Karnataka election 2023: ಶಿರಹಟ್ಟಿಕ್ಷೇತ್ರಕ್ಕೆ ಸುಜಾತಾ ದೊಡ್ಡಮನಿಗೆ ಕಾಂಗ್ರೆಸ್‌ ಮಣೆ

By Kannadaprabha News  |  First Published Apr 16, 2023, 11:04 AM IST

ಅತಿ ಹೆಚ್ಚು ಆಕಾಂಕ್ಷಿಗಳಿಂದಾಗಿ ತೀವ್ರ ಕುತೂಹಲ ಕೆರಳಿಸಿದ್ದ ಶಿರಹಟ್ಟಿಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್‌ ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ ಅವರಿಗೆ ತನ್ನ ಟಿಕೆಟ್‌ ಘೋಷಿಸಿದೆ. ಕಾಂಗ್ರೆಸ್ಸಿನ 3ನೇ ಪಟ್ಟಿಯಲ್ಲಿ ಸುಜಾತಾ ದೊಡ್ಡಮನಿ ಅವರ ಹೆಸರು ಘೋಷಣೆ ಆಗುತ್ತಿದ್ದಂತೆ ಬಂಡಾಯ ದನಿ ಜೋರಾಗಿದೆ.


ಶಿವಕುಮಾರ ಕುಷ್ಟಗಿ

ಗದಗ (ಏ.15) : ಅತಿ ಹೆಚ್ಚು ಆಕಾಂಕ್ಷಿಗಳಿಂದಾಗಿ ತೀವ್ರ ಕುತೂಹಲ ಕೆರಳಿಸಿದ್ದ ಶಿರಹಟ್ಟಿಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್‌ ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ ಅವರಿಗೆ ತನ್ನ ಟಿಕೆಟ್‌ ಘೋಷಿಸಿದೆ.

Latest Videos

undefined

ಕಾಂಗ್ರೆಸ್ಸಿನ 3ನೇ ಪಟ್ಟಿಯಲ್ಲಿ ಸುಜಾತಾ ದೊಡ್ಡಮನಿ ಅವರ ಹೆಸರು ಘೋಷಣೆ ಆಗುತ್ತಿದ್ದಂತೆ ಬಂಡಾಯ ದನಿ ಜೋರಾಗಿದೆ.

ಬ್ಯಾಡಗಿ ಕಾಂಗ್ರೆಸ್: ಸಂಧಾನ ಯಶಸ್ವಿ, ಬಂಡಾಯ ಕೈಬಿಟ್ಟ ಎಸ್‌ಆರ್ ಪಾಟೀಲ್

ಶಿರಹಟ್ಟಿಕ್ಷೇತ್ರ(Shirahatti assembly constituency)ದಲ್ಲಿ ಕಾಂಗ್ರೆಸ್‌ ಟಿಕೆಟ್‌(Congress Ticket)ಗಾಗಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಸೇರಿದಂತೆ 16 ಜನ ಅರ್ಜಿ ಸಲ್ಲಿಸಿದ್ದರು. ಪಕ್ಷದ ವರಿಷ್ಠರಿಗೆ ಇವರಲ್ಲಿ ಯಾರಿಗೆ ಟಿಕೆಟ್‌ ನೀಡುವುದು ಎನ್ನುವ ಗೊಂದಲ ಉಂಟಾದ ಬೆನ್ನಲ್ಲಿಯೇ ಸುಜಾತಾ ಅವರ ಹೆಸರು ಅಂತಿಮಗೊಂಡಿದೆ. ಆದರೆ ತಮಗೆ ಟಿಕೆಟ್‌ ಕೈ ತಪ್ಪುತ್ತದೆ ಎನ್ನುವ ವಿಚಾರ ಸೂಕ್ಷ್ಮವಾಗಿ ಗೊತ್ತಾಗುತ್ತಿದ್ದಂತೆಯೇ ನಾಲ್ಕೈದು ದಿನಗಳಿಂದಲೇ ರಾಮಕೃಷ್ಣ ದೊಡ್ಡಮನಿ ಬಂಡಾಯದ ಮುನ್ಸೂಚನೆ ನೀಡಿದ್ದರು.

ಸ್ಪರ್ಧೆ ಖಚಿತ:

ಪೂರ್ವ ನಿಗದಿಯಂತೆ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಲಕ್ಷ್ಮೇಶ್ವರ ಸೇರಿದಂತೆ ಕ್ಷೇತ್ರದ ವಿವಿಧ ಮುಖಂಡರೊಂದಿಗೆ ಚರ್ಚಿಸಿ ಏ. 17ಕ್ಕೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧಾರ ಮಾಡಿದ್ದಾರೆ. ನಮ್ಮ ನಾಯಕರಾದ ರಾಮಕೃಷ್ಣ ದೊಡ್ಡಮನಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ, ಯಾರಿಗೂ ತೊಂದರೆ ಮಾಡದೇ ಅತ್ಯುತ್ತಮ ಆಡಳಿತ ನಡೆಸಿದ್ದರೂ ಅವರಿಗೆ ಟಿಕೆಟ್‌ ನೀಡಿಲ್ಲ. ಹಾಗಾಗಿ ನಾವೆಲ್ಲಾ ಕೈಯಿಂದ ಹಣ ಹಾಕಿ ಅವರ ಚುನಾವಣೆ ಮಾಡುತ್ತೇವೆ, ಅವರನ್ನೇ ಗೆಲ್ಲಿಸಿ ತರುತ್ತೇವೆ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ.

ಹೊಸ ಮುಖಗಳು:

ಶಿರಹಟ್ಟಿಮೀಸಲು ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಮತ್ತು ಬಿಜೆಪಿ ಹೊಸ ಮುಖಗಳಿಗೆ ಮಣೆಹಾಕಿವೆ. ಹಾಗಾಗಿ ಹಾಲಿ ಶಾಸಕ ರಾಮಣ್ಣ ಲಮಾಣಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಇಬ್ಬರೂ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಶಿರಹಟ್ಟಿರಣಕಣ ಬಲು ಜೋರಾಗುತ್ತಿದೆ.

ಮಹಿಳೆಯರಲ್ಲಿ ಸಂತಸ:

ಜಿಲ್ಲೆಯ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್‌ ಶಾಸಕಿಯನ್ನು ಕೊಡುಗೆಯಾಗಿ ನೀಡಿದ್ದ ಶಿರಹಟ್ಟಿಕ್ಷೇತ್ರದಲ್ಲಿ ಅದೇ ಕಾಂಗ್ರೆಸ್‌ ಪಕ್ಷ ಮತ್ತೊಮ್ಮೆ ಮಹಿಳೆಯರಿಗೆ ಟಿಕೆಟ್‌ ನೀಡಿದ್ದು ಸಂತಸಕ್ಕೆ ಕಾರಣವಾಗಿದೆ.

ಅತ್ಯಂತ ಸಾಮಾನ್ಯ ಕುಟುಂಬದಿಂದ ಬಂದಿರುವ ಸುಜಾತಾ ದೊಡ್ಡಮನಿ ಮೊದಲು ಅರೇ ಸರ್ಕಾರಿ ಸೇವೆಯಲ್ಲಿ ಕೆಲಸ ಮಾಡಿ ನಂತರ ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಗೆಲುವು ಸಾಧಿಸಿ, ಗದಗ ಜಿಪಂ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಂಘಟನೆ ಮತ್ತು ಜಾತಿ ಪ್ರಾಬಲ್ಯವನ್ನು ಹೊಂದಿರುವ ಸುಜಾತಾ ದೊಡ್ಡಮನಿಗೆ ಟಿಕೆಟ್‌ ಲಭ್ಯವಾಗಿರುವುದು ಸಾಮಾನ್ಯರಿಗೆ ಕಾಂಗ್ರೆಸ್ಸಿನಲ್ಲಿ ಬೆಲೆ ಇದೆ ಎಂದು ಕಾರ್ಯಕರ್ತರು ಹೆಮ್ಮೆಯಿಂದ ಹೇಳುತ್ತಿದ್ದಾರೆ.

ವಿಜಯಪುರ: ಕಾಂಗ್ರೆಸ್‌ ನಾಯಕ ಎಸ್‌.ಆರ್‌. ಪಾಟೀಲ್‌ ಫೋಟೋ ಇರುವ ರಾಶಿ ರಾಶಿ ಗಿಫ್ಟ್‌ ಪತ್ತೆ..!

ಪಕ್ಷದ ವರಿಷ್ಠರು ಸ್ಪರ್ಧೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಕ್ಷೇತ್ರದ ಎಲ್ಲಾ ಹಿರಿಯರನ್ನು, ಯುವಕರು, ಮಹಿಳೆಯರನ್ನು ಸೇರಿದಂತೆ ಪ್ರತಿಯೊಬ್ಬರನ್ನೂ ಒಗ್ಗೂಡಿಸಿಕೊಂಡು ಚುನಾವಣೆ ಎದುರಿಸುತ್ತೇವೆ.

ಸುಜಾತಾ ದೊಡ್ಡಮನಿ ಶಿರಹಟ್ಟಿಮೀಸಲು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ

click me!