ವಿಂಬಲ್ಡನ್‌ ಪಟ್ಟಕ್ಕಾಗಿ ಆಶ್ಲೆ ಬಾರ್ಟಿ-ಪ್ಲಿಸ್ಕೋವಾ ನಡುವೆ ಫೈಟ್‌

By Kannadaprabha NewsFirst Published Jul 9, 2021, 8:20 AM IST
Highlights

* ವಿಂಬಲ್ಡನ್‌ ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ ಆಶ್ಲೆ ಬಾರ್ಟಿ ಹಾಗೂ ಕರೊಲಿನಾ ಪ್ಲಿಸ್ಕೋವಾ ಸೆಣಸಾಟ 

* ವೃತ್ತಿಜೀವನದಲ್ಲಿ ಮೊದಲ ಬಾರಿಗೆ ವಿಂಬಲ್ಡನ್‌ ಫೈನಲ್‌ ಪ್ರವೇಶಿಸಿದ ಆಶ್ಲೆ ಬಾರ್ಟಿ

* ಈ ಸಲ ಮತ್ತೊಮ್ಮೆ ಹೊಸ ಚಾಂಪಿಯನ್ ಉದಯ

ಲಂಡನ್‌(ಜು.09)‌: ಪ್ರತಿಷ್ಠಿತ ವಿಂಬಲ್ಡನ್‌ ಟೆನಿಸ್‌ ಪಂದ್ಯಾವಳಿಯ ಮಹಿಳಾ ಸಿಂಗಲ್ಸ್‌ ವಿಭಾಗದ ಅಂತಿಮ ವೇದಿಕೆ ಸಿದ್ಧವಾಗಿದ್ದು, ಪ್ರಶಸ್ತಿಗಾಗಿ ವಿಶ್ವ ನಂ.1 ಆಶ್ಲೆ ಬಾರ್ಟಿ ಹಾಗೂ ಜೆಕ್‌ ರಿಪಬ್ಲಿಕ್‌ನ ಕರೊಲಿನಾ ಪ್ಲಿಸ್ಕೋವಾ ಸೆಣಸಾಟ ನಡೆಸಲಿದ್ದಾರೆ.

ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ನ ಮೊದಲ ಸೆಮಿಫೈನಲ್‌ನಲ್ಲಿ 2018ರ ವಿಂಬಲ್ಡನ್‌ ಚಾಂಪಿಯನ್‌ ಏಂಜೆಲಿಕ್‌ ಕೆರ್ಬರ್‌ ವಿರುದ್ಧ 6-3, 7-6(3) ನೇರ ಸೆಟ್‌ಗಳಿಂದ ಜಯ ಸಾಧಿಸಿದ ಬಾರ್ಟಿ, ವೃತ್ತಿಜೀವನದಲ್ಲಿ ಮೊದಲ ಬಾರಿಗೆ ವಿಂಬಲ್ಡನ್‌ ಫೈನಲ್‌ ಪ್ರವೇಶಿಸಿದರು. ಇದರೊಂದಿಗೆ 41 ವರ್ಷಗಳ ಬಳಿಕ ವಿಂಬಲ್ಡನ್‌ ಫೈನಲ್‌ ಪ್ರವೇಶಿಸಿದ ಆಸ್ಪ್ರೇಲಿಯಾದ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾದರು. ಇವಾನ್ನೆ ಗೊಲಾಗೊಂಗ್‌ 1971, 1980ರಲ್ಲಿ ವಿಂಬಲ್ಡನ್‌ ಜಯಿಸಿದ್ದರು. ಇದಾದ ಬಳಿಕ ಆಸ್ಪ್ರೇಲಿಯಾದ ಯಾವ ಆಟಗಾರ್ತಿಯರು ಈ ಸಾಧನೆ ಮಾಡಿಲ್ಲ.

The World No.1 was near flawless in her semi-final win... | pic.twitter.com/Es7pHECEoX

— Wimbledon (@Wimbledon)

Coming through...

With shots like this, there was simply not stopping . pic.twitter.com/03zHccrcVh

— Wimbledon (@Wimbledon)

ವಿಂಬಲ್ಡನ್‌: ಫೆಡರರ್‌ಗೆ ಸೋಲು, ಮುಗಿಯಿತಾ ಟೆನಿಸ್‌ ದಿಗ್ಗಜನ ಕೆರಿಯರ್?

ಸಬಲೆಂಕಾಗೆ ಆಘಾತ:

2ನೇ ಸೆಮಿಫೈನಲ್‌ ಪಂದ್ಯದ ಮೊದಲ ಸೆಟ್‌ನಲ್ಲಿ 5-7 ಅಂತರದಿಂದ ಸೋಲುಂಡರು ಪುಟಿದೆದ್ದ 8ನೇ ಶ್ರೇಯಾಂಕಿತ ಆಟಗಾರ್ತಿ ಪ್ಲಿಸ್ಕೋವಾ, ವಿಶ್ವ ನಂ.2 ಅಯಾನ ಸಬಲೆಂಕಾಗೆ ಆಘಾತ ನೀಡಿದರು. 2 ಹಾಗೂ 3ನೇ ಸೆಟ್‌ ಅನ್ನು ಕ್ರಮವಾಗಿ 6-4, 6-4ರಿಂದ ಗೆಲ್ಲುವ ಮೂಲಕ ಅಂತಿಮ ಸುತ್ತಿಗೇರಿದರು.
 

click me!