ಈ ರಾಶಿಯವರನ್ನು ಗಂಡನಾಗಿ ಪಡೆದರೆ ಆ ಹೆಣ್ಣು ಅದೃಷ್ಟವಂತೆ

Published : May 23, 2025, 06:43 PM IST
zodiac signs

ಸಾರಾಂಶ

ಭಾವಿ ಪತಿ ತಮ್ಮನ್ನು ಜೀವನ ಪೂರ್ತಿ ಪ್ರೀತಿಸುತ್ತಾನೋ ಇಲ್ಲವೋ ಎಂಬುದನ್ನು ಹೇಗೆ ತಿಳಿದುಕೊಳ್ಳಬಹುದು ಎಂಬ ಕುತೂಹಲ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಎಲ್ಲರ ಬಗ್ಗೆ ತಿಳಿಯದಿದ್ದರೂ ಈ 5 ರಾಶಿಯ ಹುಡುಗರ ಕೈಹಿಡಿಯುವವರು ನಿಜವಾಗಲೂ ಏಳೇಳು ಜನ್ಮದ ಪುಣ್ಯ ಮಾಡಿರುತ್ತಾರೆ.

ಪ್ರತಿ ಮಹಿಳೆಗೂ ತಮ್ಮ ಮದುವೆ ಬಗ್ಗೆ ವಿಶೇಷ ಕನಸುಗಳಿರುತ್ತವೆ. ಕೈ ಹಿಡಿಯೋ ಗಂಡ ಹೀಗಿರಬೇಕು, ಹಾಗಿರಬೇಕು, ಕೈ ತುಂಬಾ ಸಂಪಾದಿಸಬೇಕು, ನನ್ನನ್ನು ಚಂದ ಸುತ್ತಿಸಬೇಕು, ನೋಡಿಕೊಳ್ಳಬೇಕು... ಬಹಳ ಮುಖ್ಯವಾಗಿ ತನ್ನನ್ನು ವಿಪರೀತ ಪ್ರೀತಿಸಬೇಕು ಎಂಬ ಕನಸು ಕಂಡಿರುತ್ತಾರೆ. ಹೀಗೆ ಜೀವನ ಪರ್ಯಂತ ಪ್ರೀತಿಸುವ ಗಂಡನನ್ನು ಹೇಗಪ್ಪಾ ಹುಡುಕೋದು? ಅದನ್ನು ಜ್ಯೋತಿಷ್ಯ ಶಾಸ್ತ್ರ ಹೇಳಿ ಕೊಡುತ್ತದೆ.

ಮದುವೆಗೆ ಮುಂಚೆಯೇ ಜಾತಕ ನೋಡೋದು ಬಹಳ ಮುಖ್ಯ. ಇಲ್ಲಿ ಎಲ್ಲ ಹೊಂದಾಣಿಕೆಯಾದ ಮೇಲೆಯೇ ಮದುವೆಗೆ ಅಸ್ತು ಎನ್ನೋದು ಗುರು ಹಿರಿಯರು. ಗಣಗಳ ಲೆಕ್ಕಾಚಾರ, ಗ್ರಹಕೂಟ ಹೊಂದಾಣಿಕೆ, ರಾಶಿ ತುಲನೆ ಎಲ್ಲವನ್ನೂ ನೋಡಿರಲಾಗುತ್ತದೆ. ಆದರೆ, ಇಲ್ಲೂ ಒಂದು ನಿಮಗೆ ಗೊತ್ತಿರದ ವಿಷಯವಿದೆ. ಕೆಲವೊಂದು ರಾಶಿಯವರನ್ನು ಮದುವೆಯಾದರೆ ಅವರು ಮಡದಿಯನ್ನು ತುಂಬಾ ಪ್ರೀತಿಸುತ್ತಾರೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.

ಈ ಐದು ರಾಶಿಗಳ ಯುವಕರನ್ನು ಮದುವೆಯಾದರೆ ಅವರ ಮಡದಿಯರಿಗೆ ಲಕ್ಕೋ ಲಕ್. ಅಷ್ಟರ ಮಟ್ಟಿಗೆ ಅವರನ್ನು ಲವ್ ಮಾಡುತ್ತಾರೆ. ಅದೂ ಜೀವನ ಪರ್ಯಂತ. ಸ್ವಲ್ಪವೂ ಕಪಟವಿಲ್ಲದೆ, ನಿಷ್ಕಲ್ಮಶ ಪ್ರೀತಿ ತೋರುತ್ತಾರೆ. ಹಾಗಾದರೆ ಆ ಐದು ರಾಶಿಗಳು ಯಾವುವು?

ಕುಂಭ ರಾಶಿ
ಎಲ್ಲ ವಿಷ್ಯಗಳಲ್ಲೂ ಇಂಟರೆಸ್ಟಿಂಗ್ ಆಗಿರೋ ರಾಶಿ ಇದು. ಈ ರಾಶಿಯ ಹುಡುಗರ ಮೇಲೆ ಹುಡುಗಿಯರಿಗೆ ಅದೇನೋ ವಿಶೇಷ ಆಕರ್ಷಣೆ. ಅಷ್ಟೇನೂ ರೊಮ್ಯಾಂಟಿಕ್ ಆಗಿರದ ಇವರು ಪ್ರೀತಿಸುವುದರಲ್ಲಿಯೂ, ಪ್ರೀತಿಯನ್ನು ನೀಡುವುದರಲ್ಲೂ ಮೊದಲಿಗರು. ಮಡದಿಯನ್ನು ತುಂಬಾ ಪ್ರೀತಿಸುವ ಇವರು, ಆಕೆಯ ಪ್ರತಿ ಕಾರ್ಯದಲ್ಲೂ, ಹೆಜ್ಜೆಯಲ್ಲೂ ಸಹಕರಿಸುತ್ತಾರೆ.

ವೃಷಭ ರಾಶಿ
ಈ ರಾಶಿಯ ಗಂಡಂದಿರು ತನ್ನ ಹೆಂಡತಿಯ ಎಲ್ಲ ಮನೋಕಾಮನೆಗಳನ್ನೂ ಪೂರೈಸುತ್ತಾರೆ. ನೆಚ್ಚಿನ ಮಡದಿಗೆ ಯಾವುದೇ ಕಾರಣಕ್ಕೂ ಬೇಸರವನ್ನುಂಟು ಮಾಡುವುದಿಲ್ಲ. ಇವರಿಗೆ ಸಿಟ್ಟಿದ್ದರೂ ಹೆಂಡತಿಗೆ ಯಾವತ್ತೂ ವಂಚಿಸುವುದಿಲ್ಲ. ಅಷ್ಟರ ಮಟ್ಟಿಗೆ ಕಟ್ಟಿಕೊಂಡವಳಿಗೆ ನಿಷ್ಠರಾಗಿರುತ್ತಾರೆ.

ಕರ್ಕಾಟಕ ರಾಶಿ
ಒಂದು ರೀತಿಯ ಭಾವನಾ ಜೀವಿಗಳಾಗಿರುವ ಈ ರಾಶಿಯವರು ಹೆಂಡತಿಯನ್ನು ಹೇಗೆಲ್ಲಾ ನೋಡಿಕೊಳ್ಳಬೇಕು, ಮೆಚ್ಚಿಸಬೇಕು ಎಂಬ ಬಗ್ಗೆಯೇ ಯಾವಾಗಲೂ ಯೋಚಿಸುತ್ತಿರುತ್ತಾರೆ. ಹೀಗಾಗಿ ಮಡದಿಗೆ ಸರ್ಪ್ರೈಸ್ ನೀಡಲು ಹೆಚ್ಚು ಇಷ್ಟಪಡುತ್ತಾರೆ. ಆ ಮೂಲಕ ಆಕೆಯನ್ನು ಸಂತೋಷವಾಗಿಡಲು ಯತ್ನಿಸುವುದಲ್ಲದೆ, ಸ್ವಲ್ಪ ತೋರಿಕೆ ಸ್ವಭಾವವನ್ನೂ ಹೊಂದಿರುತ್ತಾರೆ. ಏನೇ ತೋರಿಕೆಗಳಿದ್ದರೂ ಹೆಂಡತಿಯನ್ನು ಮಾತ್ರ ಬಹಳವಾಗಿಯೇ ಪ್ರೀತಿಸುತ್ತಾರೆ. ಮಾಡುತ್ತಾರೆ.

ಸಿಂಹ ರಾಶಿ
ಈ ರಾಶಿಯ ಹುಡುಗರ ವ್ಯಕ್ತಿತ್ವವೇ ಹಾಗೆ, ಬಹುಬೇಗ ಎದುರಿಗಿನವರನ್ನು ಸೆಳೆದು ಬಿಡುತ್ತಾರೆ. ಅಂಥದ್ದರಲ್ಲಿ ಹುಡುಗಿಯರು ಇಷ್ಟ ಪಡದೇ ಇರ್ತಾರಾ? ಇವರನ್ನು ನೋಡುತ್ತಿದ್ದಂತೆ ಇವರ ವ್ಯಕ್ತಿತ್ವಕ್ಕೆ ಮಾರುಹೋಗಿ ಪ್ರೀತಿಯಲ್ಲಿ ಬೀಳುತ್ತಾರೆ. ಆ ಮೂಲಕ ಅವರಿಗೆ ಆಕರ್ಷಿತರಾಗಿ ಬಿಟ್ಟಿರುತ್ತಾರೆ. ಈ ರಾಶಿಯ ಹುಡುಗರು ಹೆಂಡತಿಯನ್ನು ತುಂಬಾ ಪ್ರೀತಿಸುವ ಮೂಲಕ ಬಹಳ ಒಳ್ಳೆಯ ಗಂಡ ಎಂಬುದನ್ನು ಪ್ರೂವ್ ಮಾಡುತ್ತಾರೆ. ಇಂಥ ಪತಿಯ ಪ್ರೀತಿಯನ್ನು ಅಷ್ಟೇ ಆದರದಿಂದ ಪತ್ನಿಯೂ ಸ್ವೀಕರಿಸುತ್ತಾಳೆ.

ತುಲಾ ರಾಶಿ
ಆಶ್ಚರ್ಯವಾದರೂ ಈ ರಾಶಿಯ ಹುಡುಗರು ಸ್ವಲ್ಪ ಕಟ್ಟುನಿಟ್ಟು. ಯಾವುದೇ ಅಡ್ಡ ದಾರಿ ಹಿಡಿಯುವಂಥ ಆಲೋಚನೆಗಳು, ಪ್ರಲೋಭನೆಗಳಿಗೆ ಒಳಗಾಗದೆ ಮನೆ ಹಾಗೂ ಪತ್ನಿಯನ್ನು ಪ್ರೀತಿಸುತ್ತಾರ. ಅಂದರೆ, ತಮ್ಮನ್ನು ಕಟ್ಟಿಕೊಂಡವರಿಗೆ ತುಂಬಾ ನಿಷ್ಠೆ ಹಾಗೂ ಪ್ರಾಮಾಣಿಕರಾಗಿರುತ್ತಾರೆ. ಈ ರಾಶಿಯ ಹುಡುಗನನ್ನು ಮದುವೆಯಾದ ಯುವತಿಯ ಅದೃಷ್ಟವೂ ತುಂಬಾ ಒಳ್ಳೆಯದಿರುತ್ತದೆ. ಕಾರಣ, ಆಕೆಯನ್ನು ಸದಾ ಖುಷಿಯಲ್ಲಿಟ್ಟುರುತ್ತಾನೆ. ಮಡದಿಯ ಮನಸ್ಸನ್ನು ಅರಿತು, ಹೊಂದಾಣಿಕೆಯಿಂದ ಬಾಳ್ವೆ ಮಾಡುವ ಮನಸ್ಥಿತಿಯೂ ಈ ರಾಶಿಯವರಿಗಿರುತ್ತದೆ.

PREV
Read more Articles on
click me!

Recommended Stories

ಕಡಿಮೆ ರಕ್ತದೊತ್ತಡ ಸಮಸ್ಯೆಗೆ ಮನೆಯಲ್ಲೇ ಲಭ್ಯವಿರುವ ಟಾಪ್ 5 ಫುಡ್‌ಗಳನ್ನು ಸೂಚಿಸಿದ ವೈದ್ಯರು
Daily Horoscope: ಇವೆರೆಡನ್ನು ದಾನ ಮಾಡಿದರೆ ಮಹಾಲಕ್ಷ್ಮಿಯ ಸಂಪ್ರೀತಿಗೆ ಪಾತ್ರರಾಗಬಹುದು!