್ಲೆಯ ಹು-ಧಾ ಸೆಂಟ್ರಲ್, ಕಲಘಟಗಿ ಮತಕ್ಷೇತ್ರದ ಅಳ್ನಾವರ, ಧಾರವಾಡ ಗ್ರಾಮೀಣ ಕ್ಷೇತ್ರ ಹಾಗೂ ನವಲಗುಂದ ಕ್ಷೇತ್ರದಲ್ಲಿ ಭರ್ಜರಿ ರೋಡ್ ಷೋ ನಡೆಸಿದರು.
ಡಬಲ್ ಇಂಜಿನ್ ಸರ್ಕಾರ ಬರಲು ಮತ್ತು ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕೋರಿದರು. ಈ ವೇಳೆ ಕಿಚ್ಚ ಸುದೀಪ್‌ನನ್ನು ನೋಡಲು ಎಲ್ಲೆಡೆ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರಲ್ಲದೇ ಹುಚ್ಚೆದ್ದು ಕುಣಿಯುತ್ತಿದ್ದರು. ಸುದೀಪ್ ಅಭಿಮಾನಿಗಳತ್ತ ಕೈಬೀಸುತ್ತ, ಕೈಕುಲುಕುತ್ತ ಸಾಗುತ್ತಿದ್ದರು. ಹಲವೆಡೆ ಜನರು ಸೆಲ್ಫಿ ತೆಗೆದುಕೊಂಡರು.
ದುಡಿಯುವ ಉತ್ಸಾಹ ಕಡಿಮೆಯಾಗಿಲ್ಲ : ಜಗದೀಶ ಶೆಟ್ಟರ್
ಬೆಳಗ್ಗೆ 11ರ ಸುಮಾರು ಹು-ಧಾ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಪರವಾಗಿ ರೋಡ್ ಶೋ ನಡೆಸಿದ ಸುದೀಪ್, ತದನಂತರ ಮಧ್ಯಾಹ್ನ 12ರ ನಂತರ ಕಲಘಟಗಿ ಕ್ಷೇತ್ರದ ಅಳ್ನಾವರ ಪಟ್ಟಣದಲ್ಲಿ ಅಪಾರ ಅಭಿಮಾನಿಗಳ ಎದುರು ಬಿಜೆಪಿ ಅಭ್ಯರ್ಥಿ ನಾಗರಾಜ್ ಛಬ್ಬಿ ಅವರೊಂದಿಗೆ ರೋಡ್ ಶೋ ನಡೆಸಿದರು. ಬಳಿಕ ಅಮ್ಮಿನಬಾವಿಗೆ ಆಗಮಿಸಿ, ಶಾಸಕ ಅಮೃತ ದೇಸಾಯಿ ಪರವಾಗಿ ಮರೇವಾಡ ಕ್ರಾಸ್‌ನಿಂದ ಅಮ್ಮಿನಬಾವಿ ಗ್ರಾಮದ ಮುಖ್ಯರಸ್ತೆ ವರೆಗೆ ರೋಡ್ ಶೋ ಮಾಡಿದ ಕಿಚ್ಚ ಸುಮಾರು ಎರಡು ನಿಮಿಷಗಳ ಕಾಲ ದೇಸಾಯಿ ಪರವಾಗಿ ಭಾಷಣ ಮಾಡಿ ನವಲಗುಂದತ್ತ ಪ್ರಯಾಣ ಬೆಳೆಸಿದರು.
ಗದಗ ಕಾರ‍್ಯಕ್ರಮ ರದ್ದು:
ಇನ್ನು, ಇವೆಲ್ಲಾ ಕಾರ‍್ಯಕ್ರಮಗಳ ಮಧ್ಯೆ ಸಮಯದ ಅಭಾವದಿಂದಾಗಿ ಗದಗ ಬಿಜೆಪಿ ಅಭ್ಯರ್ಥಿ ಅನಿಲ್ ಟೆಂಗಿನಕಾಯಿ ಪರ ಸುದೀಪ್ ಪಾಲ್ಗೊಳ್ಳಬೇಕಿದ್ದ ಪ್ರಚಾರ ಕಾರ‍್ಯಕ್ರಮ ರದ್ದುಗೊಳಿಸಲಾಯಿತು.