ಬೆಸ್ಕಾಂ ಮತ್ತು ಇತರ ಎಸ್ಕಾಂಗಳ ಸ್ಮಾರ್ಟ್ ಮೀಟರ್ ಟೆಂಡರ್‌ನಲ್ಲಿ ಸುಮಾರು 15,568 ಕೋಟಿ ರು. ಬೃಹತ್ ಮೊತ್ತದ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಮಾಜಿ ಉಪಮುಖ್ಯಮಂತ್ರಿ, ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ರಾಜ್ಯ ಸರ್ಕಾರ ಕೂಡಲೇ ಈ ಟೆಂಡರ್ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು (ಮಾ.26): ಬೆಸ್ಕಾಂ ಮತ್ತು ಇತರ ಎಸ್ಕಾಂಗಳ ಸ್ಮಾರ್ಟ್ ಮೀಟರ್ ಟೆಂಡರ್‌ನಲ್ಲಿ ಸುಮಾರು 15,568 ಕೋಟಿ ರು. ಬೃಹತ್ ಮೊತ್ತದ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಮಾಜಿ ಉಪಮುಖ್ಯಮಂತ್ರಿ, ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ರಾಜ್ಯ ಸರ್ಕಾರ ಕೂಡಲೇ ಈ ಟೆಂಡರ್ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಲ ಆರ್‌ಸಿ ನಿಯಮಾವಳಿಗಳಲ್ಲಿ ಸ್ಮಾರ್ಟ್ ಮೀಟರ್ ಕಡ್ಡಾಯ ಎಂದು ಎಲ್ಲೂ ಹೇಳಿಲ್ಲ.
ತಾತ್ಕಾಲಿಕ ಸಂಪರ್ಕಕ್ಕೆ ಮಾತ್ರ ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡ ಬಹುದೇ ಹೊರತು ಕಾಯಂ ಗ್ರಾಹಕರು ಹಾಗೂ ಹೊಸ ಗ್ರಾಹಕರಿಗೆ ಈ ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡುವಂತಿಲ್ಲ ಎಂದು ದಾಖಲೆಗಳ ಸಹಿತ ವಿವರಿಸಿದರು. ಸೆಂಟ್ರಲ್ ಎಲೆಕ್ಟಿಸಿಟಿ ಅಥಾರಿಟಿನಿಯಮಾವಳಿ ಪ್ರಕಾರವೂ ಸ್ಮಾರ್ಟ್ ಮೀಟರ್ ಕಡ್ಡಾಯವಲ್ಲ. ಇನ್ನು ಈ ಟೆಂಡರ್‌ನಲ್ಲಿ ಕೆಟಿಪಿಪಿ ಕಾಯ್ದೆಯಡಿ ಬಿಡ್ ಸಾಮರ್ಥ್ಯದ ಬಗ್ಗೆ ತಿಳಿಸಿಲ್ಲ. ನಿಯಮದ ಪ್ರಕಾರ ಬಿಡ್ ಸಾಮರ್ಥ್ಯ 6,800 ಕೋಟಿ ರು. ಇರಬೇಕಿತ್ತು. ಇಲ್ಲಿ ಬಿಡ್ ಸಾಮರ್ಥ್ಯ ಇಲ್ಲದಿರುವುದೇ ಮೊದಲ ಹಗರಣ ಎಂದು ಆರೋಪಿಸಿದರು.
ಕಪ್ಪು ಪಟ್ಟಿಯಲ್ಲಿರುವ ಕಂಪನಿ ಪರಿಗಣನೆ: ಕೆಟಿಪಿಪಿ ಕಾಯ್ದೆ ಪ್ರಕಾರ ಬಿಡ್ ಪಡೆಯುವ ಕಂಪನಿ ವ್ಯವಹಾರ 1,920 ಕೋಟಿ ರು. ಇರಬೇಕು. ಆದರೆ, ಟೆಂಡರ್‌ನಲ್ಲಿ ಕೇವಲ 107 ಕೋಟಿ ರು. ನಮೂದಿಸಲಾಗಿದೆ. ಈ ಉತ್ತರಪ್ರದೇಶದಲ್ಲಿ ಕಪ್ಪುಪಟ್ಟಿಯಲ್ಲಿರುವ ಬಿಸಿಐಟಿಎಸ್ ಕಂಪನಿಯನ್ನು ಈ ಟೆಂಡ ನಲ್ಲಿ ನಿಯಮಬಾಹಿರವಾಗಿ ಗಿ ಪರಿಗಣಿಸಿದ್ದಾರೆ. ಯೋಜನಾ ವೆಚ್ಚ 571 ಕೋಟಿ ರು. ಎಂದು ತಿಳಿಸಿ ನಂತರ ತಿದ್ದುಪಡಿ ಮಾಡಿದ್ದಾರೆ. ಅಂದರೆ, ಟೆಂಡರ್‌ನ ಒಟ್ಟು ಮೊತ್ತ ತಿಳಿಸದೆ ಟೆಂಡರ್ ಕರೆದಿದ್ದಾರೆ ಎಂದು ಟೀಕಿಸಿದರು.
ರಾಜ್ಯದ ಏಕೈಕ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯಗೆ ಸ್ವಂತ ಕಟ್ಟಡವಿಲ್ಲ!
ಸಾರ್ಟ್ ಮೀಟರ್ ಹೆಸರಲ್ಲಿ ಭ್ರಷ್ಟಾಚಾರ: ಸರ್ಕಾರ ಸ್ಮಾರ್ಟ್ ಮೀಟರ್ ಹೆಸರಲ್ಲಿ 15 ಸಾವಿರ ಕೋಟಿ ರು.ಗಿಂತ ಹೆಚ್ಚು ಭ್ರಷ್ಟಾಚಾರ ನಡೆಸಿ ದ್ದು, ಕೆಟಿಟಿಪಿ ಕಾಯ್ದೆ ಉಲ್ಲಂ ಘಿಸಿ, ಟೆಂಡರ್ ಪ್ರಕ್ರಿಯೆ ನಡೆಸಿ ಸಾವಿರಾರು ಕೋಟಿ ಲೂಟಿ ಮಾಡಿದೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಹಗರಣದಿಂದ ರಾಜ್ಯದ ಪ್ರತಿಯೊಬ್ಬ ಗ್ರಾಹ ಕನ ಮೇಲೆ 8,520 ರು. ಹೊರೆ ಬೀಳಲಿದೆ. ಸ್ಮಾರ್ಟ್ ಮೀಟರ್ ಟೆಂಡರ್ ಪ್ರಕ್ರಿಯೆ ರದ್ದು ಮಾಡಿ, ಪಾರದರ್ಶಕವಾಗಿ ಮರು ಟೆಂಡ ನಡೆಸಬೇಕು ಎಂದು ಆಗ್ರಹಿಸಿದರು.