ನವದೆಹಲಿ(ಜೂ.14): ಕೋವಿಡ್ ಸಂಕಷ್ಟಕ್ಕೆ ಪರಿಹಾರ ಒದಗಿಸಲು ಆಯೋಜಿಸಿದ ವರ್ಚುವಲ್ ಚಾರಿಟಿ ಪಂದ್ಯ ಅತ್ಯಂತ ಯಶಸ್ವಿಯಾಗಿದೆ. ಆದರೆ ಈ ಟೂರ್ನಿ ಇದೀಗ ವಿವಾದಕ್ಕೆ ಕಾರಣಾಗಿದೆ. ದಿಗ್ಗಜ ವಿಶ್ವನಾಥನ್ ಆನಂದ್ ವಿರುದ್ಧ ಚೆಸ್ ಆಡಲು ಬಾಲಿವುಡ್ ನಟ ಅಮಿರ್ ಖಾನ್, ರಿತೇಶ್ ದೇಶ್‌ಮುಖ್, ಕಿಚ್ಚ ಸುದೀಪ್, ಕ್ರಿಕೆಟಿಗ ಯಜುವೇಂದ್ರ ಚಹಾಲ್ ಸೇರಿದಂತೆ ಹಲವ ಸೆಲೆಬ್ರೆಟಿಗಳು ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಆದರೆ ಝೆರೋಧ ಸಂಸ್ಥೆ ಸಂಸ್ಥಾಪಕ ನಿಖಿಲ್ ಕಾಮತ್ ಮೋಸದಾಟದಿಂದ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದಾರೆ.
ಚೆಸ್ ಪಂದ್ಯದಲ್ಲಿ ಸೆಲೆಬ್ರೆಟಿಗಳ ಮೋಡಿ; ಸುದೀಪ್ ಆಟಕ್ಕೆ ದಿಗ್ಗಜ ವಿಶ್ವನಾಥನ್ ಆನಂದ್ ಮೆಚ್ಚುಗೆ!.
ಸೆಲೆಬ್ರೆಟಿಗಳು ಏಕಕಾಕಲಕ್ಕೆ ಚೆಸ್ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ ವಿರುದ್ಧ ಆಟವಾಡಿದ್ದರು. ಸುದೀಪ್, ಚಹಾಲ್ ಸೇರಿದಂತೆ ಎಲ್ಲಾ ಸೆಲೆಬ್ರೆಟಿಗಳನ್ನು ಸೋಲಿಸಿದ್ದ ಆನಂದ್ ನಿಖಿಲ್ ಕಾಮತ್ ವಿರುದ್ದ ಆಟ ಅಷ್ಟು ಸುಲಭವಾಗಿರಲಿಲ್ಲ. ಈ ಆಟದಲ್ಲಿ ನಿಖಿಲ್, ದಿಗ್ಗಜ ವಿಶಿಯನ್ನೇ ಸೋಲಿಸಿದ್ದರು. ಶೇ.99 ರಷ್ಟು ನಿಖರತೆ ಹೊಂದಿದ್ದ ಕಾರಣ ಪರಿಶೀಲಿಸಲಾಯಿತು. ಈ ವೇಳೆ ನಿಖಿಲ್ ಕಂಪ್ಯೂಟರ್ ಅನಾಲಿಸ್ಟ್ ನೆರವು ಪಡೆದಿರುವುದು ಬಹಿರಂಗವಾಗಿತ್ತು.
ನಿಖಿಲ್ ಮೋಸದಾಟ ಬಹಿರಂಗವಾಗುತ್ತದ್ದಂತೆ ಆಕ್ರೋಶ ಹೆಚ್ಚಾಗಿತ್ತು, ಟ್ವಿಟರ್ ಮೂಲಕ ನೆಟ್ಟಿಗರು ನಿಖಿಲ್ ವಿರುದ್ಧ ಕಮೆಂಟ್ ಮಾಡಿದ್ದರು. ಇತ್ತ ಆನಂದ್ ಕೂಡ ಬೇಸರ ವ್ಯಕ್ತಪಡಿಸಿದ್ದರು. ಈ ಘಟನೆ ಬಳಿಕ ನಿಖಿಲ್ ಕಾಮತ್ ತಮ್ಮ ಮೋಸದಾಟಕ್ಕೆ ಕ್ಷಮೆ ಕೇಳಿದ್ದಾರೆ. ಜೊತೆಗೆ ತಾವು ಕಂಪ್ಯೂಟರ್ ಅನಾಲಿಸ್ಟ್ ನೆರವು ಪಡೆದಿರುವುದನ್ನು ಒಪ್ಪಿಕೊಂಡಿದ್ದರು.
ಮೋಸದಾಟವಾಡಿದ ನಿಖಿಲ್ ಕಾಮತ್ ಕ್ಷಮೆ ಕೇಳಿದರೂ, ವರ್ಚುವಲ್ ಚೆಸ್.ಕಾಂ ನಿಷೇಧ ಶಿಕ್ಷೆ ವಿಧಿಸಿದೆ. ನಿಖಿಲ್ ವರ್ಚುಲ್ ಚೆಸ್ ಆಡದಂತೆ ನಿರ್ಬಂಧಿಸಿದೆ.