ಯೂತ್ ಟಿಟಿ: ಭಾರತದ ಬಾಲಕಿಯರ ಸ್ವರ್ಣ ಸಾಧನೆ

By Kannadaprabha News  |  First Published Sep 17, 2021, 11:20 AM IST

* ವಿಶ್ವ ಕಿರಿಯರ ಟೇಬಲ್ ಟೆನಿಸ್‌ನಲ್ಲಿ ಪದಕಗಳ ಬೇಟೆಯಾಡಿದ ಭಾರತ

* ಪಂದ್ಯಾವಳಿಯಲ್ಲಿದ್ದ ಎಲ್ಲಾ ಸ್ವರ್ಣ ಪದಕಗಳನ್ನು ತಮ್ಮದಾಗಿಸಿಕೊಂಡ ಭಾರತ

* ಟ್ಯೂನಿಷಿಯಾದ ಟ್ಯುನಿಸ್‌ನಲ್ಲಿ ನಡೆದ ಟೇಬಲ್ ಟೆನಿಸ್ ಸ್ಪರ್ಧೆ


ನವದೆಹಲಿ(ಸೆ.17): ಟ್ಯೂನಿಷಿಯಾದ ಟ್ಯುನಿಸ್‌ ನಡೆದ ವಿಶ್ವ ಯೂತ್‌ ಕಂಟೆಂಡರ್‌ ಟೇಬಲ್‌ ಟೆನಿಸ್‌ (ಡಬ್ಲ್ಯೂಟಿಟಿ) ಟೂರ್ನಿಯಲ್ಲಿ ಕರ್ನಾಟಕದ ಯಶಸ್ವಿನಿ ಘೋರ್ಪಡೆ ಸೇರಿದಂತೆ ಭಾರತದ ಬಾಲಕಿಯರ ತಂಡ ಪ್ರಾಬಲ್ಯ ಮರೆದಿದ್ದಾರೆ. ಪಂದ್ಯಾವಳಿಯಲ್ಲಿದ್ದ ಎಲ್ಲಾ ಸ್ವರ್ಣ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಜೊತೆಗೆ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

19 ವರ್ಷದೊಳಗಿನವರ ವಿಭಾಗದಲ್ಲಿ ಸ್ವಸ್ತಿಕ ಘೋಷ್‌, ಅಂಡರ್‌-17 ವಿಭಾಗದಲ್ಲಿ ಯಶಸ್ವಿನಿ ಘೋರ್ಪಡೆ, ಅಂಡರ್‌-15ನಲ್ಲಿ ಸುಹಾನ ಸೈನಿ, ಅಂಡರ್‌-13 ವಿಭಾಗದಲ್ಲಿ ಎಂ.ಹನ್ಸಿನಿ, ಅಂಡರ್‌-11 ವಿಭಾಗದಲ್ಲಿ ಧಾನಿ ಜೈನ್‌ ಚಾಂಪಿಯನ್‌ ಆಗಿ ಹೊರ ಹೊಮ್ಮಿದ್ದಾರೆ.

Tap to resize

Latest Videos

ರಾಷ್ಟ್ರೀಯ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌: ಎಸ್‌ಎಸ್‌ಸಿಬಿ ಪ್ರಾಬಲ್ಯ

Suhana Saini wins the Girls’ Under-15 title at the World Table Tennis Youth Contender, in Slovenia. 🔥

She came from behind to win 8-11, 4-11, 12-10, 11-8. 11-9 against Bianca Mei Rosu 🇷🇴.🇮🇳 🏓

— JSW Sports (@jswsports)

U-19 🥇
U-17 🥇
U-15 🥇
U-13 🥇
U-11 🥇

🇮🇳 Indian swept all the golds at the WTT Youth Contender tournament and picked some silver and bronze medals too! 🏓 pic.twitter.com/Tm9iZBl5D9

— The Bridge (@the_bridge_in)

19 ವರ್ಷದೊಳಗಿನವರ ವಿಭಾಗದ ಫೈನಲ್‌ನಲ್ಲಿ ಸ್ವಸ್ತಿಕ ಘೋಷ್‌, ಯಶಸ್ವಿನಿ ಘೋರ್ಪಡೆ ವಿರುದ್ಧ 3-2 ಅಂತರದಿಂದ ಜಯ ಸಾಧಿಸಿದ ಸ್ವರ್ಣ ಗೆದ್ದರು. ಅಂಡರ್‌-19 ವಿಭಾಗದಲ್ಲಿ ಬೆಳ್ಳಿಗೆ ತೃಪ್ತರಾಗಿದ್ದ ಯಶಸ್ವಿನಿ, ಅಂಡರ್‌-17 ವಿಭಾಗದ ಫೈನಲ್‌ನಲ್ಲಿ ಈಜಿಪ್ಟ್‌ನ ಫರೀದಾ ಬಾದವಿ ವಿರುದ್ಧ 11-6, 14-12, 11-7 ಅಂತರದಿಂದ ಗೆಲುವಿನ ನಗೆ ಬೀರಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು.

click me!