ರಾಜ್ಯದ 27 ಎಂಪಿಗಳು ಕನ್ನಡದಲ್ಲಿ, ಕಾಗೇರಿ ಸಂಸ್ಕೃತದಲ್ಲಿ ಪ್ರಮಾಣವಚನ!

By Kannadaprabha NewsFirst Published Jun 25, 2024, 5:44 AM IST
Highlights

18ನೇ ಲೋಕಸಭಾ ಚುನಾವಣೆಯಲ್ಲಿ ವಿಜೇತರಾದ ನೂತನ ಸದಸ್ಯರು ಸೋಮವಾರ ಸಂಸತ್‌ನ ಮೊದಲ ಅಧಿವೇಶನದಲ್ಲಿ ಕನ್ನಡ, ಬೆಂಗಾಲಿ, ಸಂಸ್ಕೃತ, ಒಡಿಯಾ, ಹಿಂದಿ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಪ್ರಮಾಣ ವಚನ ಸ್ವೀಕರಿಸದರು

ನವದೆಹಲಿ (ಜೂ.25): 18ನೇ ಲೋಕಸಭಾ ಚುನಾವಣೆಯಲ್ಲಿ ವಿಜೇತರಾದ ನೂತನ ಸದಸ್ಯರು ಸೋಮವಾರ ಸಂಸತ್‌ನ ಮೊದಲ ಅಧಿವೇಶನದಲ್ಲಿ ಕನ್ನಡ, ಬೆಂಗಾಲಿ, ಸಂಸ್ಕೃತ, ಒಡಿಯಾ, ಹಿಂದಿ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಪ್ರಮಾಣ ವಚನ ಸ್ವೀಕರಿಸದರು. ಕೆಲವರು ಇಂಗ್ಲೀಷ್‌ನಲ್ಲೂ ಪ್ರಮಾಣ ವಚನ ಸ್ವೀಕರಿಸಿದರು. ಎಲ್ಲಾ ಸಂಸದರಿಗೂ ಹಂಗಾಮಿ ಸ್ವೀಕರ್‌ ಭರ್ತೃಹರಿ ಮೆಹ್ತಾಬ್‌ ಅವರು ಪ್ರಮಾಣ ವಚನ ಬೋಧಿಸಿದರು.

ಪ್ರಧಾನಿ ನರೇಂದ್ರ ಮೋದಿ(Narendra Modi) ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಆಡಳಿತ ಪಕ್ಷದ ಸದಸ್ಯರ ಕಡೆಯಿಂದ ಜೈ ಶ್ರೀರಾಮ್‌ ಎಂಬ ಘೋಷಣೆ ಕೇಳಿಬಂತು. ಇನ್ನು ಕರ್ನಾಟಕ(Karnataka)ದಿಂದ ಆಯ್ಕೆಯಾದ ಸಚಿವ ಎಚ್‌.ಡಿ. ಕುಮಾರಸ್ವಾಮಿ(HD Kumaraswamy), ಪ್ರಹ್ಲಾದ್‌ ಜೋಶಿ(Pralhad joshi) ಅವರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದರು. ಉಳಿದಂತೆ ಹೊಸ ಸಂಸದರು ಬೆಂಗಾಲಿ, ಸಂಸ್ಕೃತ, ಡೋಗ್ರಿ, ಒಡಿಯಾ, ಅಸ್ಸಾಮಿ, ತೆಲುಗು, ಮಲಯಾಳಂ, ಮರಾಠಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿ ಭಾಷಾ ವೈವಿದ್ಯತೆಯನ್ನು ಪ್ರದರ್ಶಿಸಿದರು.

Latest Videos

18ನೇ ಲೋಕಸಭೆ ಮೊದಲ ಅಧಿವೇಶನ: ಸಂವಿಧಾನದ ಪುಸ್ತಕ ಹಿಡಿದು ಬಂದ ಮೈತ್ರಿಕೂಟದ ಸದಸ್ಯರು!

ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ಕಾಗೇರಿ

18ನೇ ಲೋಕಸಭಾ ಸದಸ್ಯರಾಗಿ ಕರ್ನಾಟಕದಿಂದ ಆಯ್ಕೆಯಾದ 28 ನೂತನ ಸಂಸದರು ಪೈಕಿ ಎಲ್ಲರೂ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತ್ರ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದರು.

click me!