ಬೆಂಗಳೂರು (ಸೆ.16): ಮೈಸೂರು ಚಾಮುಂಡೇಶ್ವರಿ ಶಾಸಕ ಜಿ ಟಿ ದೇವೇಗೌಡ ಅವರ ನಂತರ ಇದೀಗ ಶ್ರೀನಿವಾಸ ಗೌಡ ಅವರು ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಬರುವುದರೊಂದಿಗೆ ಜೆಡಿಎಸ್‌ನಿಂದ ದೊಡ್ಡ ಮಟ್ಟದ ಶಾಸಕರ ಪಡೆಯೇ ಮುಂದಿನ ಚುನಾವಣೆ ವೇಳೆಗೆ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಮೂಲಗಳ ಪ್ರಕರಾರ ಜೆಡಿಎಸ್ ಹಾಗು ಬಿಜೆಪಿಯಿಂದ ಸುಮಾರು 16 ಶಾಸಕರು ಈಗಾಗಲೇ ಕೆಪಿಸಿಸಿ ಅಧ್ಯಕ್ಷರ ಸಂಪರ್ಕದಲ್ಲಿದ್ದಾರೆ. ಟಿಕೆಟ್ ದೊರೆಯುವ ಖಾತ್ರಿ ದೊರೆತರೆ ಇವರಲ್ಲಿ ಬಹುತೇಕ ಮಂದಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
undefined
ಆಪರೇಷನ್ ಜೆಡಿಎಸ್ : ಇಬ್ಬರು ಮುಖಂಡರು ಕಾಂಗ್ರೆಸ್‌ಗೆ
ಕೋಲಾರ ಶಾಸಕ ಶ್ರೀನಿವಾಸಗೌಡ ಬುಧವಾರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಒಲವು ತೋರಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. 2013 ರಲ್ಲಿ ಜೆಡಿಎಸ್ ಸೇರಿದ್ದ ಶ್ರೀನಿವಾಸಗೌಡ ಇದೀಗ ಕಾಂಗ್ರೆಸ್ ಸೇರಲು ಮತ್ತೊಮ್ಮೆ ಒಲವು ತೋರಿಸಿದ್ದಾರೆ.
ಈ ಮೂಲಕ ರಾಜ್ಯ ರಾಜಕೀಯದಲ್ಲಿ ಪಕ್ಷಾಂತರ ವಿಚಾರ ತಲ್ಲಣವನ್ನೇ ಉಂಟು ಮಾಡುತ್ತಿದೆ.