ರಾಜ್ಯ ಕಾಂಗ್ರೆಸ್‌ಗೆ ಇಬ್ಬರು ಹೊಸ ಎಐಸಿಸಿ ಕಾರ‍್ಯದರ್ಶಿಗಳು

By Kannadaprabha NewsFirst Published Oct 12, 2021, 7:46 AM IST
Highlights
  • ಸಂಸದ ಕುಲದೀಪ್‌ ರಾಯ್‌ ಶರ್ಮಾ ಮತ್ತು ಶಾಸಕ ರಮಿಂದರ್‌ ಸಿಂಗ್‌ ಅವಲ ಅವರಿಗೆ ಹೊಸ ಜವಾಬ್ದಾರಿ
  •  ಕರ್ನಾಟಕ ಕಾಂಗ್ರೆಸ್‌ ಘಟಕಕ್ಕೆ ಎಐಸಿಸಿ ಹೊಸ ಕಾರ್ಯದರ್ಶಿಳಾಗಿ ನೇಮಕ

ನವದೆಹಲಿ (ಅ.12): ಸಂಸದ ಕುಲದೀಪ್‌ ರಾಯ್‌ ಶರ್ಮಾ (Kuldeep roy Sharma) ಮತ್ತು ಶಾಸಕ ರಮಿಂದರ್‌ ಸಿಂಗ್‌  ಅವಲ (Raminder sing avala) ಅವರನ್ನು ಕರ್ನಾಟಕ (karnataka) ಕಾಂಗ್ರೆಸ್‌ ಘಟಕಕ್ಕೆ (Congress) ಎಐಸಿಸಿ (AICC) ಹೊಸ ಕಾರ್ಯದರ್ಶಿಳಾಗಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. 

ಇವರಿಬ್ಬರೂ, ಹಾಲಿ ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿಯಾಗಿರುವ ರಣದೀಪ್‌ ಸುರ್ಜೇವಾಲಾ (Randeep Surjewala) ಜೊತೆಗೆ ಕಾರ್ಯನಿರ್ವಹಿಸಲಿದ್ದಾರೆ. ಕುಲದೀಪ್‌ ರಾಯ್‌ ಅಂಡಮಾನ್‌ ಮತ್ತು ನಿಕೋಬಾರ್‌ನ ಕಾಂಗ್ರೆಸ್‌ ಸಂಸದರಾಗಿದ್ದರೆ, ರಮಿಂದರ್‌ ಪಂಜಾಬ್‌ನಲ್ಲಿ ಕಾಂಗ್ರೆಸ್‌ (Congress) ಶಾಸಕರಾಗಿದ್ದಾರೆ.

ಹೊಸ ಮುಖ 

ಕಾಂಗ್ರೆಸ್‌(Congess) ಬಿಜೆಪಿ(BJP) ಮಾದರಿಯನ್ನೇ ಜಾರಿಗೊಳಿಸಲು ಸಿದ್ಧತೆ ನಡೆಸುತ್ತಿದೆಯಾ? ಪಕ್ಷದ ಹಿರಿ ತಲೆಗಳಿಗೆ ಕಡ್ಡಾಯ ನಿವೃತ್ತಿಗೆ ಚಿಂತನೆ ನಡೆಸುತ್ತಿರುವುದೇ ಇಂತಹುದ್ದೊಂದು ಅನುಮಾನ ಸೃಷ್ಟಿಸಿದೆ. 

ಬಿಜೆಪಿ ಹಾದಿಯಲ್ಲಿ ಕಾಂಗ್ರೆಸ್‌: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸ ಮುಖ?

ಈ ನಿಟ್ಟಿನಲ್ಲಿ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್‌ ಯುವ ಮುಖ ಹಾಗೂ ಪಕ್ಷಕ್ಕೆ ನಿಷ್ಠರಾಗಿರುವವರಿಗೆ ಮಹತ್ವದ ಜವಾಬ್ದಾರಿ ನೀಡಲು ಮುಂದಾಗಿದೆ. ಸದ್ಯ ಪಕ್ಷ ಬಲವರ್ಧನೆಗೆ ಪೈಲಟ್(Sachin Pilot) ಅಥವಾ ಗೆಹ್ಲೋಟ್‌ಗೆ ಎಐಸಿಸಿ(AICC) ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.  

.ಸಿದ್ದರಾಮಯ್ಯಗೇಕೆ ರಾಜ ಮರ್ಯಾದಿ

 

ಒಂದು ಕಡೆ ಗುಲಾಂ ನಬಿ(Ghulam Nabi Azad), ಕಪಿಲ್‌ ಸಿಬಲ್‌(Kapil Sibal); ಇನ್ನೊಂದು ಕಡೆ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ರಂಥ(Amarinder Singh) ನಾಯಕರು ನೇರವಾಗಿ ರಾಹುಲ್‌(Rahul Gandhi) ಮತ್ತು ಪ್ರಿಯಾಂಕಾ ಗಾಂಧಿ(Priyanka Gandhi)​ ವಿರುದ್ಧ ಆಂತರಿಕ ಯುದ್ಧ ಹೂಡಿರುವಾಗ ಕಾಂಗ್ರೆಸ್‌(Congress) ಬಳಿ ಇರುವ ಮಾಸ್‌ ನಾಯಕರು ಅಂದರೆ ಇಬ್ಬರು. ಒಬ್ಬರು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌(Ashok Gehlot) ಮತ್ತು ಇನ್ನೊಬ್ಬರು ಸಿದ್ದರಾಮಯ್ಯ(Siddaramaiah). ಹೀಗಾಗಿ ಹಿರಿಯರು ಒಬ್ಬೊಬ್ಬರೇ ದೂರ ಆಗುತ್ತಿರುವಾಗ ಸೋನಿಯಾ ಗಾಂಧಿ​(Sonia Gandhi) ಅವರೇ ಹಿರಿಯರನ್ನು ಕರೆದು ಮಾತನಾಡಿಸುತ್ತಿದ್ದಾರೆ.

ಸರಿಯಾಗಿ 2 ವರ್ಷದಿಂದ ಸೋನಿಯಾ ಮುಖತಃ ಸಿದ್ದರಾಮಯ್ಯ(Sonia Gandhi) ಸೇರಿದಂತೆ ಯಾರನ್ನೂ ಭೇಟಿ ಆಗಿರಲಿಲ್ಲ. ಏನಿದ್ದರೂ ರಾಹುಲ್‌ ಗಾಂಧಿಯನ್ನು(Rahul gandhi) ಭೇಟಿ ಆಗಿ ಎನ್ನುತ್ತಿದ್ದರು. ಆದರೆ ಪಕ್ಷದ ಪರಿಸ್ಥಿತಿ ನಾಜೂಕು ಆಗುತ್ತಿರುವಾಗ, ಒಬ್ಬೊಬ್ಬರೇ ಹಿರಿಯರು ಹೊರಗೆ ಹೋಗುತ್ತಿರುವಾಗ ಅಳಿದು ಉಳಿದ ನಾಯಕರನ್ನು ಕರೆದು ಮಾತನಾಡಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸೋನಿಯಾ ಸಿದ್ದುರನ್ನು ಕರೆಸಿ ಮಾತನಾಡಿದ್ದಾರೆ. ಒಂದು ಕಾಲದಲ್ಲಿ ಗಾಂಧಿ​ ಪರಿವಾರದ ನಾಯಕರನ್ನು ಭೇಟಿ ಆಗಲು ರಾಜ್ಯದ ನಾಯಕರು ಎರಡು ಮೂರು ದಿನ ಡೇರೆ ಹಾಕಿ ದಿಲ್ಲಿಯಲ್ಲಿ ಕುಳಿತುಕೊಳ್ಳುತ್ತಿದ್ದರು. ಆದರೆ ಈ ಬಾರಿ ಸಿದ್ದು ಸಮಯ ಕೂಡ ಕೇಳದೆ ಸೋನಿಯಾರ ಆಪ್ತ ಕಾರ್ಯದರ್ಶಿ ಮಾಧವನ್‌ ಅವರು ಸಿದ್ದರಾಮಯ್ಯಗೆ ಫೋನ್‌ ಮಾಡಿ ‘ನಾಳೆ ಬರಲೇಬೇಕು, ಮೇಡಂ ಭೇಟಿ ಆಗಬೇಕು ಎಂದಿದ್ದಾರೆ’ ಅಂದಾಗ ಸಿದ್ದು ತರಾತುರಿಯಲ್ಲಿ ದಿಲ್ಲಿಗೆ ಹಾರಿದ್ದಾರೆ. ಉಸ್ತುವಾರಿ ಇರಲಿಲ್ಲ, ರಾಹುಲ್‌ ಇರಲಿಲ್ಲ. ಕೇವಲ ಸೋನಿಯಾ ಒಬ್ಬರೇ ಸಿದ್ದುರನ್ನು ಕೂರಿಸಿಕೊಂಡು 35 ನಿಮಿಷ ಮಾತನಾಡಿಸಿದ್ದಾರೆ. ರಾಜ್ಯದ ರಾಜಕೀಯ ಪರಿಸ್ಥಿತಿ, ಯಡಿಯೂರಪ್ಪ, ದೇವೇಗೌಡ ಮತ್ತು ಜಾತಿ ಸಮೀಕರಣ ಹೀಗೆ ಎಲ್ಲಾ ವಿಷಯಗಳ ಬಗ್ಗೆ ಸೋನಿಯಾ ಸಿದ್ದು ಅವರ ಅಭಿಪ್ರಾಯ ಆಲಿಸಿದ್ದಾರೆ. ಮುಂದಿನ ಚುನಾವಣೆಯ ತಯಾರಿ ಬಗ್ಗೆ ಕೂಡ ಮಾತನಾಡಿದ್ದಾರೆ. ದಿಲ್ಲಿ ಮೂಲಗಳು ಮತ್ತು ಸಿದ್ದು ಆಪ್ತ ಮೂಲಗಳು ಹೇಳುವ ಪ್ರಕಾರ, ಹಿರಿಯ ನಾಯಕರೊಂದಿಗೆ ಒಂದು ವೈಯಕ್ತಿಕ ಸಂವಹನ ಇಟ್ಟುಕೊಳ್ಳುವ ಪ್ರಯತ್ನದ ಭಾಗವಾಗಿ ಸೋನಿಯಾ ತಾವೇ ಸಿದ್ದರಾಮಯ್ಯರನ್ನು ಕರೆದು ಮಾತನಾಡಿಸಿದ್ದಾರೇ ಹೊರತು, ಹಾಗೆ ಮಾಡಿ, ಹೀಗೆ ಮಾಡಿ ಎಂದು ಸಲಹೆ ಸೂಚನೆ ನೀಡುವ ಗೊಡವೆಗೆ ಹೋಗಿಲ್ಲ. ಸಿದ್ದು ಆಪ್ತರು ಹೇಳುವ ಪ್ರಕಾರ, ಕಳೆದ ಒಂದು ವರ್ಷದಿಂದ ಇದ್ದ ಸಣ್ಣಪುಟ್ಟಬೇಸರ, ದ್ವಂದ್ವ, ಅಸಮಾಧಾನಗಳು ಸೋನಿಯಾ ಭೇಟಿ ನಂತರ ಕಡಿಮೆ ಆಗಿವೆಯಂತೆ.

click me!