ರಾಷ್ಟ್ರೀಯ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌: ಎಸ್‌ಎಸ್‌ಸಿಬಿ ಪ್ರಾಬಲ್ಯ

Published : Sep 17, 2021, 10:55 AM IST
ರಾಷ್ಟ್ರೀಯ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌: ಎಸ್‌ಎಸ್‌ಸಿಬಿ ಪ್ರಾಬಲ್ಯ

ಸಾರಾಂಶ

* ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸವೀರ್ಸ್‌ ಸ್ಪೋರ್ಟ್ಸ್‌ ಕಂಟ್ರೋಲ್‌ ಬೋರ್ಡ್ ಮಿಂಚಿನ ಪ್ರದರ್ಶನ * ಸವೀರ್ಸ್‌ ಸ್ಪೋರ್ಟ್ಸ್‌ ಕಂಟ್ರೋಲ್‌ ಬೋರ್ಡ್‌ನ ಐವರು ಬಾಕ್ಸರ್‌ಗಳು ಎರಡನೇ ಸುತ್ತು ಪ್ರವೇಶ * ಬಳ್ಳಾರಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್

ಬಳ್ಳಾರಿ(ಸೆ.17): ರಾಷ್ಟ್ರೀಯ ಪುರುಷರ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಎಸ್‌ಎಸ್‌ಸಿಬಿ(ಸವೀರ್ಸ್‌ ಸ್ಪೋರ್ಟ್ಸ್‌ ಕಂಟ್ರೋಲ್‌ ಬೋರ್ಡ್‌)ನ ಐವರೂ ಬಾಕ್ಸರ್‌ಗಳು ಗೆಲ್ಲುವ ಮೂಲಕ ಪ್ರಾಬಲ್ಯ ಮೆರೆದಿದ್ದಾರೆ.

ಅಂತಾರಾಷ್ಟ್ರೀಯ ಪದಕ ವಿಜೇತ ದೀಪಕ್‌ ಕುಮಾರ್‌(51 ಕೆ.ಜಿ.), ಬಿಹಾರದ ಅಮಾನ್‌ ಕುಮಾರ್‌ ವಿರುದ್ಧ ಗೆದ್ದು 2ನೇ ಸುತ್ತು ಪ್ರವೇಶಿಸಿದರು. ಎಸ್‌ಎಸ್‌ಬಿಸಿಯ ಬರುನ್‌ ಸಿಂಗ್‌(48 ಕೆ.ಜಿ.), ಆಕಾಶ್‌(54 ಕೆ.ಜಿ.), ದಲ್ವೀರ್‌ ಸಿಂಗ್‌ ಥೋಮರ್‌(64 ಕೆ.ಜಿ.), ನವೀನ್‌ ಬೂರಾ(71 ಕೆ.ಜಿ.) ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ್ದಾರೆ.

ರಾಷ್ಟ್ರೀಯ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌: ಸುಮಿತ್‌ ಶುಭಾರಂಭ

ಕರ್ನಾಟಕದ ರಯ್ಯಾನ್‌ ಎಂ.ಡಿ.(67 ಕೆ.ಜಿ.) ದೆಹಲಿಯ ಭೂಪೇಶ್‌ ರಾಹುಲ್‌ ವಿರುದ್ಧ ಗೆದ್ದರು. ಮಹಾರಾಷ್ಟ್ರದ ಅಜಯ್‌, ಯಶ್‌ಗೌಡ್‌, ಉತ್ತರ ಪ್ರದೇಶದ ಜಾವೆದ್‌, ಚಂಡೀಗಢದ ರೋಹಿತ್‌, ರಾಜಸ್ಥಾನದ ಜೈವರ್ಧನ್‌ ಕಸ್ನಿಯಾ 2ನೇ ಸುತ್ತು ಪ್ರವೇಶಿಸಿದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Asian Games 2026: ಕೊನೆಯ ಕ್ಷಣದವರೆಗೂ ಜಿದ್ದಾಜಿದ್ದಿ; ಮಹಿಳಾ ಕಬಡ್ಡಿಯಲ್ಲಿ ಭಾರತಕ್ಕೆ ಚಿನ್ನದ ಕಿರೀಟ!
ಕಬಡ್ಡಿಯಲ್ಲಿ ಭಾರತಕ್ಕೆ ಚಿನ್ನದ ಪದಕ, ರೋಚಕ ಪಂದ್ಯದಲ್ಲಿ ಇರಾನ್ ವಿರುದ್ಧ ಭರ್ಜರಿ ಗೆಲುವು