ಕಾಂಗ್ರೆಸ್‌ 3ನೇ ಪಟ್ಟಿ: 43ರಲ್ಲಿ 21 ಹೊಸ ಮುಖಗಳು...!

Published : Apr 16, 2023, 11:09 AM IST
ಕಾಂಗ್ರೆಸ್‌ 3ನೇ ಪಟ್ಟಿ: 43ರಲ್ಲಿ 21 ಹೊಸ ಮುಖಗಳು...!

ಸಾರಾಂಶ

ಪುಲಿಕೇಶಿನಗರ ಅಖಂಡ ಶ್ರೀನಿವಾಸ್‌, ಶಿಡ್ಲಘಟ್ಟವಿ.ಮುನಿಯಪ್ಪ, ಲಿಂಗಸುಗೂರು ಡಿ.ಎಸ್‌. ಹೊಲಗಿರಿ, ಹರಿಹರ ಕ್ಷೇತ್ರದ ಎಸ್‌.ರಾಮಪ್ಪ ಸೇರಿದಂತೆ ನಾಲ್ಕು ಮಂದಿ ಹಾಲಿ ಶಾಸಕರಿಗೆ ಮೂರನೇ ಪಟ್ಟಿಯಲ್ಲೂ ಟಿಕೆಟ್‌ ನೀಡಿಲ್ಲ. 

ಬೆಂಗಳೂರು(ಏ.16):  ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಕಾಂಗ್ರೆಸ್‌ ಪಕ್ಷದ 3ನೇ ಅಭ್ಯರ್ಥಿಗಳ ಪಟ್ಟಿಯಲ್ಲಿ 43 ಅಭ್ಯರ್ಥಿಗಳ ಪೈಕಿ 21 ಮಂದಿ ಹೊಸ ಮುಖಗಳಿಗೆ ಪಕ್ಷ ಮಣೆ ಹಾಕಿದೆ.

ಆಸಿಫ್‌ ಸೇಠ್‌-ಬೆಳಗಾವಿ ಉತ್ತರ, ಪ್ರಭಾವತಿ ಮಸ್ತಮರಡಿ-ಬೆಳಗಾವಿ ದಕ್ಷಿಣ, ಶರಣಪ್ಪ ಸುಣಗಾರ್‌-ದೇವರಹಿಪ್ಪರಗಿ, ಡಾ.ಶಿಂಧೆ ಭೀಮಸೇನ್‌ ರಾವ್‌-ಔರಾದ್‌, ಶ್ರೀದೇವಿ ಆರ್‌.ನಾಯಕ್‌- ದೇವದುರ್ಗ, ಸುಜಾತಾ ಎನ್‌. ದೊಡ್ಡಮನಿ-ಶಿರಹಟ್ಟಿ, ನಿವೇದಿತ್‌ ಆಳ್ವ-ಕುಮಟ, ಬಿ.ಎಂ.ನಾಗರಾಜ್‌-ಸಿರಗುಪ್ಪ, ನಾರಾ ಭರತ್‌ ರೆಡ್ಡಿ-ಬಳ್ಳಾರಿ ನಗರ, ಎಚ್‌.ಸಿ.ಯೋಗೇಶ್‌-ಶಿವಮೊಗ್ಗ, ಉದಯ್‌ ಶೆಟ್ಟಿ-ಕಾರ್ಕಳ, ನಯನ ಜ್ಯೋತಿ ಜವಾರ್‌ (ನಯನ ಮೋಟಮ್ಮ)-ಮೂಡಿಗೆರೆ, ಜಿ.ಎಚ್‌.ಷಣ್ಮುಖಪ್ಪ ಯಾದವ್‌-ತುಮಕೂರು ಗ್ರಾಮಾಂತರ, ಪ್ರದೀಪ್‌ ಈಶ್ವರ್‌ ಅಯ್ಯರ್‌-ಚಿಕ್ಕಬಳ್ಳಾಪುರ, ಧನಂಜಯ ಗಂಗಾಧರಯ್ಯ-ದಾಸರಹಳ್ಳಿ, ಉಮಾಪತಿ ಶ್ರೀನಿವಾಸ್‌ ಗೌಡ-ಬೊಮ್ಮನಹಳ್ಳಿ, ಎಸ್‌.ಗಂಗಾಧರ್‌-ಚನ್ನಪಟ್ಟಣ, ಕೆ.ಎಂ.ಉದಯ್‌-ಮದ್ದೂರು, ಬನವಾಸಿ ರಂಗಸ್ವಾಮಿ-ಹಾಸನ, ಅಶೋಕ್‌ ಕುಮಾರ್‌ ರೈ-ಪುತ್ತೂರು, ಕೆ.ಹರೀಶ್‌ಗೌಡ-ಚಾಮರಾಜ ಕ್ಷೇತ್ರದಿಂದ ಇದೇ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರೋದು ಪಕ್ಕಾ ಎಂದ ಶಾಮನೂರು ಶಿವಶಂಕರಪ್ಪ!

ಪ್ರಭಾವಿಗಳ ಸಂಬಂಧಿಕರಿಗೆ ಮಣೆ

ಕಾಂಗ್ರೆಸ್‌ನ ಮೂರನೇ ಪಟ್ಟಿಯಲ್ಲೂ ಕುಟುಂಬ ರಾಜಕಾರಣಕ್ಕೆ ಮನ್ನಣೆ ನೀಡಿದ್ದು, ಪ್ರಭಾವಿ ನಾಯಕರ ಮೂವರು ಕುಡಿಗಳು ಟಿಕೆಟ್‌ ಗಿಟ್ಟಿಸಿದ್ದಾರೆ. ಹಿರಿಯ ನಾಯಕಿ ಮಾರ್ಗರೇಟ್‌ ಆಳ್ವ ಅವರ ಪುತ್ರ ನಿವೇದಿತ್‌ ಆಳ್ವಗೆ ಕುಮಟಾದಿಂದ, ಬಳ್ಳಾರಿ ನಗರ ಕ್ಷೇತ್ರದಿಂದ ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ ಪುತ್ರ ನಾರಾ ಭರತ್‌ ರೆಡ್ಡಿ ಮತ್ತು ಮೂಡಿಗೆರೆಯಿಂದ ಮಾಜಿ ಸಚಿವೆ ಮೋಟಮ್ಮ ಪುತ್ರಿ ನಯನಾ ಮೋಟಮ್ಮ ಟಿಕೆಟ್‌ ಗಿಟ್ಟಿಸಿದ್ದಾರೆ.

5 ಮಹಿಳೆಯರಿಗೆ ಅವಕಾಶ

ಮೊದಲ ಪಟ್ಟಿಯಲ್ಲಿ ಆರು ಮಂದಿ ಮಹಿಳೆಯರಿಗೆ ಟಿಕೆಟ್‌ ನೀಡಿದ್ದ ಕಾಂಗ್ರೆಸ್‌ ಎರಡನೇ ಪಟ್ಟಿಯಲ್ಲಿ ಒಬ್ಬರಿಗೂ ಅವಕಾಶ ನೀಡದೆ ನಿರಾಶೆ ಮೂಡಿಸಿತ್ತು. ಇದೀಗ ಮೂರನೇ ಪಟ್ಟಿಯಲ್ಲಿ 43 ಮಂದಿಯಲ್ಲಿ 5 ಮಂದಿ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಬೆಳಗಾವಿ ದಕ್ಷಿಣದ ಪ್ರಭಾವತಿ ಮಸ್ತಮರಡಿ, ದೇವದುರ್ಗ ಶ್ರೀದೇವಿ ನಾಯಕ್‌, ಶಿರಹಟ್ಟಿಸುಜಾತ ದೊಡ್ಡಮನಿ, ಕುಂದಗೋಳ ಕುಸುಮಾವತಿ ಶಿವಳ್ಳಿ, ಮೂಡಿಗೆರೆಯಿಂದ ನಯನಾ ಜ್ಯೋತಿ ಜ್ವಾರ್‌ (ನಯನಾ ಮೋಟಮ್ಮ) ಅವರು ಅವಕಾಶ ಪಡೆದಿದ್ದಾರೆ.

5 ವಲಸಿಗರಿಗೆ ಮನ್ನಣೆ

ಮೂರನೇ ಪಟ್ಟಿಯಲ್ಲಿ 5 ವಲಸಿಗರಿಗೆ ಅವಕಾಶ ನೀಡಲಾಗಿದೆ. ಬಿಜೆಪಿ ತೊರೆದು ಬಂದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಅಥಣಿ, ಜೆಡಿಎಸ್‌ ಮಾಜಿ ಶಾಸಕ ಕೋನರೆಡ್ಡಿಗೆ ನವಲಗುಂದ, ಅರಸಿಕೆರೆಯಿಂದ ಜೆಡಿಎಸ್‌ ಹಾಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ, ಕಲಬುರಗಿ ಗ್ರಾಮೀಣ ಕ್ಷೇತ್ರದಿಂದ ಬಿಜೆಪಿಯಿಂದ ಜೆಡಿಎಸ್‌ಗೆ ಹೋಗಿ ಇದೀಗ ಕಾಂಗ್ರೆಸ್‌ಗೆ ಬಂದಿರುವ ರೇವುನಾಯಕ್‌ ಬೆಳಮಗಿಗೆ, ಜಗಳೂರು ಕ್ಷೇತ್ರದಿಂದ ಜೆಡಿಎಸ್‌ನಿಂದ ಪಕ್ಷಕ್ಕೆ ಬಂದಿರುವ ಬಿ. ದೇವೇಂದ್ರಪ್ಪ ಅವರಿಗೆ ಟಿಕೆಟ್‌ ನೀಡಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ 13 ಸಾವಿರ ಮತಗಳನ್ನಷ್ಟೇ ಪಡೆದಿದ್ದ ದೇವೇಂದ್ರಪ್ಪ ಅವರ ಆಯ್ಕೆ ಕುತೂಹಲ ಮೂಡಿಸಿದೆ.

Karnataka Assembly Elections 2023: ಸಿದ್ದುಗೆ ಕೋಲಾರ ಟಿಕೆಟ್‌ ನಿರಾಕರಿಸಿದ್ದು ಏಕೆ?

4 ಹಾಲಿಗಳಿಗೆ 3ನೇ ಪಟ್ಟಿಯಲ್ಲೂ ಟಿಕೆಟ್‌ ಇಲ್ಲ!

ಪುಲಿಕೇಶಿನಗರ ಅಖಂಡ ಶ್ರೀನಿವಾಸ್‌, ಶಿಡ್ಲಘಟ್ಟವಿ.ಮುನಿಯಪ್ಪ, ಲಿಂಗಸುಗೂರು ಡಿ.ಎಸ್‌. ಹೊಲಗಿರಿ, ಹರಿಹರ ಕ್ಷೇತ್ರದ ಎಸ್‌.ರಾಮಪ್ಪ ಸೇರಿದಂತೆ ನಾಲ್ಕು ಮಂದಿ ಹಾಲಿ ಶಾಸಕರಿಗೆ ಮೂರನೇ ಪಟ್ಟಿಯಲ್ಲೂ ಟಿಕೆಟ್‌ ನೀಡಿಲ್ಲ. ಮೊದಲೆರಡು ಪಟ್ಟಿಯಲ್ಲಿ ಟಿಕೆಟ್‌ ತಪ್ಪಿಸಿಕೊಂಡಿದ್ದ 5 ಮಂದಿ ಶಾಸಕರ ಪೈಕಿ ಕುಂದಗೋಳದ ಕುಸುಮಾ ಶಿವಳ್ಳಿ ಮಾತ್ರವೇ ಟಿಕೆಟ್‌ ಗಿಟ್ಟಿಸಿದ್ದಾರೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!
Karnataka News Live: ದೇಗುಲ ಪ್ರವೇಶಿಸುವುದಿಲ್ಲ ಎಂದ ಕ್ರಿಶ್ಚಿಯನ್ ಮಿಲಿಟರಿ ಅಧಿಕಾರಿಯ ಅಮಾನತು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು?