ನನ್ನ ಸಂಪರ್ಕದಲ್ಲಿ 21 TMC ಶಾಸಕರು: ಬಿಜೆಪಿ ನಾಯಕ Mithun Chakraborty

Published : Sep 25, 2022, 09:20 AM ISTUpdated : Sep 25, 2022, 09:21 AM IST
ನನ್ನ ಸಂಪರ್ಕದಲ್ಲಿ 21 TMC ಶಾಸಕರು: ಬಿಜೆಪಿ ನಾಯಕ Mithun Chakraborty

ಸಾರಾಂಶ

ಜುಲೈನಲ್ಲಿ ಹೇಳಿದ ಹೇಳಿಕೆಗೆ ನಾನು ಬದ್ಧ. ಟಿಎಂಸಿಯ 38 ಶಾಸಕರು ವಿರೋಧ ಪಕ್ಷ ಬಿಜೆಪಿ ಸಂಪರ್ಕದಲ್ಲಿದ್ದಾರೆ ಮತ್ತು ಈ ಪೈಕಿ 21 ಜನರು ನೇರವಾಗಿ ತನ್ನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮಿಥುನ್ ಚಕ್ರವರ್ತಿ ಅವರು ಹೇಳಿಕೊಂಡಿದ್ದಾರೆ.

ಕೋಲ್ಕತಾ: ತೃಣಮೂಲ ಕಾಂಗ್ರೆಸ್‌ನ (Trinamool Congress) 21 ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆಂದು ನಟ ಹಾಗೂ ಬಿಜೆಪಿ ಮುಖಂಡ ಮಿಥುನ್‌ ಚಕ್ರವರ್ತಿ ಪುನಃ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಮಿಥುನ್‌ ಚಕ್ರವರ್ತಿ, ‘ಈ ಮೊದಲು ನಾನು ಇದೇ ಹೇಳಿಕೆ ನೀಡಿದ್ದೆ, ಅದರಂತೆ ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ಟಿಎಂಸಿ (TMC) ನಾಯಕರನ್ನು ಬಿಜೆಪಿಯಲ್ಲಿ ಸೇರಿಸಿಕೊಳ್ಳಲು ಹಲವು ಆಕ್ಷೇಪಗಳಿವೆಯಾದರೂ ಶಾಸಕರು ನನ್ನ ಜೊತೆ ಸಂಪರ್ಕ ಹೊಂದಿದ್ದಾರೆ’ ಎಂದಿದ್ದಾರೆ. ಇತ್ತೀಚಿಗೆ ಮೋದಿ ಸರ್ಕಾರ ಕೇಂದ್ರೀಯ ತನಿಖಾ ಸಂಸ್ಥೆಗಳ (Central Investigative Agencies) ದುರ್ಬಳಿಕೆ ಮಾಡಿಕೊಳ್ಳುತ್ತಿದ್ದಾರೆಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಿಥುನ್‌ ಚಕ್ರವರ್ತಿ, ‘ನೀವು ಯಾವುದೇ ತಪ್ಪು ಮಾಡಿಲ್ಲ ಎಂದಲ್ಲಿ ಆರಾಮಾಗಿ ಮಲಗಿ. ಆದರೆ ನೀವು ತಪ್ಪು ಮಾಡಿದ್ದರೆ ಸ್ವತಃ ಪ್ರಧಾನಿ, ರಾಷ್ಟ್ರಪತಿಯೂ ನಿಮ್ಮನ್ನು ಉಳಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಿಥುನ್ ಚಕ್ರವರ್ತಿ ಅವರು ಜುಲೈನಲ್ಲಿ ಹೇಳಿದ ಹೇಳಿಕೆಗೆ ನಾನು ಬದ್ಧ. ಟಿಎಂಸಿಯ 38 ಶಾಸಕರು ವಿರೋಧ ಪಕ್ಷದ (Opposition Party) (ಬಿಜೆಪಿ) ಸಂಪರ್ಕದಲ್ಲಿದ್ದಾರೆ ಮತ್ತು ಈ ಪೈಕಿ 21 ಜನರು ನೇರವಾಗಿ ತನ್ನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ. "ನಾನು ಮೊದಲೇ ಹೇಳಿದ್ದೇನೆ ಮತ್ತು ನಾನು ಈ ಹಿಂದೆ ಹೇಳಿದ್ದಕ್ಕೆ ನಾನು ಇವತ್ತಿಗೂ ಬದ್ಧ. ಸ್ವಲ್ಪ ಸಮಯ ಕಾಯಿರಿ, ನೀವು ನೋಡುತ್ತೀರಿ. ಟಿಎಂಸಿ ನಾಯಕರನ್ನು ಸೇರ್ಪಡೆಗೊಳಿಸಲು ಪಕ್ಷದೊಳಗೆ ಆಕ್ಷೇಪವಿದೆ. ನಾವು ಕೊಳೆತ ಆಲೂಗಡ್ಡೆಯನ್ನು (Rotten Potatoes) ತೆಗೆದುಕೊಳ್ಳುವುದಿಲ್ಲ ಎಂದು ಅನೇಕ ನಾಯಕರು ಹೇಳಿದ್ದಾರೆ’’ ಎಂದು ಮಿಥುನ್ ಚಕ್ರವರ್ತಿ ಹೇಳಿದರು.

ಇದನ್ನು ಓದಿ: ಚುನಾವಣಾ ಭಾಷಣದಲ್ಲಿ ಸಿನಿಮಾ ಡೈಲಾಗ್: ಮಿಥುನ್ ದಾಗೆ ಹುಟ್ಟುಹಬ್ಬದಂದೇ 'ಕಹಿ'!

ಇದಕ್ಕೂ ಮುನ್ನ, ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯದಲ್ಲಿ ಮುಂದಿನ 6 ತಿಂಗಳವರೆಗೆ ಸಹ ಉಳಿಯುವುದಿಲ್ಲ ಎಂದು ಹೇಳಿದರು. ಮುಂದಿನ 6 ತಿಂಗಳಲ್ಲಿ "ಹೊಸ ಮತ್ತು ಸುಧಾರಿತ ಟಿಎಂಸಿ" ಬರಲಿದೆ ಎಂದು ಆಡಳಿತ ಪಕ್ಷ ಪೋಸ್ಟರ್‌ಗಳನ್ನು ಹಾಕಿದ ನಂತರ, ಸುವೇಂದು ಅಧಿಕಾರಿ ಈ ಟೀಕೆಗಳನ್ನು ಮಾಡಿದ್ದಾರೆ. "ಜಾರಿ ನಿರ್ದೇಶನಾಲಯ (Enforcement Directorate) (ಇಡಿ) ಮತ್ತು ಕೇಂದ್ರೀಯ ತನಿಖಾ ದಳ (Central Bureau of Investigation) (ಸಿಬಿಐ) ತಮ್ಮ ಕೆಲಸವನ್ನು ಮಾಡುತ್ತಿವೆ. ಈ ಪಕ್ಷವು (ಟಿಎಂಸಿ) ಆರು ತಿಂಗಳ ಕಾಲವೂ ಉಳಿಯುವುದಿಲ್ಲ, ಡಿಸೆಂಬರ್‌ವರೆಗೆ ಗಡುವು" ಎಂದು ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ. 

ಮಿಥುನ್‌ ಚಕ್ರವರ್ತಿ ಅವರು ಪಶ್ಚಿಮ ಬಂಗಾಳದಲ್ಲಿ 2021 ರ ವಿಧಾನಸಭಾ ಚುನಾವಣೆಯಲ್ಲಿ (Assembly Election) ಬಿಜೆಪಿಯ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾಗಿದ್ದರು. ಆದರೆ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 213 ಸ್ಥಾನಗಳನ್ನು ಗೆದ್ದ ನಂತರ ಮತ್ತು ಪಶ್ಚಿಮ ಬಂಗಾಳ ರಾಜ್ಯ ವಿಧಾನಸಭೆಯಲ್ಲಿ 294 ಸ್ಥಾನಗಳಲ್ಲಿ ಬಿಜೆಪಿ 77 ಸ್ಥಾನಗಳನ್ನು ಗಳಿಸಿದ ನಂತರ ಇದುವರೆಗೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ನಿರ್ಬಂಧಿಸಿದ್ದರು.

ಇದನ್ನೂ ಓದಿ: ನಟ ಮಿಥುನ್‌ ಚಕ್ರವರ್ತಿ ಸ್ಪರ್ಧೆ ನಿರೀಕ್ಷೆ ಹುಸಿ!

ಈ ಮಧ್ಯೆ, ಭಾರತೀಯ ಜನತಾ ಪಾರ್ಟಿ (Bharatiya Janata Party) (ಬಿಜೆಪಿ) ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಮೌಸುಮಿ ದಾಸ್ ಅವರು ಅವರ ನಿವಾಸದಲ್ಲಿ "ತೃಣಮೂಲ ಕಾಂಗ್ರೆಸ್ ಬೆಂಬಲಿತ" ಗೂಂಡಾಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸೆಪ್ಟೆಂಬರ್ 23 ರಂದು ಮಾಲ್ಡಾದ ಮಾಲತಿಪುರ ಪ್ರದೇಶದಲ್ಲಿರುವ ಅವರ ನಿವಾಸದ ಮೇಲೆ ಟಿಎಂಸಿ ಬೆಂಬಲಿತ ಗೂಂಡಾಗಳು ದಾಲಿ ನಡೆಸಿದೆ ಎಂದು ಆರೋಪಿಸಿದ್ದಾರೆ. ಆದರೆ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಕ್ತಾರ ಶುವೊಮೊಯ್ ಬಸು, ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಪೊಲೀಸರ ತನಿಖೆಯ ಮೇಲೆ ನಮಗೆ ನಂಬಿಕೆ ಇದೆ, ದಾಳಿ ನಡೆದಿದ್ದರೆ ಅದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚುತ್ತಾರೆ ಎಂದು ಅವರು ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!