ಚುನಾವಣೆ ವೇಳೆ 170 ಶಾಸಕರು ಕಾಂಗ್ರೆಸ್‌ಗೆ, 18 ಶಾಸಕರು ಬಿಜೆಪಿಗೆ ಗುಡ್‌ ಬೈ

By Kannadaprabha NewsFirst Published Mar 12, 2021, 9:33 AM IST
Highlights

ಚುನಾವಣೆಗಳ ವೇಳೆ 170 ಶಾಸಕರು ಕಾಂಗ್ರೆಸ್‌ ತೊರೆದು ಬೇರೆ ಪಕ್ಷ ಸೇರಿದ್ದಾರೆ. ಇದೇ ಅವಧಿಯಲ್ಲಿ ಬಿಜೆಪಿಯ 18 ಶಾಸಕರು ಇತರೆ ಪಕ್ಷ ಸೇರಿದ್ದಾರೆ  ಎನ್ನುವ ಮಾಹಿತಿ ಹೊರಬಿದ್ದಿದೆ. 

ನವದೆಹಲಿ (ಮಾ.12): 2016ರಿಂದ 2020ರ ವರೆಗೆ ವಿವಿಧ ರಾಜ್ಯಗಳಲ್ಲಿ ನಡೆದ ಚುನಾವಣೆಗಳ ವೇಳೆ 170 ಶಾಸಕರು ಕಾಂಗ್ರೆಸ್‌ ತೊರೆದು ಬೇರೆ ಪಕ್ಷ ಸೇರಿದ್ದಾರೆ. ಇದೇ ಅವಧಿಯಲ್ಲಿ ಬಿಜೆಪಿಯ 18 ಶಾಸಕರು ಇತರೆ ಪಕ್ಷ ಸೇರಿದ್ದಾರೆ ಎಂದು ಅಸೋಸಿಯೇಶನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ (ಎಡಿಆರ್‌) ವರದಿ ಹೇಳಿದೆ.

ವರದಿಯ ಪ್ರಕಾರ, ನಾಲ್ಕು ವರ್ಷದಲ್ಲಿ ಮರು ಚುನಾವಣೆಗೆ ಸ್ಪರ್ಧಿಸಿದ 405 ಶಾಸಕರ ಪೈಕಿ 182 ಶಾಸಕರು ಮೂಲ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದವರು. ಉಳಿದಂತೆ 38 ಮಂದಿ ಕಾಂಗ್ರೆಸ್‌ಗೆ ಮತ್ತು 25 ಮಂದಿ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್‌ಎಸ್‌)ಗೆ ಸೇರ್ಪಡೆಯಾದವರು ಎಂದು ತಿಳಿಸಿದೆ.

ಪಂಚ ರಾಜ್ಯ ಚುನಾವಣೆಯಲ್ಲಿ ಇಂಧನ ಬೆಲೆ ಏರಿಕೆ ಬಿಸಿ; ಮತದಾರರ ಓಲೈಕೆಗೆ ಮುಂದಾಗುತ್ತಾ ಬಿಜೆಪಿ? .

ಹಾಗೆಯೇ 2019ರ ಲೋಕಸಭಾ ಚುನಾವಣೆ ವೇಳೆ ಐವರು ಸಂಸದರು ಬಿಜೆಪಿ ತೊರೆದು ಬೇರೆ ಪಕ್ಷ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ 7 ರಾಜ್ಯಸಭಾ ಸದಸ್ಯರು ಕಾಂಗ್ರೆಸ್‌ ತೊರೆದು ಬೇರೆ ರಾಜಕೀಯ ಪಕ್ಷಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

 ಅಲ್ಲದೆ 2016-20ರ ವರೆಗೆ ರಾಜ್ಯಸಭಾ ಮರು ಚುನಾವಣೆಗೆ ಸ್ಪರ್ಧಿಸಿದ ಒಟ್ಟು 16 ಸದಸ್ಯರ ಪೈಕಿ 10ರಷ್ಟುಸದಸ್ಯರು ಮೂಲ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. 2019ರ ಸಂಸತ್‌ ಚುನಾವಣೆ ವೇಳೆ 12ರಲ್ಲಿ 5 ಸಂಸದರು ಪಕ್ಷವನ್ನು ಬದಲಾಯಿಸಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು ಎಂದು ವರದಿ ತಿಳಿಸಿದೆ. ಪಕ್ಷವನ್ನು ತ್ಯಜಿಸಿ, ಚುನಾವಣೆಗೆ ಸ್ಪರ್ಧಿಸಿದ್ದ 433 ಶಾಸಕರು ಮತ್ತು ಸಂಸದರ ಸ್ವ ಅಫಿಡವಿಟ್‌ ಅನ್ನು ವಿಶ್ಲೇಷಿಸಿ ಈ ವರದಿ ಬಿಡುಗಡೆ ಮಾಡಲಾಗಿದೆ.

click me!