World Athletics Awards: ಲೆಜೆಂಡರಿ ಅಥ್ಲೀಟ್ ಅಂಜು ಬಾಬಿ ಜಾರ್ಜ್‌ಗೆ ವರ್ಷದ ಮಹಿಳೆ ಪ್ರಶಸ್ತಿ!

By Suvarna NewsFirst Published Dec 2, 2021, 12:53 PM IST
Highlights

*ಭಾರತದ  ಅಂತಾರಾಷ್ಟ್ರೀಯ ಲಾಂಗ್ ಜಂಪ್ ತಾರೆ
*ಅಂಜು ಬಾಬಿ ಜಾರ್ಜ್‌ಗೆ ವರ್ಷದ ಮಹಿಳೆ ಪ್ರಶಸ್ತಿ
*ಲಿಂಗ ಸಮಾನತೆಗಾಗಿ ನಿರಂತರ ಧ್ವನಿಯಾಗಿರುವ ಜಾರ್ಜ್

ನವದೆಹಲಿ(ಡಿ. 02):ವರ್ಲ್ಡ್ ಅಥ್ಲೆಟಿಕ್ಸ್ (World Athletics), ಭಾರತದ ಲೆಜೆಂಡರಿ ಅಥ್ಲೀಟ್ ಅಂಜು ಬಾಬಿ ಜಾರ್ಜ್ (Anju Bobby George) ಅವರನ್ನು 'ವರ್ಷದ ಮಹಿಳೆ' (Woman of the Year)ಎಂದು ಪ್ರಶಸ್ತಿ ನೀಡಿ ಗೌರವಿಸಿದೆ. ಭಾರತದಲ್ಲಿ ಕ್ರೀಡೆಯನ್ನು ಮುನ್ನಡೆಸಲು ಅವರ ಪ್ರಯತ್ನಗಳು ಮತ್ತು ಅವರ ಹೆಜ್ಜೆಗಳನ್ನು ಅನುಸರಿಸಲು ಹೆಚ್ಚಿನ ಮಹಿಳೆಯರನ್ನು ಪ್ರೇರೇಪಿಸುವ (Inspiring Women) ಮೂಲಕ ಈ ವರ್ಷದ ಪ್ರಶಸ್ತಿಗೆ  ಅಂಜು ಬಾಬಿ ಹೆಚ್ಚು ಅರ್ಹರಾಗಿದ್ದಾರೆ. ಜಾರ್ಜ್, ಭಾರತದ ಮಾಜಿ ಅಂತಾರಾಷ್ಟ್ರೀಯ ಲಾಂಗ್ ಜಂಪ್ ತಾರೆಯಾಗಿದ್ದೂ (Long Jump) ಇನ್ನೂ ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 2016 ರಲ್ಲಿ ಅವರು ಯುವತಿಯರಿಗೆ ತರಬೇತಿ ಅಕಾಡೆಮಿಯನ್ನು (Training Academy) ತೆರೆದಿದ್ದರು. ಈ ಅಕಾಡೆಮಿಯಿಂದ ಈಗಾಗಲೇ ವಿಶ್ವ U20 ಪದಕ ವಿಜೇತರು  ಹೊರಹೊಮ್ಮಿದ್ದಾರೆ

ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್‌ನ (Indian Athletics Federation) ಹಿರಿಯ ಉಪಾಧ್ಯಕ್ಷರಾಗಿ ತಮ್ಮ ಪಾತ್ರದಲ್ಲಿ ಲಿಂಗ ಸಮಾನತೆಗಾಗಿ (Gender Equality) ನಿರಂತರ ಧ್ವನಿಯಾಗಿರುವ ಬಾಬಿ ಜಾರ್ಜ್ ಅವರು ಕ್ರೀಡೆಯಲ್ಲಿ ಭವಿಷ್ಯದ ನಾಯಕತ್ವ ಸ್ಥಾನಗಳಿಗಾಗಿ ಶಾಲಾಮಕ್ಕಳಿಗೆ ಮಾರ್ಗದರ್ಶನ (Mentoring School Girls) ನೀಡುತ್ತಾರೆ ಮತ್ತು ಆದ್ದರಿಂದ ಅವರಿಗೆ ವರ್ಷದ ಮಹಿಳೆ ಪ್ರಶಸ್ತಿಯನ್ನು ನೀಡಲಾಗಿದೆ. 

ಟ್ವೀಟ್‌  ಮೂಲಕ ಅಂಜು ಬಾಬಿ ಜಾರ್ಜ್‌ ಹರ್ಷ! 

ಈ ಬಗ್ಗೆ ಟ್ವೀಟ್‌ (Tweet) ಮಾಡುವ ಮೂಲಕ ಅಂಜು ಬಾಬಿ ಜಾರ್ಜ್‌ ಹರ್ಷ ವ್ಯಕ್ತಪಡಿಸಿದ್ದಾರೆ. "ವಿಶ್ವ ಅಥ್ಲೆಟಿಕ್ಸ್‌ನಿಂದ ವರ್ಷದ ಮಹಿಳೆ ಪ್ರಶಸ್ತಿಯನ್ನು ಪಡೆದಿರುವುದು ನಿಜವಾಗಿಯೂ ವಿನಮ್ರ ಮತ್ತು ಗೌರವ" ಎಂದು ಅಂಜು ಹೇಳಿದ್ದಾರೆ. "ಪ್ರತಿದಿನ ಬೆಳಿಗ್ಗೆ ಎದ್ದು ಮತ್ತೆ ಕ್ರೀಡಾಲೋಕಕ್ಕೆ ಹಿಂತಿರುಗಿಸುವುದಕ್ಕಿಂತ ಉತ್ತಮವಾದ ಭಾವನೆ ಇನ್ನೊಂದಿಲ್ಲ, ಇದು ಯುವತಿಯರನ್ನು ಸಕ್ರಿಯಗೊಳಿಸಲು ಮತ್ತು ಸಶಕ್ತಗೊಳಿಸಲು ಅನುವು ಮಾಡಿಕೊಡುತ್ತದೆ! ನನ್ನ ಪ್ರಯತ್ನವನ್ನು ಗುರುತಿಸಿದ್ದಕ್ಕಾಗಿ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ. ಜತೆಗೆ ವರ್ಚುವಲ್‌ ಸಭೆಯಲ್ಲಿ ತಾವು ಭಾಗವಹಿಸಿದ ಫೋಟೋ ಹಾಗೂ ಪ್ರಶಸ್ತಿಯ ಪ್ರಮಾಣ ಪತ್ರವನ್ನು ಟ್ವೀಟ್‌ ಕೂಡ ಮಾಡಿದ್ದಾರೆ. 

 

Truly humbled and honoured to be awarded Woman of the Year by

There is no better feeling than to wake up everyday and give back to the sport, allowing it to enable and empower young girls!

Thank you for recognising my efforts. 😊😊 pic.twitter.com/yeZ5fgAUpa

— Anju Bobby George (@anjubobbygeorg1)

 

ಒಲಿಂಪಿಕ್ ಚಾಂಪಿಯನ್ಸ್‌ಗೆ ವರ್ಷದ ವಿಶ್ವ ಅಥ್ಲೀಟ್‌ ಪ್ರಶಸ್ತಿ!

ಒಲಿಂಪಿಕ್ ಚಾಂಪಿಯನ್‌ಗಳಾದ (Olympic Champion) ಜಮೈಕಾದ ಎಲೈನ್ ಥಾಂಪ್ಸನ್-ಹೆರಾ ( Elaine Thompson-Herah) ಮತ್ತು ನಾರ್ವೆಯ  ಕಾರ್ಸ್ಟನ್ ವಾರ್ಹೋಮ್ (Karsten Warholm) ಅವರನ್ನು ಬುಧವಾರ ನಡೆದ ವರ್ಚುವಲ್‌  ವರ್ಲ್ಡ್ ಅಥ್ಲೆಟಿಕ್ಸ್ ಅವಾರ್ಡ್ಸ್ 2021  ಸಮಾರಂಭದಲ್ಲಿ ವರ್ಷದ ವಿಶ್ವ ಅಥ್ಲೀಟ್‌ ಪ್ರಶಸ್ತಿ (World Athletes of the Year ) ನೀಡಲಾಗಿದೆ.

ಥಾಂಪ್ಸನ್-ಹೆರಾ ಈ ವರ್ಷ ಇತಿಹಾಸದಲ್ಲಿ ಅತ್ಯುತ್ತಮವಾದ ಸ್ಪ್ರಿಂಟ್ (Sprint) ದಾಖಲೆ ನಿರ್ಮಿಸಿದ್ದಾರೆ. ಟೋಕಿಯೊದಲ್ಲಿ ತನ್ನ ಒಲಿಂಪಿಕ್ 100m ಮತ್ತು 200m ಪ್ರಶಸ್ತಿಗಳನ್ನು ಉಳಿಸಿಕೊಂಡ ಥಾಂಪ್ಸನ್-ಹೆರಾ   4x100m ರಿಲೇಯಲ್ಲಿ (Relay Race)) ಚಿನ್ನದ ಪದಕವನ್ನು ಗೆದ್ದಿದ್ದರು. ಆಕೆಯ ಒಲಂಪಿಕ್ ಗೇಮ್ಸ್‌ನಲ್ಲಿ ಮೂರು ಪದಕಗಳ ಹೊರತಾಗಿ ಅವರು 100 ಮೀ ಮತ್ತು 200 ಮೀ ಓಟದಲ್ಲಿ ಕ್ರಮವಾಗಿ 10.54 ಮತ್ತು 21.53 ಸೆಕೆಂಡಗಳ  ವಿಶ್ವ ದಾಖಲೆ (World Record) ಕೂಡ ಮಾಡಿದ್ದಾರೆ. ಈ ಮೂಲಕ ವಿಶ್ವದ ಸಾರ್ವಕಾಲಿಕ ಪಟ್ಟಿಗಳಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದೂ ದೀರ್ಘಕಾಲದ ವಿಶ್ವ ದಾಖಲೆಗಳಲಿಗೆ ಅತ್ಯಂತ ಸಮೀಪದ ಪೈಪೋಟಿ ನೀಡಿದ್ದಾರೆ.

click me!