ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೇರಿ ಇತಿಹಾಸ ನಿರ್ಮಿಸಿದ ಅನ್ಶು ಮಲಿಕ್‌!

By Suvarna NewsFirst Published Oct 7, 2021, 9:26 AM IST
Highlights

* ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶಿಸಿ ದಾಖಲೆ ಬರೆದ ಅನ್ಶು ಮಲಿಕ್

* 57 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸಿರುವ 19 ವರ್ಷದ ಅನ್ಶು ಮಲಿಕ್

* ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ ಪ್ರವೇಶಿಸಿದ ಮೊದಲ ಮಹಿಳಾ ಭಾರತೀಯ ಕುಸ್ತಿಪಟು ಅನ್ಶು ಮಲಿಕ್

ಓಸ್ಲೋ(ಅ.07): ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ ಪ್ರವೇಶಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎನ್ನುವ ದಾಖಲೆಯನ್ನು 19 ವರ್ಷದ ಅನ್ಶು ಮಲಿಕ್‌ ಬರೆದಿದ್ದಾರೆ. 

57 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಅನ್ಶು ಸೆಮಿಫೈನಲ್‌ನಲ್ಲಿ ಯೂರೋಪಿಯನ್‌ ಚಾಂಪಿಯನ್‌ ಉಕ್ರೇನ್‌ನ ಸೋಲೊಮಿಯಾ ವಿರುದ್ಧ 11-0ರ ಅಂತರದಲ್ಲಿ ಗೆಲುವು ಸಾಧಿಸಿದರು. 19 ವರ್ಷದ ಅನ್ಶು ಫೈನಲ್‌ನಲ್ಲಿ 2016ರ ಒಲಿಂಪಿಕ್‌ ಚಾಂಪಿಯನ್‌ ಅಮೆರಿಕದ ಹೆಲೆನ್‌ ಮಾರೌಲಿಸ್‌ ವಿರುದ್ಧ ಚಿನ್ನದ ಪದಕಕ್ಕಾಗಿ ಸೆಣಸಲಿದ್ದಾರೆ. 

Anshu MALIK 🇮🇳 made HERstory with her semifinal win and became the first Indian woman to reach a world gold-medal match. pic.twitter.com/ON3Vk09ZSq

— United World Wrestling (@wrestling)

WW 57kg semifinal bouts results

🥇Anshu MALIK 🇮🇳 vs Helen MAROULIS 🇺🇸

SF 1: Anshu MALIK 🇮🇳 df Solomiia VYNNYK 🇺🇦, 11-0
SF 2: Helen MAROULIS 🇺🇸 df Sae NANJO 🇯🇵, 5-4

— United World Wrestling (@wrestling)

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಇದುವರೆಗೂ ನಾಲ್ವರು ಮಹಿಳಾ ಕುಸ್ತಿಪಟುಗಳು ಪದಕ ಜಯಿಸಿದ್ದಾರೆ. ಗೀತಾ ಫೋಗಾಟ್‌(2012), ಬಬಿತಾ ಫೋಗಾಟ್(2012), ಪೂಜಾ ದಂಡ(2018) ಹಾಗೂ ವಿನೇಶ್‌ ಫೋಗಾಟ್(2019) ಈ ನಾಲ್ವರು ಮಹಿಳಾ ಕುಸ್ತಿ ಪಟುಗಳು ಕಂಚಿನ ಪದಕ ಜಯಿಸಿದ್ದಾರೆ. ಇದೀಗ ಅನ್ಯು ಮಲಿಕ್‌ ಫೈನಲ್‌ ಪ್ರವೇಶಿಸುವ ಮೂಲಕ ಬೆಳ್ಳಿ ಪದಕ ಖಚಿತ ಪಡಿಸಿಕೊಂಡಿದ್ದು, ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. 

Murder Case: ಕುಸ್ತಿಪಟು ಸುಶೀಲ್‌ ಕುಮಾರ್‌ಗೆ ಜಾಮೀನು ನಿರಾಕರಣೆ

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ(ಪುರುಷ&ಮಹಿಳಾ ಸೇರಿ) ಫೈನಲ್‌ ಪ್ರವೇಶಿಸಿದ ಆರನೇ ಭಾರತೀಯ ಎನ್ನುವ ಗೌರವಕ್ಕೂ ಅನ್ಯು ಮಲಿಕ್ ಭಾಜನರಾಗಿದ್ದಾರೆ. ಈ ಮೊದಲು ಬಿಷಾಂಬರ್‌ ಸಿಂಗ್(1967), ಸುಶೀಲ್ ಕುಮಾರ್(2010), ಅಮಿತ್ ದಹಿಯಾ(2013), ಭಜರಂಗ್‌ ಪುನಿಯಾ(2018) ಹಾಗೂ ದೀಪಕ್‌ ದಹಿಯಾ(2019) ಈ ಮೊದಲು ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕಕ್ಕಾಗಿ ಕಾದಾಟ ನಡೆಸಿದ್ದರು. ಆದರೆ ಸುಶೀಲ್ ಕುಮಾರ್ ಮಾತ್ರ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಉಳಿದೆಲ್ಲಾ ಭಾರತೀಯ ಕುಸ್ತಿಪಟುಗಳು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಇದೀಗ ಅನ್ಯು ಮಲಿಕ್ ಚಿನ್ನದ ಪದಕ ಗೆಲ್ಲುವ ಸುವರ್ಣಾವಕಾಶ ಬಂದೊದಗಿದೆ

ಇನ್ನು ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್‌ ಲಿಂಡಾ ಮೋರಿಸ್‌ಗೆ ಶಾಕ್‌ ನೀಡಿ ಪದಕದ ಆಸೆ ಮೂಡಿಸಿದ್ದ ಸರಿತಾ ಮೋರ್ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದು, ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ. ಇದೇ ವೇಳೆ ಮಂಗಳವಾರ ರಾತ್ರಿ ನಡೆದ ಮಹಿಳೆಯರ 55 ಕೆ.ಜಿ. ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ ಭಾರತದ ಪಿಂಕಿ, ಅಮೆರಿಕಾದ ಜೆನ್ನಾ ರೋಸ್‌ ವಿರುದ್ಧ 2-5ರಿಂದ ಸೋಲನುಭವಿಸಿದರು.

ಸ್ಯಾಫ್‌ ಕಪ್‌: ಇಂದು ಭಾರತ-ಲಂಕಾ ಪಂದ್ಯ

ಮಾಲೆ: ಬಾಂಗ್ಲಾದೇಶ ವಿರುದ್ಧ ಮೊದಲ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟಿದ್ದ ಭಾರತ ತಂಡ, ಗುರುವಾರ ನಡೆಯಲಿರುವ ಸ್ಯಾಫ್‌ ಕಪ್‌ ಫುಟ್ಬಾಲ್‌ ಟೂರ್ನಿಯ ತನ್ನ 2ನೇ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿದ್ದು, ಮೊದಲ ಗೆಲುವಿಗಾಗಿ ಎದುರು ನೋಡುತ್ತಿದೆ. 

ಭಾರತ ತಂಡದ ನಾಯಕ ಸುನಿಲ್‌ ಚೆಟ್ರಿ (76 ಗೋಲು) ಇನ್ನೊಂದು ಗೋಲು ಬಾರಿಸಿದರೆ ಬ್ರೆಜಿಲ್‌ನ ದಿಗ್ಗಜ ಪೀಲೆ(77 ಗೋಲು) ಅವರ ಅಂತಾರಾಷ್ಟ್ರೀಯ ಗೋಲುಗಳ ದಾಖಲೆಯನ್ನು ಸರಿಗಟ್ಟಲಿದ್ದಾರೆ.

click me!