ಹನಿಟ್ರ್ಯಾಪ್ ವಿಚಾರವಾಗಿ ಸದನದಲ್ಲಿ ಸಚಿವ ಕೆ.ಎನ್. ರಾಜಣ್ಣ ಪ್ರಸ್ತಾಪ ಮಾಡಿದ್ದಾರೆ, ಆದರೆ ಎಲ್ಲ ಪಕ್ಷದ ಶಾಸಕರು ಹಾಗೂ ಸಚಿವರ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಮೈಸೂರು (ಮಾ.27): ಹನಿಟ್ರ್ಯಾಪ್ ವಿಚಾರವಾಗಿ ಸದನದಲ್ಲಿ ಸಚಿವ ಕೆ.ಎನ್. ರಾಜಣ್ಣ ಪ್ರಸ್ತಾಪ ಮಾಡಿದ್ದಾರೆ, ಆದರೆ ಎಲ್ಲ ಪಕ್ಷದ ಶಾಸಕರು ಹಾಗೂ ಸಚಿವರ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರು ಸೇರಿದಂತೆ 17 ಜನ ಶಾಸಕರು ಹಾಗೂ ಸಚಿವರ ಹನಿಟ್ರ್ಯಾಪ್ ವಿಡಿಯೋ ಇದೆ. ಮಾಧ್ಯಮಗಳಲ್ಲಿ ವಿಡಿಯೋ ಪ್ರಸಾರ ಆಗದಂತೆ ಕೋರ್ಟ್ ನಿಂದ ಪ್ರತಿಬಂಧಕಾಜ್ಞೆ ತಂದಿದ್ದಾರೆ. ಆಗ ಬಿಜೆಪಿ ಅವರೇ ಈ ರೀತಿ ಹನಿ ಟ್ರ್ಯಾಪ್ ಮಾಡಿದ್ದಾರೆ ಎಂಬ ಆರೋಪ ಬಂದಿತ್ತು.
ರಾಜಣ್ಣ ಅವರು ಇಂತಹ ಪಕ್ಷದವರೇ ಹನಿಟ್ರ್ಯಾಪ್ ಮಾಡಿದ್ದಾರೆ ಎಂದು ಎಲ್ಲಿಯೂ ಹೇಳಿಲ್ಲ. ರಾಜಣ್ಣ ದೂರು ಕೊಟ್ಟರೇ ತನಿಖೆ ಮಾಡಿಸಿ ಶಿಕ್ಷೆ ಕೊಡಿಸುತ್ತೇವೆ ಎಂದು ಉತ್ತರಿಸಿದರು.ಸರ್ಕಾರ ಬೀಳಿಸಲು ಹನಿಟ್ರ್ಯಾಪ್ ನಡೆದಿದೆ ಎಂದು ಹೇಳಲು ಸಾಧ್ಯವಿಲ್ಲ. ಹಿಂದೆ ಬಿಜೆಪಿ ಸರ್ಕಾರದಲ್ಲೂ ಹನಿಟ್ರ್ಯಾಪ್ ನಡೆದಿದೆ. ಈಗಲೂ ಇಂತಹ ಪ್ರಯತ್ನ ನಡೆದಿದೆ. ಇದರ ಹಿಂದೆ ದೊಡ್ಡ ಜಾಲವೇ ಇದೆ. ತನಿಖೆಯ ಮೂಲಕವೇ ಜಾಲವನ್ನು ಪತ್ತೆ ಹಚ್ಚಬೇಕಿದೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ಎಂದು ಅವರು ತಿಳಿಸಿದರು.ಹನಿ ಟ್ರ್ಯಾಪ್ ಮೂಲಕ ಬ್ಲ್ಯಾಕ್ ಮೇಲೆ ಮಾಡುವವರಿಗೆ ತಕ್ಕ ಶಿಕ್ಷೆಯಾಗಬೇಕು.
ಶಾಸಕರ ಅಮಾನತು ನನ್ನೊಬ್ಬನ ನಿರ್ಧಾರವಲ್ಲ: ಸ್ಪೀಕರ್ ಯು.ಟಿ.ಖಾದರ್ ಸಂದರ್ಶನ
ಹಣ ಹಾಗೂ ಕೆಲಸ ಮಾಡಿಸಿಕೊಳ್ಳುವ ಉದ್ದೇಶದಿಂದ ಹನಿ ಟ್ರ್ಯಾಪ್ ಮಾಡುತ್ತಿದ್ದಾರೆ. ರಾಜಣ್ಣ ಯಾರ ಮೇಲೂ ಆರೋಪ ಮಾಡಿಲ್ಲ. ತನಿಖೆಯಿಂದಷ್ಟೇ ಸತ್ಯಾಸತ್ಯತೆ ಹೊರಬರಬೇಕು. ಇವರೇ ಮಾಡಿದ್ದಾರೆಂದು ಬಿಜೆಪಿ ಯಾಕೆ ಊಹೇ ಮಾಡಬೇಕು. ಬಿಜೆಪಿಯವರದ್ದೇ ಸಿಡಿ ಮಾಡಿ ಇಟ್ಟುಕೊಂಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಅವರು ಹೇಳಿದರು.ರಾಜಕಾರಣಿಗಳಿಗೆ ಎಷ್ಟೋ ಜನರು ಫೋನ್ ಮಾಡ್ತಾರೆ. ನನಗೂ ಇಡೀ ರಾಜ್ಯದಿಂದ ಎಷ್ಟೋ ಜನರು ಫೋನ್ ಮಾಡ್ತಾರೆ. ಕಲೆವೊಂದು ಬಾರಿ ಯಾರು ಅಂಥ ಗೊತ್ತಿಲ್ಲದಿದ್ದರೂ ಫೋನ್ ತೆಗೆಯುತ್ತೇನೆ. ತಂತ್ರಜ್ಞಾನವನ್ನ ದುರುಪಯೋಗವಾಗುತ್ತಿದೆ.
ವಿಡಿಯೋ ಕಾಲ್ ಆನ್ ಮಾಡಿದ ತಕ್ಷಣಎಐ ಮೂಲಕ ತಪ್ಪು ವಿಡಿಯೋ ಕಳುಹಿಸಲಾಗುತ್ತಿದೆ. ಸಿದ್ದರಾಮಯ್ಯ ಪರವಾದ ಶಾಸಕರ ಹನಿಟ್ರ್ಯಾಪ್ಸಿದ್ದರಾಮಯ್ಯ ಪರವಾದ ಶಾಸಕರನ್ನ ಹನಿ ಟ್ರ್ಯಾಪ್ ಮಾಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಶಾಸಕರ ಮೇಲೂ ಹನಿ ಟ್ರ್ಯಾಪ್ ಪ್ರಯತ್ನ ನಡೆದಿದೆ. ಹಿಂಗತ ಮಾತ್ರಕ್ಕೆ ಬಿಜೆಪಿ ಶಾಸಕರು ನಮ್ಮ ತಂದೆ ಪರವಾಗಿ ಇದ್ದಾರೆ ಅಂತಲ್ಲ. ಈ ಜಾಲಾದ ಬಗ್ಗೆ ತನಿಖೆಯಾಗಲಿ ಎಂದಷ್ಟೇ ರಾಜಣ್ಣ ಹೇಳಿದ್ದಾರೆ. ರಾಜಣ್ಣ ಮಾತ್ರ ಅಲ್ಲ ಬಿಜೆಪಿ ಶಾಸಕರು ಕೂಡ ಹನಿ ಟ್ರ್ಯಾಪ್ ಗೆ ಟಾರ್ಗೆಟ್ ಆಗುತ್ತಿದ್ದಾರೆ. ರಾಜಣ್ಣ ಎಲ್ಲಿಯೂ ಹನಿ ಟ್ರ್ಯಾಪ್ ನಾನು ಬಲಿಯಾಗಿದ್ದೇನೆಂದು ಹೇಳಿಲ್ಲ.
ಹನಿ ಟ್ರ್ಯಾಪ್ ಪ್ರಯತ್ನ ನನ್ನ ಮೇಲೆ ನಡೆದಿದೆ ಎಂದಷ್ಟೇ ಹೇಳಿದ್ದಾರೆ. ಅವರ ಮಗ ಕೂಡ ನನ್ನ ಮೇಲೆ ಹನಿ ಟ್ರ್ಯಾಪ್ ಪ್ರಯತ್ನ ನಡೆದಿದೆ ಎಂದಿದ್ದಾರೆ.ಮನೆಗೆ ಬಂದ ಸಾರ್ವಜನಿಕರನ್ನ ಮಾತನಾಡಿಸದಿರಲು ಆಗುತ್ತಾ?. ಆ ರೀತಿಯಾಗಿ ಹನಿ ಟ್ರ್ಯಾಪ್ ಪ್ರಯತ್ನ ನಡೆದಿದೆ ಎಂದರು. ಹೈ ಕಮಾಂಡ್ ಗೆ ಹನಿ ಟ್ರ್ಯಾಪ್ ವಿಚಾರ ತಿಳಿದಿದೆಹನಿ ಟ್ರ್ಯಾಪ್ ವಿಚಾರ ಖಂಡಿತವಾಗಿ ಹೈಕಮಾಂಡ್‌ಗೂ ತಿಳಿದಿದೆ. ಸಿಎಂ ಹಾಗೂ ನಮ್ಮ ಪಕ್ಷದ ಮುಖಂಡರು ಹೈಕಮಾಂಡ್ ಗೆ ಈ ವಿಚಾರವನ್ನು ತಿಳಿಸುತ್ತಾರೆ.ಕೇಂದ್ರದ ನಾಯಕರಿಗೆ ನಮ್ಮ ನಾಯಕರು ದೂರು ಕೊಟ್ಟಿರುವ ಬಗ್ಗೆ ಗೊತ್ತಿಲ್ಲ. ರಾಜಣ್ಣ ಸಹ ದೆಹಲಿಗೆ ಹೋಗಿ ದೂರು ಕೊಡಬಹುದು.
ಯಾರದರೂ ಅವರ ಮೇಲೆ ಟಾರ್ಗೆಟ್ ಮಾಡಿದ್ರೆ ಅವರ ಮೇಲೆ ದೂರು ಕೊಡಲಿ ಎಂದರು. ಡಿ.ಕೆ. ಶಿವಕುಮಾರ್ ಪಾತ್ರ ಇದರಲ್ಲಿ ಇಲ್ಲಹನಿಟ್ರ್ಯಾಪ್ ಡಿಸಿಎಂ ಡಿ.ಕೆ. ಶಿವಕುಮಾರ್ ಮಾಡಿಸಿದ್ದಾರೆ ಎಂಬ ಆರೋಪ ವಿಚಾರವಾಗಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಪಾತ್ರ ಇದರಲ್ಲಿ ಇಲ್ಲ. ನಮ್ಮ ಪಕ್ಷದವರು ಇಂತಹವರೇ ಮಾಡಿಸಿದ್ದಾರೆ ಎಂದು ಎಲ್ಲಿಯೂ ಹೇಳಿಲ್ಲ. ಡಿ.ಕೆ ಶಿವಕುಮಾರ್ ಹೆಸರನ್ನ ಯಾರು ತೆಗೆದುಕೊಂಡಿಲ್ಲ ಎಂದು ಯತೀಂದ್ರ ಅವರು ಡಿಕೆಶಿ ಪರವಾಗಿ ಬ್ಯಾಟ್ ಬೀಸಿದರು. ಸಚಿವರ ಮನೆಗೆ ಸಿಸಿಟಿವಿ ಇಲ್ಲ ಸಚಿವರ ಮನೆಗಳಿಗೆ ಸಿಸಿಟಿವಿ ಇಲ್ಲದ ವಿಚಾರ ನನಗೆ ಗೊತ್ತಿಲ್ಲ. ಸಿಎಂ ಮನೆಗೆ ಸಿಸಿಟಿವಿ ಇದೆ.
ನಾನು ಅಲ್ಲೇ ಇರುವುದರಿಂದ ಸಿಸಿಟಿವಿ ಇರುವ ಬಗ್ಗೆ ನನಗೆ ಗೊತ್ತಿದೆ, ಬೇರೆಯ ಮನೆಯ ವಿಚಾರ ನನಗೆ ಗೊತ್ತಿಲ್ಲ. ಸಿಎಂ ಮನೆಗೆ ಪೊಲೀಸ್ ಬಂದೋಬಸ್ತ್ ಸಹ ಇದೆ, ಯಾರೇ ಬಂದರೂ ರೆಕಾರ್ಡ್ ಆಗುತ್ತೆ.ಸಚಿವರ ಮನೆಗೆ ಖಂಡಿತವಾಗಿ ಸಿಸಿಟಿವಿ ಹಾಕಬೇಕು. ಸಿಸಿಟಿವಿ ಇದ್ದರೇ ಹನಿ ಟ್ರ್ಯಾಪ್ ಮಾಡುವವರ ಮೇಲೆ ಕಣ್ಣಿಡಬಹುದು ಎಂದರು. ಸದನದಲ್ಲಿ ಚೀಟಿ ಕೊಟ್ಟಿದ್ದು ಯಾರು ಗೊತ್ತಿಲ್ಲಸದನದಲ್ಲಿ ಕಾಂಗ್ರೆಸ್ ನಾಯಕರು ಯತ್ನಾಳಗೆ ಚೀಟಿ ಕೊಟ್ಟ ವಿಚಾರವಾಗಿ ಮಾತನಾಡಿದ ಅವರು, ಚೀಟಿ ಕೊಟ್ಟಿದ್ದು ಯಾರು ಎಂಬುದು ಗೊತ್ತಿಲ್ಲ. ನಮ್ಮ ನಾಯಕರು ಸದನದಲ್ಲಿ ಮಾತನಾಡಿರುವುದು ಮಾತ್ರ ಗೊತ್ತಿದೆ. ಅದರ ಬಗ್ಗೆ ಮಾತ್ರ ನಾನು ಮಾತನಾಡುತ್ತೇನೆ ಎಂದರು.
ರಾಜ್ಯದಲ್ಲೇ ಅತಿ ಹೆಚ್ಚು 361 ಸಂಯೋಜಿತ ಕಾಲೇಜುಗಳನ್ನು ಹೊಂದಿರುವ ಚೆನ್ನಮ್ಮ ವಿವಿಯಲ್ಲಿ ತೀವ್ರ ಸಿಬ್ಬಂದಿ ಕೊರತೆ
ಹನಿಟ್ರ್ಯಾಪ್ ಹಾಗೂ ಫೋನ್ ಟ್ಯಾಪ್ ವಿಚಾರ ಸರ್ಕಾರಕ್ಕೆ ಕಪ್ಪು ಚುಕ್ಕೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯ ಸಂತ್ರಸ್ಥ ಶಾಸಕರು ಕೋರ್ಟ್ ಗೆ ಹೋಗಿ ಇಂಜೆಕ್ಷನ್ ತಂದಿದ್ದಾರೆ. ಬಿಜೆಪಿ ಪಕ್ಷದ ಶಾಸಕರ ವಿಡಿಯೋ ಮಾಡಿರುವುದು ಅವರದ್ದೇ ಪಕ್ಷದವರು ಎಂಬುದು ಎಲ್ಲರಿಗೂ ಗೊತ್ತಿದೆ. ಇಷ್ಲೆಲ್ಲಾ ಇದ್ದರೂ ನಮ್ಮ ಪಕ್ಷದ ಮೇಲೆ ಯಾಕೆ ಈ ರೀತಿ ಮಾತನಾಡುತ್ತಾರೆ ಗೊತ್ತಿಲ್ಲ. ಅವರಿಗೆ ಯಾವ ನೈತಿಕತೆ ಇದೆ ಎಂದರು.