ಒಂದೂವರೆ ತಿಂಗಳಿಂದ ಮಂತ್ರಿಗಿರಿಗಾಗಿ ಕಾಯ್ತಿದ್ದ ಆಕಾಂಕ್ಷಿಗಳಿಗೆ ಹೈಕಮಾಂಡ್ ಸಿಹಿ ಸುದ್ದಿ ಕೊಟ್ಟಿದೆ. ಸಂಪುಟ ವಿಸ್ತರಣೆ ಫೆ.6ಕ್ಕೆ ಪಕ್ಕಾ ಆಗಿದೆ. ಆದ್ರೆ ಯಾರ್ ಯಾರಿಗೆ ಸಚಿವ ಸ್ಥಾನ ಸಿಗಲಿದೆ. ಗೆದ್ದ ನೂತನ ಶಾಸಕರ ಪೈಕಿ ಎಷ್ಟು ಜನರಿಗೆ ಅವಕಾಶ ಸಿಗುತ್ತೆ. ಮೂಲ ಬಿಜೆಪಿಗರಲ್ಲಿ ಯಾರಿಗೆ ಮಂತ್ರಿಭಾಗ್ಯ ಒಲಿಯುತ್ತೆ ಅನ್ನೋದು ಕುತೂಹಲವಾಗಿಯೇ ಇದೆ.
ಬೆಂಗಳೂರು, (ಫೆ.02): ಕೊನೆ ರಾಜ್ಯ ಸಂಪುಟ ವಿಸ್ತರಣೆ ಗುರುವಾರ ಅಂದ್ರೆ ಫೆ.06ಕ್ಕೆ ಬೆಳಗ್ಗೆ ಮುಹೂರ್ತ ನಿಗದಿಯಾಗಿದೆ. ಈ ಬಗ್ಗೆ ಇಂದು (ಭಾನುವಾರ) ಸ್ವತಃ ಯಡಿಯೂರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಖಚಿತಪಡಿಸಿದರು.
10+3 ಅಡಿಯಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಅಂತಲೂ ಹೇಳಿದರು. ಆದ್ರೆ, ಯಾರಿಗೆ ಮಂತ್ರಿಗಿರಿ, ಯಾರಿಗಿಲ್ಲ ಎನ್ನುವುದು ಮಾತ್ರ ಗುಟ್ಟು ಬಿಟ್ಟುಕೊಟ್ಟಿಲ್ಲ.
undefined
ಸೋತಿದ್ದ ಸವದಿಗೆ MLC ಟಿಕೆಟ್, ತ್ಯಾಗ ಮಾಡಿದ್ದ ಶಂಕರ್‌ಗೆ ಶಾಕ್
ಬೈ ಲೆಕ್ಷನ್‌ನಲ್ಲಿ ಗೆದ್ದ 12ರ ಪೈಕಿ ರಾಣೇಬೆನ್ನೂರು ಶಾಸಕನನ್ನು ಹೊರತುಪಡಿಸಿ 11 ಶಾಸಕರಿಗೆ ಮಂತ್ರಿ ಸ್ಥಾನ ಎಂದು ಹೇಳಲಾಗಿತ್ತು. ಆದ್ರೆ. ಇದೀಗ ಅದು ಬದಲಾಗಿದ್ದು, ಮೂಲಗಳಿಂದ ಬಂದ ಮಾಹಿತಿಯಂತೆ 10 ನೂತನ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಯಡಿಯೂರಪ್ಪ ತೀರ್ಮಾನಿಸಿದ್ದಾರೆ.
ಅಷ್ಟೇ ಅಲ್ಲದೇ ಯಾರಿಗೆಲ್ಲ ಮಂತ್ರಿ ಸ್ಥಾನ ಎನ್ನುವುದನ್ನು ಪಟ್ಟಿ ಕೂಡ ರೆಡಿ ಮಾಡಿಕೊಂಡಿದ್ದಾರೆ. 10+3 ಅಂದ್ರೆ 10 ನೂತನ ಶಾಸಕರಿಗೆ ಹಾಗೂ ಮೂವರು ಮೂಲ ಬಿಜೆಪಿ ಶಾಸಕರಿಗೆ ಮಂತ್ರಿ ಸ್ಥಾನ ಫಿಕ್ಸ್ ಆಗಿದೆ.
ಅಥಣಿ ಕ್ಷೇತ್ರದ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಬಿಟ್ಟು ಇನ್ನುಳಿದ 10 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದು ಪಕ್ಕಾ ಆಗಿದೆ. ಈಗಾಗಲೇ ಅಥಣಿ ಕ್ಷೇತ್ರದಿಂದ ಸೋತರೂ ಸಹ ಲಕ್ಷ್ಮಣ ಸವದಿ ಡಿಸಿಎಂ ಆಗಿದ್ದಾರೆ.
ಮಂತ್ರಿಗಿರಿ ಕಳೆದುಕೊಳ್ಳುವ ಭೀತಿ, ಒಂದೇ ದಿನಕ್ಕೆ 3 ಬಾರಿ ಸಿಎಂ ಭೇಟಿಯಾದ ಸಚಿವ
ಈಗ ಮತ್ತೆ ಅದೇ ಕ್ಷೇತ್ರದ ಶಾಸಕರು ಮಹೇಶ್ ಕುಮಟಳ್ಳಿಗೆ ಮಂತ್ರಿ ಮಾಡಿದರೆ ಒಂದೇ ಕ್ಷೇತ್ರಕ್ಕೆ ಇಬ್ಬರನ್ನು ಮಿನಿಸ್ಟರ್ ಮಾಡಿದಂತಾಗುತ್ತದೆ ಎನ್ನುವುದು ನಾಯಕರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಮಹೇಶ್ ಕುಮಟಳ್ಳಿಗೆ ಸದ್ಯಕ್ಕೆ ಮಂತ್ರಿಪಟ್ಟ ಇಲ್ಲ ಎನ್ನುವುದು ಖಚಿತವಾಗಿದೆ.
ಇನ್ನು ಮೂಲ ಬಿಜೆಪಿಗರಲ್ಲಿ ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಬಗ್ಗೆ ಸಿಎಂ ಈಗಾಗಲೇ ನಿರ್ಧರಿಸಿದ್ದು, ಮೂವರನ್ನ ಮಂತ್ರಿ ಮಾಡುವ ಬಗ್ಗೆ ತಿರ್ಮಾನಿಸಿದ್ದಾರೆ. ಸಿ.ಪಿ.ಯೋಗಿಶ್ವರ್, ಅರವಿಂದ ಲಿಂಬಾವಳಿ, ಉಮೇಶ್ ಕತ್ತಿಗೆ ಸಚಿವ ಸ್ಥಾನ ನಿಶ್ಚಿತ ಎಂದು ಹೇಳಲಾಗ್ತಿದೆ.
ಅರವಿಂದ ಲಿಂಬಾವಳಿ, ಉಮೇಶ್ ಕತ್ತಿಗೆ ಪಕ್ಕಾ ಆಗಿದ್ರೆ, ಯೋಗೇಶ್ವರ್ ಅವರದ್ದೂ ಮಾತ್ರ ನಿಗೂಢವಾಗಿದೆ. ಯೋಗೇಶ್ವರ್‌ಗೆ ಇಲ್ಲ ಅಂದ್ರೆ, ಯಲ್ಬುರ್ಗಾ ಶಾಸಕ ಹಾಲಪ್ಪ ಆಚಾರ್, ಎ.ರಾಮದಾಸ್ ಹೆಸರು ಪಕ್ಷದಲ್ಲಿ ಚರ್ಚೆ ಆಗಿದೆ.
ಆದ್ರೆ ಮೂಲ ಬಿಜೆಪಿಗರಲ್ಲಿ ಮೂವರಿಗೆ ಸ್ಥಾನ ನೀಡಿ, ನೂತನ ಶಾಸಕರಲ್ಲಿ 10 ಮಂದಿ ಆಯ್ಕೆ ಮಾಡಿ ಒಟ್ಟು 13 ಶಾಸಕರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಸಿಎಂ ಬಿಎಸ್ ವೈ ತಿರ್ಮಾನಿಸಿದ್ದಾರೆ.
ಸಚಿವರಾಗಲಿರುವ ನೂತನ ಶಾಸಕರು
ರಮೇಶ್ ಜಾರಕಿಹೊಳಿ (ಗೋಕಾಕ್)
ಶ್ರೀಮಂತ್ ಪಾಟೀಲ್ (ಕಾಗವಾಡ)
ಬಿ.ಸಿ.ಪಾಟೀಲ್ (ಹಿರೇಕೆರೂರು)
ಡಾ. ಸುಧಾಕರ್ (ಚಿಕ್ಕಬಳ್ಳಾಪುರ)
ಶಿವರಾಮ್ ಹೆಬ್ಬಾರ್ (ಯಲ್ಲಾಪುರ
ನಾರಾಯಣಗೌಡ (ಕೆ.ಆರ್.ಪೇಟೆ)
ಎಸ್.ಟಿ.ಸೋಮಶೇಖರ್ (ಯಶವಂತಪುರ)
ಗೋಪಾಲಯ್ಯ (ಮಹಾಲಕ್ಷ್ಮಿ ಲೇಔಟ್)
ಬೈರತಿ ಬಸವರಾಜ್ (ಕೆ.ಆರ್.ಪುರ)
ಆನಂದ್ ಸಿಂಗ್ (ವಿಜಯನಗರ)
ಫೆಬ್ರವರಿ 2ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ವಿಕ್ ಮಾಡಿ