ಕೆಆರ್ ಪೇಟೆಯಲ್ಲಿ 1700 ಕೋಟಿ ವೆಚ್ಚದ ಕಾಮಗಾರಿ‌ : ಅಭಿವೃದ್ಧಿ ಹೆಸರಲ್ಲಿ ನಾರಾಯಣಗೌಡ ಶಕ್ತಿ ಪ್ರದರ್ಶನ

Published : Jul 21, 2022, 06:21 PM ISTUpdated : Jul 21, 2022, 06:22 PM IST
ಕೆಆರ್ ಪೇಟೆಯಲ್ಲಿ 1700 ಕೋಟಿ ವೆಚ್ಚದ ಕಾಮಗಾರಿ‌ : ಅಭಿವೃದ್ಧಿ ಹೆಸರಲ್ಲಿ ನಾರಾಯಣಗೌಡ ಶಕ್ತಿ ಪ್ರದರ್ಶನ

ಸಾರಾಂಶ

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹುಟ್ಟೂರು ಕೆಆರ್ ಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ. ಮುಂಬರುವ ಚುನಾವಣೆಯಲ್ಲಿ ನಾರಾಯಣಗೌಡ ಮಾಡಿರುವ ಕೆಲಸಕ್ಕೆ 1 ಲಕ್ಷ ಅಂತರದಲ್ಲಿ ಗೆಲ್ಲಿಸುವಂತೆ ಮನವಿ ಮಾಡಿದ ಯಡಿಯೂರಪ್ಪ

ವರದಿ: ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, 

ಮಂಡ್ಯ (ಜು.21): ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹುಟ್ಟೂರು ಕೆಆರ್ ಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿದೆ. ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ.ಕೆ.ಸಿ ನಾರಾಯಣಗೌಡರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. 

ಕುಡಿಯುವ ನೀರು(), ಸಣ್ಣ ನೀರಾವರಿ, ಲೋಕೋಪಯೋಗಿ, ಆರೋಗ್ಯ , ಹಿಂದುಳಿದ ವರ್ಗಗಳ ಕಲ್ಯಾಣ, ಕ್ರೀಡಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗೆಗಳ 1700 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ದೊರೆಯಿತು. ಬಳಿಕ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸರ್ಕಾರಿ ಸವಲತ್ತುಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ವಿತರಿಸಿದರು.

ನಾವು ಹುಟ್ಟುಹಬ್ಬ ಮಾಡ್ಕೋತಿದ್ರೆ ಬಿಜೆಪಿಗೆ ನಡುಕ: ಸಿದ್ದರಾಮಯ್ಯ

ಅಭಿವೃದ್ಧಿ ಕಾರ್ಯಕ್ರಮ ಹೆಸರಲ್ಲಿ ಬೃಹತ್ ಶಕ್ತಿ ಪ್ರದರ್ಶನ:

ಕೆಆರ್ ಪೇಟೆ(K.R.Pete) ಉಪಚುನಾವಣೆಯಲ್ಲಿ ಗೆದ್ದು ಮಂಡ್ಯ(Mandya)ದಲ್ಲಿ ಮೊದಲ ಬಾರಿಗೆ ಬಿಜೆಪಿ(BJP) ಬಾವುಟ ಹಾರಿಸಿದ ನಾರಾಯಣಗೌಡ(K.C.NarayanaGowda) ತಮ್ಮ 60ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡರು. ಕಳೆದ ಚುನಾವಣೆ ವೇಳೆ ಅಭಿವೃದ್ಧಿಯ ಆಶ್ವಾಸನೆ ನೀಡಿದ್ದ ನಾರಾಯಣಗೌಡ ಕೆಆರ್ ಪೇಟೆ ಪಟ್ಟಣದಲ್ಲಿ ಬೃಹತ್ ಸಮಾವೇಶ ಆಯೋಜಿಸಿ ಋಣ ಸಂದಾಯ ಮಾಡು ಕೆಲಸ ಮಾಡಿದ್ದಾರೆ. ಜೊತೆಗೆ ಅಭಿವೃದ್ಧಿ ಕಾರ್ಯಕ್ರಮ ಹೆಸರಲ್ಲಿ ಶಕ್ತಿ ಪ್ರದರ್ಶನ ನಡೆಸಿ ಮುಂಬರುವ ಚುನಾವಣೆಗೆ ತಯಾರಿ ಆರಂಭಿಸಿದ್ದಾರೆ. 1700 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ತಾಲೂಕಿನ ಮೂಲೆ ಮೂಲೆಗಳಿಂದ ಸಹಸ್ರಾರು ಜನರು ಆಗಮಿಸಿದ್ದರು. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರೂರು ಕೆಆರ್ ಪೇಟೆಗೆ ಆಗಮಿಸಿದ್ದ ಬಿಎಸ್ ಯಡಿಯೂರಪ್ಪ(B.S.Yadiyurappa) ನೆರೆದಿದ್ದ ಜನರನ್ನ ಕಂಡು ಹರ್ಷ ವ್ಯಕ್ತಪಡಿಸಿದರು. ಇನ್ನು ನಾರಾಯಣಗೌಡರ ಕಾರ್ಯವೈಖರಿ ಹಾಡಿ ಹೊಗಳಿದ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಮುಂಬರುವ ಚುನಾವಣೆಯಲ್ಲೂ ನಾರಾಯಣಗೌಡರನ್ನ ಬೆಂಬಲಿಸುವಂತೆ ಜನರಲ್ಲಿ ಮನವಿ ಮಾಡಿದರು. ಈ ಕಾರ್ಯಕ್ರಮದಲ್ಲಿ ಸಚಿವರಾದ ಗೋವಿಂದ ಕಾರಜೋಳ(Govid Karjol), ಆರ್ ಅಶೋಕ್(R.Ashok), ಗೋಪಾಲಯ್ಯ(K.Gopalaiah), ಕೋಟಾ ಶ್ರೀನಿವಾಸ್ ಪೂಜಾರಿ(Kota Shrinivas Pujari) ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ (B.Y.Vijayendra)ಸೇರಿದಂತೆ ಹಲವರು ಭಾಗಿಯಾಗಿದ್ದರು.

ಕೆಆರ್ ಪೇಟೆಗೆ ಮೆಡಿಕಲ್ ಕಾಲೇಜು ನೀಡುವಂತೆ ನಾರಾಯಣಗೌಡ ಮನವಿ :

ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಬಳಿಕ ಮಾತನಾಡಿದ ಸಚಿವ ಕೆಸಿ ನಾರಾಯಣಗೌಡ ಬಿಎಸ್ ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದರು‌. ಕೆ.ಆರ್.ಪೇಟೆಯನ್ನು ಎರಡನೇ ಶಿಕಾರಿಪುರ ಮಾಡುತ್ತೇನೆ ಅಂತ ಬಿಎಸ್‌ವೈ ಮಾತು ಕೊಟ್ಟಿದ್ದರು. ಅವರು ಸಿಎಂ ಆಗಿದ್ದಾಗ ನೂರಾರು ಕೋಟಿ ಅನುದಾನವನ್ನು ನೀಡಿದ್ದಾರೆ. ಈಗ ಸಿಎಂ ಬಸವರಾಜ

ಯಡಿಯೂರಪ್ಪ ನಡೆ ಆಧರಿಸಿ ಕಾಂಗ್ರೆಸ್‌ ಹೆಜ್ಜೆ: ಕುಮಾರಸ್ವಾಮಿ
ಬೊಮ್ಮಾಯಿ ಕೂಡ ಅಭಿವೃದ್ಧಿ ಕೆಲಸಗಳಿಗೆ ಇಲ್ಲ ಅನ್ನಲ್ಲ. ಆದರೆ ನಮ್ಮ ತಾಲೂಕಿನ ಹಳ್ಳಿಗಳ ರಸ್ತೆಗಳು ಹದಗೆಟ್ಟಿದೆ ಸಮಸ್ಯೆ ಬಗೆಹರಿಸಲು ಅನುದಾನ ನೀಡಿ ಎಂದು ಮನವಿ ಮಾಡಿಕೊಂಡರು. ಬಳಿಕ ಮೆಡಿಕಲ್ ಕಾಲೇಜು ಮಂಜೂರು ಮಾಡುವಂತೆ ಸಿಎಂ ಬಳಿ ಮನವಿ ಮಾಡಿದ ನಾರಾಯಣಗೌಡ. ನಮ್ಮ ತಾಲೂಕಿನಲ್ಲಿ ಯಡಿಯೂರಪ್ಪ ಅವರ ಹೆಸರಿನಲ್ಲಿ ಮೆಡಿಕಲ್‌ ಕಾಲೇಜು ಮಂಜೂರು ಮಾಡಿ. 17 ಎಕರೆ ಜಾಗವನ್ನು ನಾವೇ ನೀಡುತ್ತೇವೆ ಎಂದು ಮನವಿ ಮಾಡಿದರು.

ಒಂದು ಲಕ್ಷ ಅಂತರದಲ್ಲಿ ನಾರಾಯಣಗೌಡ ಗೆಲ್ಲಿಸಿ : ಬಿಎಸ್‌ವೈ

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿಸಿಎಂ ಯಡಿಯೂರಪ್ಪ. ನನ್ನ ತವರು ತಾಲೂಕಿನಲ್ಲಿ ಇಷ್ಟು ಜನ ಸೇರಿರುವುದು ನನಗೆ ಆನಂದ ತಂದಿದೆ. ಕೆಆರ್‌ಪೇಟೆ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆಯಬೇಕಾದ ದಿನ ಇದು. ಕಳೆದ ಚುನಾವಣೆಯಲ್ಲಿ ಕಷ್ಟ ಪಟ್ಟು ಗೆಲವು ಸಾಧಿಸಬೇಕಾಯಿತು. ಮುಂಬರುವ ಚುನಾವಣೆಯಲ್ಲಿ ನಾರಾಯಣಗೌಡ ಮಾಡಿರುವ ಕೆಲಸಕ್ಕೆ 1 ಲಕ್ಷ ಅಂತರದಲ್ಲಿ ಗೆಲ್ಲಿಸಬೇಕು, ಎದುರಾಳಿಗಳು ಠೇವಣಿ ಕಳೆದಕೊಳ್ಳಬೇಕು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ
ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!