
ನವದೆಹಲಿ (ನ.15): 2024ರ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಈಗಿನಿಂದಲೇ ಬಿಜೆಪಿ ಸಿದ್ಧತೆ ಆರಂಭಿಸಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್‌ಪ್ರಕಾಶ್ ನಡ್ಡಾ ಅವರು 100 ದಿನಗಳ ‘ರಾಷ್ಟ್ರೀಯ ವಿಸ್ತೃತ ಪ್ರವಾಸ’ ಕೈಗೊಂಡು ಪಕ್ಷ ಸಂಘಟನೆಗೆ ಮತ್ತಷ್ಟುಬಲ ನೀಡಲು ನಿರ್ಧರಿಸಿದ್ದಾರೆ.
ಇತ್ತೀಚಿನ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಜಯ ಸಾಧಿಸಿದೆ. ಹಾಗಂತ ವಿಶ್ರಾಂತಿ ಪಡೆಯದೆ ಅವರು ರಾಷ್ಟ್ರವ್ಯಾಪಿ ಪ್ರವಾಸ ಕೈಗೊಳ್ಳಲು ಉದ್ದೇಶಿಸಿದ್ದಾರೆ. 2019ರಲ್ಲಿ ಪಕ್ಷ ಎಲ್ಲಿ ಗೆದ್ದಿಲ್ಲವೋ ಅಲ್ಲಿ 2024ರಲ್ಲಿ ಹೇಗೆ ಗೆಲ್ಲಬೇಕು ಎಂಬ ರಣತಂತ್ರವನ್ನು ಅವರು ವೇಳೆ ಹೆಣೆಯಲಿದ್ದಾರೆ. ಇದಕ್ಕೆಂದೆ ಅವರು ಪ್ರವಾಸ ಕೈಗೊಂಡ ರಾಜ್ಯಗಳಲ್ಲಿ ಕೆಲವು ದಿನಗಳ ಕಾಲ ವಾಸ್ತವ್ಯವನ್ನೂ ಹೂಡಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಮಿತ್ರಪಕ್ಷಗಳ ಮುಖಂಡರು ಹಾಗೂ ಬುದ್ಧಿಜೀವಿಗಳ ಜತೆ ಮಾತುಕತೆ ನಡೆಸಲಿದ್ದಾರೆ. ಹೊಸ ಮಿತ್ರಪಕ್ಷಗಳನ್ನು ಹುಡುಕುವ ಕೆಲಸ ಕೂಡ ಮಾಡಿದ್ದಾರೆ ಎಂದು ವರದಿಯಾಗಿದೆ.
ಪುತ್ರ ಹೇಳಿದ ಒಂದೇ ಮಾತಿಗೆ ಜಾರಿಗೊಳಿಸಿದ ಸಿಎಂ: ಇದೆಲ್ಲ ಬಸವ'ಕಲ್ಯಾಣ'ಕ್ಕಾಗಿ...!
ಕೊರೋನಾ ಸುರಕ್ಷತಾ ಕ್ರಮಗಳನ್ನೂ ಪ್ರವಾಸದ ವೇಳೆ ಕೈಗೊಳ್ಳಲಾಗುತ್ತದೆ. ದೊಡ್ಡ ಸಭಾ ಸ್ಥಳಗಳಲ್ಲಿ 200ಕ್ಕಿಂತ ಹೆಚ್ಚು ಜನರನ್ನು ಸೇರಿಸದಂತೆ ಸೂಚಿಸಲಾಗಿದೆ.
ನಡ್ಡಾ ಅವರು ತಮ್ಮ ಪ್ರವಾಸದ ರಾಜ್ಯಗಳನ್ನು ಎ, ಬಿ, ಸಿ ಹಾಗೂ ಡಿ ಗುಂಪುಗಳಾಗಿ ವಿಭಜಿಸಿದ್ದಾರೆ. ಈಗ ಪಕ್ಷ ಆಡಳಿತದಲ್ಲಿರುವ ಕರ್ನಾಟಕ, ಬಿಹಾರ ಸೇರಿದಂತೆ ಹಲವು ರಾಜ್ಯಗಳು ಎ ಗುಂಪಿನಲ್ಲಿ ಬರಲಿವೆ.
ಸಂಪುಟ ಕಸರತ್ತು: ಮತ್ತೆ ಶುರುವಾಯ್ತು ಕತ್ತಿ ವರಸೆ..! :
ಪಕ್ಷ ಅಧಿಕಾರದಲ್ಲಿಲ್ಲದ ರಾಜಸ್ಥಾನ, ಛತ್ತೀಸ್‌ಗಢ, ಮಹಾರಾಷ್ಟ್ರ, ದಿಲ್ಲಿ, ಪಂಜಾಬ್ ಹಾಗೂ ಒಡಿಶಾ ಬಿ ಗುಂಪು ಸೇರ್ಪಡೆಯಾಗಿವೆ. ಸಣ್ಣ ರಾಜ್ಯಗಳಾದ ಮೇಘಾಲಯ, ಮಿಜೋರಂ, ಲಕ್ಷದ್ವೀಪಗಳು ಸಿ ದರ್ಜೆಯಲ್ಲಿ ಹಾಗೂ ವಿಧಾನಸಭೆ ಚುನಾವಣೆ ಎದುರಿಸಲಿರುವ ಕೇರಳ, ಲಕ್ಷದ್ವೀಪ, ಬಂಗಾಳ, ಅಸ್ಸಾಂ ಹಾಗೂ ತಮಿಳುನಾಡುಗಳು ಡಿ ಗುಂಪಿನಲ್ಲಿ ಕಾಣಿಸಿಕೊಂಡಿವೆ.
ಸಿ ದರ್ಜೆಯ ರಾಜ್ಯಗಳಲ್ಲಿ 2 ದಿನ ತಂಗಲಿದ್ದಾರೆ. ಎ ಹಾಗೂ ಬಿ ಗುಂಪಿನ ರಾಜ್ಯಗಳಲ್ಲಿ ತಲಾ 3 ದಿನ ಹಾಗೂ ಉತ್ತರ ಪ್ರದೇಶದಲ್ಲಿ 8 ದಿನ ಪ್ರವಾಸ ಮಾಡಲಿದ್ದಾರೆ. ಅಂದರೆ ಎ ಗುಂಪಿನಲ್ಲಿರುವ ಕರ್ನಾಟಕದಲ್ಲಿ 3 ದಿನಗಳ ಯಾತ್ರೆ ನಡೆಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.