* ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಗೆದ್ದ ನೊವಾಕ್ ಜೋಕೋವಿಚ್
* 19ನೇ ಗ್ರ್ಯಾನ್‌ಸ್ಲಾಂಗೆ ಮುತ್ತಿಕ್ಕಿದ ವಿಶ್ವದ ನಂ.1 ಟೆನಿಸಿಗ
* ಸ್ಟೆಫಾನೋಸ್ ಸಿಟ್ಸಿಪಾಸ್ ಎದುರು ರೋಚಕ ಜಯ ಸಾಧಿಸಿದ ಸರ್ಬಿಯಾದ ಟೆನಿಸಿಗ
ಪ್ಯಾರಿಸ್(ಜೂ.14): 4 ವರ್ಷಗಳ ಬಳಿಕ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್‌ನಲ್ಲಿ ರಾಫೆಲ್ ನಡಾಲ್ ಬದಲು ಬೇರೆಯವರು ಚಾಂಪಿಯನ್ ಆಗಿದ್ದಾರೆ. ಈ ಬಾರಿ ಟ್ರೋಫಿಗೆ ಮುತ್ತಿಟ್ಟಿರುವುದು 2016ರ ಫ್ರೆಂಚ್ ಓಪನ್ ಚಾಂಪಿಯನ್, ವಿಶ್ವ ನಂ.1 ಆಟಗಾರ ಸರ್ಬಿಯಾದ ನೊವಾಕ್ ಜೋಕೋವಿಚ್.
ಗ್ರೀಸ್‌ನ 22 ವರ್ಷದ ಯುವ ಟೆನಿಸಿಗ ಸ್ಟೆಫಾನೋಸ್ ಸಿಟ್ಸಿಪಾಸ್ ವಿರುದ್ಧ ಭಾನುವಾರ ನಡೆದ ಫೈನಲ್‌ನಲ್ಲಿ ಜೋಕೋವಿಚ್ 6-7(6-8), 2-6, 6-3, 6-2, 6-4 ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿ, ತಮ್ಮ ವೃತ್ತಿಬದುಕಿನಲ್ಲಿ 2ನೇ ಬಾರಿಗೆ ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡರು. ಒಟ್ಟಾರೆ ಇದು ಅವರ 19ನೇ ಗ್ರ್ಯಾನ್ ಸ್ಲಾಂ ಗೆಲುವು.
Novak Djokovic becomes the first male player in the Open Era to win all four Grand Slams at least twice.
Novak Djokovic est le premier joueur de l’ère Open à remporter au moins deux fois tous les titres du Grand Chelem. pic.twitter.com/DPMi0pGJyK
ಭರ್ಜರಿ ಪೈಪೋಟಿ: ಪಂದ್ಯ 4 ಗಂಟೆಗೂ ಹೆಚ್ಚು ಕಾಲ ನಡೆಯಿತು. ಮೊದಲ ಸೆಟ್ ಭಾರೀ ರೋಚಕತೆಯಿಂದ ಕೂಡಿತ್ತು. ಇಬ್ಬರೂ ತಲಾ 6 ಗೇಮ್‌ಗಳನ್ನು ಗೆದ್ದ ಕಾರಣ, ಟೈ ಬ್ರೇಕರ್ ಮೊರೆ ಹೋಗಲಾಯ್ತು. ಟೈ ಬ್ರೇಕರ್‌ನಲ್ಲಿ ಗೆದ್ದು ಸಿಟ್ಸಿಪಾಸ್ ಸೆಟ್ ತಮ್ಮದಾಗಿಸಿಕೊಂಡರು. 2ನೇ ಸೆಟ್ 6-2ರಲ್ಲಿ ಸಿಸ್ಟಿಪಾಸ್ ಪಾಲಾಯಿತು. 2 ಸೆಟ್ ಹಿನ್ನಡೆ ಅನುಭವಿಸಿದ ಮೇಲೆ ಜೋಕೋವಿಚ್ ತಮ್ಮ ಅಸಲಿ ಆಟ ಪ್ರದರ್ಶಿಸಲು ಆರಂಭಿಸಿದರು. ಜೋಕೋಗೆ ಭರ್ಜರಿ ಪೈಪೋಟಿ ನೀಡಿದರೂ, ವಿಶ್ವ ನಂ.1 ಆಟಗಾರನ ಜಾದೂಗೆ ಗ್ರೀಕ್ ಆಟಗಾರ ಸಮರ್ಥ ಉತ್ತರ ನೀಡಲು ಸಾಧ್ಯವಾಗಲಿಲ್ಲ. 3ನೇ ಹಾಗೂ 4ನೇ ಸೆಟ್‌ಗಳನ್ನು 6-3, 6-2ರಲ್ಲಿ ಸುಲಭವಾಗಿ ಗೆದ್ದ ಜೋಕೋವಿಚ್, 5ನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಮತ್ತೆ ಸಮಬಲದ ಹೋರಾಟ ಕಂಡು ಬಂತು. ಜೋಕೋವಿಚ್ ಆರಂಭಿಕ ಮುನ್ನಡೆ ಸಾಧಿಸಿದರೂ, ಸಿಟ್ಸಿಪಾಸ್ ಹೋರಾಟ ಬಿಡಲಿಲ್ಲ. ಅಂತಿಮವಾಗಿ 6-4 ಗೇಮ್‌ಗಳಲ್ಲಿ ಜೋಕೋವಿಚ್ ಸೆಟ್ ಗೆದ್ದರು.
2️⃣e couronne à Paris 👑👑 soulève la Coupe des Mousquetaires pour la 2e fois. Mené 2 sets à 0, il remporte les 3 suivants 6-7(6), 2-6, 6-3, 6-2, 6-4 face à Stefanos Tsitsipas. pic.twitter.com/1ZXX8hvXzy
— Roland-Garros (@rolandgarros)ಫ್ರೆಂಚ್ ಓಪನ್ 2021: 2 ದಿನದಲ್ಲಿ 2 ಗ್ರ್ಯಾನ್‌ಸ್ಲಾಂ ಜಯಿಸಿದ ಕ್ರೆಜಿಕೋವಾ
ಫೆಡರರ್, ನಡಾಲ್ 20 ಗ್ರ್ಯಾನ್ ಸ್ಲಾಂ ದಾಖಲೆ ಸರಿಗಟ್ಟಲು ಒಂದೇ ಹೆಜ್ಜೆ: ಜೋಕೋವಿಚ್ 19ನೇ ಗ್ರ್ಯಾನ್ ಸ್ಲಾಂ ಗೆದ್ದು ಅತಿಹೆಚ್ಚು ಗ್ರ್ಯಾನ್ ಸ್ಲಾಂಗಳನ್ನು ಗೆದ್ದಿರುವ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್‌ರ ದಾಖಲೆಯ ಸನಿಹಕ್ಕೆ ಬಂದಿದ್ದಾರೆ. ಫೆಡರರ್ ಹಾಗೂ ನಡಾಲ್ ಇಬ್ಬರೂ ತಲಾ 20 ಗ್ರ್ಯಾನ್ ಸ್ಲಾಂ ಟ್ರೋಫಿಗಳನ್ನು ಗೆದ್ದಿದ್ದಾರೆ. ಈ ವರ್ಷ ಇನ್ನೂ 2 ಗ್ರ್ಯಾನ್ ಸ್ಲಾಂಗಳು ಬಾಕಿ ಇದ್ದು, ಭಾರೀ ನಿರೀಕ್ಷೆ ಶುರುವಾಗಿದೆ.
🔥Grand Slam Title Leaderboard 🔥
2️⃣0️⃣ Roger Federer
2️⃣0️⃣ Rafael Nadal
1️⃣9️⃣ Novak Djokovic pic.twitter.com/j5ConjTZBN
4 ಗ್ರ್ಯಾನ್‌ಸ್ಲಾಂ ಒಂದಕ್ಕಿಂತ ಹೆಚ್ಚು ಸಲ ಗೆದ್ದು ಜೋಕೋ ದಾಖಲೆ: ನಾಲ್ಕೂ ಗ್ರ್ಯಾನ್ ಸ್ಲಾಂಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಗೆದ್ದ ವಿಶ್ವದ 3ನೇ ಆಟಗಾರ ಎನ್ನುವ ದಾಖಲೆಯನ್ನು ಜೋಕೋವಿಚ್ ಬರೆದಿದ್ದಾರೆ. 52 ವರ್ಷಗಳ ಬಳಿಕ ಈ ಸಾಧನೆ ಮಾಡಿದ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ. ಜೋಕೋವಿಚ್ 2 ಬಾರಿ ಫ್ರೆಂಚ್ ಓಪನ್, 9 ಬಾರಿ ಆಸ್ಟ್ರೇಲಿಯನ್ ಓಪನ್, 5 ಬಾರಿ ವಿಂಬಲ್ಡನ್ ಹಾಗೂ 3 ಬಾರಿ ಯುಎಸ್ ಓಪನ್ ಗೆದ್ದಿದ್ದಾರೆ.