ಚಿಕ್ಕಮಗಳೂರು: 103 ನಾಮಿನೇಷನ್‌, 2 ತಿರಸ್ಕಾರ 100 ನಾಮಪತ್ರ ಸಿಂಧು

By Girish GoudarFirst Published Apr 22, 2023, 12:00 AM IST
Highlights

5 ವಿಧಾನಸಭಾ ಕ್ಷೇತ್ರಗಳಲ್ಲಿ 73 ಅಭ್ಯರ್ಥಿಗಳು ಕಣದಲ್ಲಿ, 101 ನಾಮಪತ್ರಗಳ ಪೈಕಿ ಒಟ್ಟು 38 ನಾಮಪತ್ರಗಳು ಪಕ್ಷೇತರರದ್ದು , ಮತ ವಿಭಜನೆ ತಡಯುವ ಸಲುವಾಗಿ ಪಕ್ಷೇತರರನ್ನು ಕಣದಿಂದ ಹೊರತರಲು ತಂತ್ರ, ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಸಿರುವ ಪಕ್ಷೇತರರು, ಕಾಂಗ್ರೆಸ್ ಹಾಗೂ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿರುವ ಪಕ್ಷೇತರರ ಸ್ಪರ್ಧೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಏ.22):  ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಹಾಗೂ ಪರಿಶೀಲನೆ ಪ್ರಕ್ರಿಯೆಗಳು ಪೂರ್ಣಗೊಂಡ ಬೆನ್ನಲ್ಲೇ ಪ್ರಮುಖ ರಾಜಕೀಯ ಪಕ್ಷಗಳು ಮತ ವಿಭಜನೆ ತಡಯುವ ಸಲುವಾಗಿ ಪಕ್ಷೇತರರನ್ನು ಕಣದಿಂದ ಹೊರತರಲು ತಂತ್ರಗಳನ್ನು ರೂಪಿಸಲಾರಂಭಿಸಿದ್ದಾರೆ. ಈ ಬಾರಿ ಚಿಕ್ಕಮಗಳೂರು ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಸಿರುವ ಪಕ್ಷೇತರರು ಪ್ರಮುಖವಾಗಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದ್ದಾರೆ. ಯಾರು ತಮ್ಮ ಸಾಂಪ್ರದಾಯಿಕ ಮತ ಬುಟ್ಟಿಗೆ ಕೈಹಾಕುತ್ತಾರೆ ಎಂದು ಗುರುತಿಸಿ ಅಂತಹ ಅಭ್ಯರ್ಥಿಗಳನ್ನು ಈಗ ಕಣದಿಂದ ಹೊರಗುಳಿಯುವಂತೆ ಮಾಡಲು ಕಸರತ್ತು ಆರಂಭವಾಗಿದೆ.

Latest Videos

ಪಕ್ಷೇತರರ ಮೇಲೆ ಒತ್ತಡ ಹೆಚ್ಚಾಗುವ ಸಾಧ್ಯತೆ

ಪಕ್ಷೇತರರ ಪೈಕಿ ಬಹುತೇಕರು ಗಮನಾರ್ಹ ಪ್ರಮಾಣದ ಮತಗಳಿಸುವವರಿದ್ದರೆ, ಇನ್ನೂ ಕೆಲವರು ಬೆರಳೆಣಿಕೆ ಮತಗಳನ್ನು ಪಡೆಯುವವರೂ ಇದ್ದಾರೆ. ಈ ಪೈಕಿ ಯಾರನ್ನು ಹೊರತರಬೇಕು. ಯಾವ ರೀತಿಯ ಒತ್ತಡ ತರಬೇಕು, ಮತ್ಯಾರನ್ನು ಕಡೆಗಣಿಸಬೇಕು ಎನ್ನುವ ಚಿಂತನೆ ಪ್ರಮುಖ ಪಕ್ಷಗಳಲ್ಲಿ ನಡೆಯುತ್ತಿದೆ.ಚುನಾವಣೆ ಫಲಿತಾಂಶದಲ್ಲಿ ಪ್ರತಿಯೊಂದು ಮತವೂ ಮಹತ್ವ ಪಡೆಯುವುದರಿಂದಾಗಿ ಯಾವುದನ್ನೂ ಕಡೆಗಣಿಸುವಂತಿಲ್ಲ. ಸಣ್ಣ ಪ್ರಮಾಣದ ಮತ ವಿಭಜನೆ ಸಹ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಈ ಹಿನ್ನೆಲೆಯಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲವರನ್ನು ಕಣದಲ್ಲೇ ಉಳಿಸುವ ಮತ್ತೆ ಕೆಲವರನ್ನು ಹೊರಕ್ಕೆ ತರುವ ಪ್ರಯತ್ನ ಅನಿವಾರ್ಯ ಎಂದು ಮುಖಂಡರೊಬ್ಬರು ಅಭಿಪ್ರಾಯಿಸುತ್ತಾರೆ.ಈ ಕಾರಣಕ್ಕೆ ನಾಮಪತ್ರ ಹಿಂದಕ್ಕೆ ಪಡೆಯಲು ಕಡೆಯ ದಿನವಾದ ಏಪ್ರಿಲ್ 24 ರ ವರೆಗೆ ಕೆಲವು ಪಕ್ಷೇತರರಮೇಲೆ ಒತ್ತಡ ಹೆಚ್ಚಾಗುವ ಸಾಧ್ಯತೆಗಳೂ ಇವೆ. 

ಹಾರಿಬಂದವರನ್ನು ಪಕ್ಷಕ್ಕೆ ಸೇರಿಸಿ ರಾತ್ರಿ ಕಂಡ ಬಾವಿಗೆ ಹಗಲು ಬೀಳಲು ಹೊರಟಿದ್ದಾರೆ ಎಚ್‌ಡಿಕೆ: ಸಿ.ಟಿ.ರವಿ

101 ನಾಮಪತ್ರಗಳ ಪೈಕಿ ಒಟ್ಟು 38 ನಾಮಪತ್ರಗಳು ಪಕ್ಷೇತರರದ್ದು 

ಜಿಲ್ಲೆಯಲ್ಲಿ ಸಲ್ಲಿಕೆಯಾಗಿರುವ ಒಟ್ಟು 103 ನಾಮಪತ್ರಗಳ ಪೈಕಿ 2 ನಾಮಪತ್ರಗಳಳು ತಿರಸ್ಕಾರವಾಗಿದೆ. ಇನ್ನು ಉಳಿದ ನಾಮಪತ್ರಗಳಲ್ಲಿ ಒಟ್ಟು 38 ನಾಮಪತ್ರಗಳು ಪಕ್ಷೇತರರದ್ದಾಗಿದೆ. ಇನ್ನುಳಿದವರು ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಹಾಗೂ ಗುರುತಿಸಿಕೊಳ್ಳದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳದ್ದಾಗಿವೆ.38 ಮಂದಿ ಪಕ್ಷೇತರರ ಪೈಕಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 14 ಮಂದಿ ಹಾಗೂ ತರೀಕೆರೆ ಕ್ಷೆತ್ರದಲ್ಲಿ 11 ಅತೀ ಹೆಚ್ಚು ಪಕ್ಷೇತರರಿದ್ದಾರೆ. ಉಳಿದ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಪಕ್ಷೇತರರು ಅಷ್ಟೇನು ತಲೆನೋವಾಗುವುದಿಲ್ಲ.ಇದರೊಂದಿಗೆ ಕೆಲವು ಕ್ಷೇತ್ರಗಳಲ್ಲಿ ಎಎಪಿ, ಬಿಎಸ್ಪಿ, ಎಸ್ಡಿಪಿಐ, ಸಿಪಿಐ ಸೇರಿದಂತೆ ಕೆಲವು ಗುರುತಿಸಿಕೊಳ್ಳದ ಪಕ್ಷದ ಅಭ್ಯರ್ಥಿಗಳೂ ಈ ಬಾರಿ ನಾಮಪತ್ರ ಸಲ್ಲಿಸಿದ್ದು, ಅವರಲ್ಲಿ ಯಾರೂ ನಾಮಪತ್ರ ಹಿಂದಕ್ಕೆ ಪಡೆಯುವ ಸಾಧ್ಯತೆಗಳು ಕಡಿಮೆ ಅವರಿಂದ ಉಂಟಾಗುವ ಪರಿಣಾಮ, ನಷ್ಟ, ಹಾಗೂ ಅದನ್ನು ನಿಯಂತ್ರಿಸುವ ಕ್ರಮಗಳ ಬಗ್ಗೆಯೂ ಪ್ರಮುಖ ಪಕ್ಷಗಳು ಚಿಂತನೆ ನಡೆಸುತ್ತಿವೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!