ಡಿಕೆಶಿಗೆ ಸಂಕಷ್ಟ ಎದುರಾಗಲಿದ್ದು, ಯಾರಿದಂಲೂ ತಡೆಯಲು ಸಾಧ್ಯವಿಲ್ಲ ಎಂದು ಈ ಹಿಂದೆ ವಿನಯ್ ಗುರೂಜಿ ಭವಿಷ್ಯ ನುಡಿದಿದ್ದರು. ಇದಾದ ಕೆಲ ದಿನಗಳಲ್ಲಿ ಡಿಕೆ ಶಿವಕುಮಾರ್ ಇಡಿ ಕೇಸ್ ನಲ್ಲಿ ಜೈಲಿಗೆ ಹೋಗಿದ್ದರು. ಇದೀಗ ಮತ್ತೆ ವಿನಯ್ ಅವದೂತರು ಡಿಕೆಶಿ ಬಗ್ಗೆ ಭವಿಷ್ಯ ನುಡಿದಿದ್ದು, ಮತ್ತೆ 2 ಸಂಕಷ್ಟದ ಜತೆಗೆ 2 ಹುದ್ದೆಗಳು ಸಿಗಲಿವೆ ಎಂದಿದ್ದಾರೆ.
ಬೆಂಗಳೂರು, [ನ.01]: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ 2 ಸಂಕಷ್ಟದ ನಡುವೆಯೂ ಎರಡು ಹುದ್ದೆಗಳು ಸಿಗಲಿವೆ ಎಂದು ವಿನಯ್ ಗುರೂಜಿ ಮತ್ತೆ ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಿನ ಉತ್ತರಹಳ್ಳಿ ಬಳಿ ಇರುವ ವಿನಯ್ ಗುರೂಜಿ ಆಶ್ರಮಕ್ಕೆ ಇಂದು [ಶುಕ್ರವಾರ] ಡಿಕೆ ಶಿವಕುಮಾರ್ ಭೇಟಿ ನೀಡಿ, ವಿನಯ್ ಅವಧೂತ ಜತೆ ಸುಮಾರ ಮುಕ್ಕಾಲು ಗಂಟೆಗಳ ಕಾಲ ಮಾತುಕತೆ ನಡೆಸಿದರು.
ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಮತ್ತೆ ಏರುಪೇರು, ಆಸ್ಪತ್ರೆಗೆ ದಾಖಲು
ಈ ವೇಳೆ ವಿನಯ್ ಗುರೂಜಿ ಮತ್ತೆ ಡಿಕೆಶಿ ಬಗ್ಗೆ ಭವಿಷ್ಯ ನುಡಿದಿದ್ದಾರೆ. "ನಿಮ್ಮ ಮುಂದೆ ಮತ್ತೆ 2 ಕಷ್ಟಗಳು ಬರಲಿವೆ. ಹಾಗೆಯೇ ಎರಡು ಹುದ್ದೆಗಳು ನಿಮಗೆ ಸಿಗಲಿವೆ. ಆ ಕಷ್ಟಗಳ ಮಧ್ಯೆಯೇ ಒಂದು ಹುದ್ದೆ ಸಿಕ್ಕರೂ ಸಿಗಬಹುದು. ಇನ್ನೊಂದು ದೊಡ್ಡ ಹುದ್ದೆ ನಿಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿದ ಮೇಲೆ ಸಿಗಲಿದೆ," ಎಂದು ಡಿಕೆಶಿಗೆ ಭವಿಷ್ಯ ಹೇಳಿದರು.
ಆ ಬಿಜೆಪಿ ನಾಯಕನ ಭೇಟಿ ಮಾಡಿದ್ರೆ ಹೀಗಾಗ್ತಿರಲಿಲ್ಲ... ಡಿಕೆಶಿಗೆ ಭವಿಷ್ಯ ಹೇಳಿದ್ದ ವಿನಯ್ ಗುರೂಜಿ
ಮತ್ತೆ ಎರಡು ಕಷ್ಟಗಳು ಬರಲಿವೆ ಎಂದು ನೀವು ಹೇಳುತ್ತೀರಿ, ಆದರೆ ಎಲ್ಲಾ ಕಷ್ಟಗಳು ಮುಗಿಯಿತು ಎಂದು ಕೆಲವರು ಹೇಳುತ್ತಾರಲ್ಲ ಎಂದು ಡಿಕೆಶಿ ಗುರೂಜಿಗೆ ಪ್ರಶ್ನೆ ಮಾಡಿದರು. ಅದಕ್ಕೆ ಉತ್ತರಿಸಿದ ವಿನಯ್ ಗುರೂಜಿ, ಅವರು ನಿಮ್ಮನ್ನು ಮೆಚ್ಚಿಸಲು ಹಾಗೆ ಹೇಳಬಹುದು. ನಾನು ನಿಮ್ಮಿಂದ ಯಾವ ನಿರೀಕ್ಷೆಯನ್ನೂ ಅಪೇಕ್ಷಿಸದೆ ಇದನ್ನು ಹೇಳುತ್ತಿದ್ದೇನೆ ಎಂದು ಡಿಕೆಶಿಗೆ ಗುರೂಜಿ ಹೇಳಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗೆ ನಡುಕ ಹುಟ್ಟಿಸಿದೆ ಕೋಡಿ ಮಠದ ಭವಿಷ್ಯ
ಡಿಕೆಶಿ ಜೈಲಿಗೆ ಹೋಗುವ ಮುನ್ನ ವಿನಯ್ ಗುರೂಜಿ ಅವರ ಬಗ್ಗೆ ಭವಿಷ್ಯ ನುಡಿದಿದ್ದರು. ನಿಮಗೆ ಎದುರಾಗಲಿರುವ ಸಂಕಷ್ಟವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ವಿನಯ್ ಗುರೂಜಿ ಹೇಳಿದ್ದರು.
ಅವಧೂತರು ಭವಿಷ್ಯ ನುಡಿದಿದ್ದ ಕೆಲ ದಿನಗಳಲ್ಲೇ ಡಿಕೆಶಿಗೆ ಇಡಿ ಸಂಕಷ್ಟ ಎದುರಾಗಿತ್ತು. ಈ ಮೂಲಕ ಅಂದು ವಿನಯ್ ಗುರೂಜಿ ನುಡಿದಿದ್ದ ಭವಿಷ್ಯ ನಿಜವಾಗಿತ್ತು. ಇದೀಗ ಮತ್ತೊಂದು ಭವಿಷ್ಯ ನುಡಿದಿರುವುದು ಡಿಕೆಶಿ ನಿದ್ದೆಗೆಡಿಸಿದೆ.