ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 20 ಸ್ಥಾನ: ಸಲೀಂ ಅಹ್ಮದ್‌

By Kannadaprabha News  |  First Published Jul 13, 2023, 4:47 AM IST

ರಾಜ್ಯದ ಜನರು ಶೇ.43ರಷ್ಟು ಮತ ಕೊಟ್ಟು ಸರ್ಕಾರ ರಚಿಸಲು ಅವಕಾಶ ಕೊಟ್ಟಿದ್ದಾರೆ. ನಾವು ಗೆದ್ದಿದ್ದೇವೆಂದು ಬೀಗುವುದಿಲ್ಲ. ಮುಂದಿನ ಐದು ವರ್ಷ ಭ್ರಷ್ಟಾಚಾರ ಮುಕ್ತ ಆಡಳಿತ ಕೊಡುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡು 20ಕ್ಕೂ ಅಧಿಕ ಸ್ಥಾನ ಗೆಲ್ಲುತ್ತೇವೆ. ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದ್ದು ರಾಹುಲ್‌ ಗಾಂಧಿ ಅವರು ಪ್ರಧಾನಮಂತ್ರಿ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಲೀಂ ಅಹ್ಮದ್‌ 


ವಿಧಾನ ಪರಿಷತ್ತು(ಜು.13):  ಮುಂಬರುವ ಲೋಕಸಭಾ ಚುನಾವಣೆಗೆ ಕೇಂದ್ರ ಸರ್ಕಾರ ಬಡವರು, ಯುವಕರು, ರೈತರಿಗೆ ಮಾಡಿರುವ ಅನ್ಯಾಯದ ವಿಚಾರವನ್ನು ಜನತೆಯ ಮುಂದೆ ತೆಗೆದುಕೊಂಡು ಹೋಗುತ್ತೇವೆ. 20 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ವಿಧಾನ ಪರಿಷತ್ತು ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹ್ಮದ್‌ ಹೇಳಿದರು.

ಬುಧವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದ ಜನರು ಶೇ.43ರಷ್ಟು ಮತ ಕೊಟ್ಟು ಸರ್ಕಾರ ರಚಿಸಲು ಅವಕಾಶ ಕೊಟ್ಟಿದ್ದಾರೆ. ನಾವು ಗೆದ್ದಿದ್ದೇವೆಂದು ಬೀಗುವುದಿಲ್ಲ. ಮುಂದಿನ ಐದು ವರ್ಷ ಭ್ರಷ್ಟಾಚಾರ ಮುಕ್ತ ಆಡಳಿತ ಕೊಡುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡು 20ಕ್ಕೂ ಅಧಿಕ ಸ್ಥಾನ ಗೆಲ್ಲುತ್ತೇವೆ. ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದ್ದು ರಾಹುಲ್‌ ಗಾಂಧಿ ಅವರು ಪ್ರಧಾನಮಂತ್ರಿ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Tap to resize

Latest Videos

ಪ್ರಧಾನಿ ಮೋದಿ ಆಡಳಿತದಿಂದ ಜನ ಭ್ರಮಾನಿರಸ: ಶಾಸಕ ರಾಯರಡ್ಡಿ ಟೀಕೆ

ಬಿಜೆಪಿಯ ಪಾಪದ ಕೂಪ ತುಂಬಿತ್ತು. ಆಪರೇಷನ್‌ ಕಮಲದ ಮೂಲಕ ಅನೈತಿಕ ಸರ್ಕಾರ ಮಾಡಿತ್ತು. ಶೇ.40 ಕಮಿಷನ್‌ ಸರ್ಕಾರ ಮತ್ತು ಬೆಲೆ ಏರಿಕೆ ವಿರುದ್ಧ ನಾವು ನಿರಂತರವಾಗಿ ಹೋರಾಟ ಮಾಡಿದ್ದೆವು. ಕೊರೋನಾ ಸಮಯದಲ್ಲೂ ಸಾಕಷ್ಟುಅಕ್ರಮ ನಡೆದಿದ್ದರೂ ತನಿಖೆ ಮಾಡಲಿಲ್ಲ. ಪೆಟ್ರೋಲ್‌, ಗ್ಯಾಸ್‌ ಬೆಲೆ ಏರಿಕೆ ಮಾಡಲಾಗಿದೆ. ಬಿಜೆಪಿ ಯ ಭ್ರಷ್ಟಸರ್ಕಾರದ ವೈಫಲ್ಯ ಜನರ ಮುಂದೆ ಇಟ್ಟಿದ್ದೆವು. ಇವತ್ತು ಗುತ್ತಿಗೆದಾರ ಸಂತೋಷ ಪಾಟೀಲ್‌ ಆತ್ಮಕ್ಕೆ ಶಾಂತಿ ಸಿಕ್ಕಿದೆ. ಅವರು ಬಿಜೆಪಿ ಸರ್ಕಾರದ ಸಚಿವರ ಮೇಲೆ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೆಲ್ಲಾ ಹಿಂದುಗಳ ಹತ್ಯೆ: ಮಾಜಿ ಸಚಿವ ಶ್ರೀರಾಮುಲು

ಕೇಂದ್ರದ ಬಿಜೆಪಿ ಸರ್ಕಾರ ಅನ್ನದಲ್ಲಿ ರಾಜಕೀಯ ಮಾಡುತ್ತಿದೆ. ಅಕ್ಕಿ ಕೊಡದೆ ರಾಜಕೀಯ ಮಾಡುತ್ತಿರುವುದೇಕೆ? ಇಂದಿರಾಗಾಂಧಿ ಹೆಸರಿದೆ ಎನ್ನುವ ಕಾರಣಕ್ಕೆ ಇಂದಿರಾ ಕ್ಯಾಂಟೀನ್‌ ಮುಚ್ಚಿದರು. ನಾವು ಈಗ ಮತ್ತೆ ಇಂದಿರಾ ಕ್ಯಾಂಟೀನ್‌ ಆರಂಭಿಸಿದ್ದೇವೆ. ರಾಜ್ಯ ಸರ್ಕಾರ ನುಡಿದಂತೆ ನಡೆಯುತ್ತೇವೆ. ಮಾಡಿರುವ ವಾಗ್ದಾನ ಈಡೇರಿಸಿ ಇತಿಹಾಸ ನಿರ್ಮಾಣ ಮಾಡುತ್ತೇವೆ. ಇನ್ನು 10 ವರ್ಷ ಬಿಜೆಪಿಯವರು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವಂತೆ ಮಾಡುತ್ತೇವೆ ಎಂದರು.

ಕೇಂದ್ರದಲ್ಲಿ 9 ವರ್ಷ ಬಿಜೆಪಿ ಸುಳ್ಳು ಹೇಳಿದ್ದಾರೋ ಎಲ್ಲ ಹಳ್ಳಿ ಹಳ್ಳಿಗೆ ತಲುಪಿಸುತ್ತೇವೆ. ಸುಳ್ಳಿಗೆ ಏನಾದರೂ ಆಸ್ಕರ್‌ ಅವಾರ್ಡ್‌ ಕೊಡುವುದಾದರೆ ಅದು ಪ್ರಧಾನಮಂತ್ರಿ ಅವರಿಗೆ ಸಲ್ಲುತ್ತದೆ. ಕೇಂದ್ರ ಯಾವುದೇ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಜನರ ಖಾತೆ 15 ಲಕ್ಷ ರು. ಹಾಕುತ್ತೇವೆ ಎಂದಿದ್ದರೂ ಹಾಕಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದರು. ಅದನ್ನು ಮಾಡಿಲ್ಲ ಎಂದು ಆರೋಪಿಸಿದರು.

click me!