ಒಲಿಂಪಿಕ್ಸ್‌ನಿಂದ ಸಮಾಜ ಪರಿವರ್ತನೆಯಾಗಲಿದೆ; ನೊಬೆಲ್ ಪ್ರಶಸ್ತಿ ಪುರಸ್ಕೃತ ಪ್ರೊ.ಯೂನಸ್!

By Suvarna News  |  First Published Jul 7, 2021, 3:19 PM IST
  • ಕ್ರೀಡೆ ಜಗತನ್ನು ಹೇಗೆ ಬದಾಯಿಸಬಹುದು? ಸಂವಾದ ಕಾರ್ಯಕ್ರಮ
  • ಅಭಿನವ್ ಬಿಂದ್ರಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಪ್ರೊ.ಯೂನಸ್ ಮಾತು
  • ನೊಬೆಲ್ ಪ್ರಶಸ್ತಿ ಪುರಸ್ಕೃತ ಪ್ರೋ.ಮೊಹಮ್ಮದ್ ಯೂನಸ್ ಸಂವಾದ

ನವದೆಹಲಿ(ಜು.07): ಕೊರೋನಾ ಸಾಂಕ್ರಾಮಿಕ ಸಂಕಷ್ಟ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದರ ನಡುವೆ ಆತ್ಮವಿಶ್ವಾಸ ಕಳೆದುಕೊಂಡಿರುವ, ಸೊರಗಿರುವ ಬದುಕಿನಲ್ಲಿ ಹೊಸ ಚೈತನ್ಯ ಮೂಡಿಸಲು ಹಾಗೂ ನಮ್ಮ ಪರಿಸರ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರಲು ಕ್ರೀಡೆ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಪ್ರೋ ಮೊಹಮ್ಮದ್ ಯೂನಸ್ ಹೇಳಿದ್ದಾರೆ.

ಮಾಜಿ ಶೂಟರ್‌ ಬಿಂದ್ರಾಗೆ ಬ್ಲ್ಯೂ ಕ್ರಾಸ್‌ ಗೌರವ.

Tap to resize

Latest Videos

ಕ್ರೀಡೆ ಜಗತನ್ನು ಹೇಗೆ ಬದಾಯಿಸಬಹುದು ಕುರಿತ ಕಾರ್ಯಕ್ರಮದಲ್ಲಿ ಪ್ರೋ ಮೊಹಮ್ಮದ್ ಯೂನಸ್ ತಮ್ಮ ವಿಚಾರಧಾರೆ ತೆರೆದಿಟ್ಟಿದ್ದಾರೆ. ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಅವರ ಫೌಂಡೇಶನ್ ನಡೆಸಿದ ಈ ಸಂವಾದ ಕಾರ್ಯಕ್ರಮದಲ್ಲಿ ಪ್ರೋ. ಯೂನಸ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ ಈ ಮೂಲಕ ಕ್ರೀಡೆ ಜೀವನದ ಮಾತ್ರವಲ್ಲ ಒಂದು ದೇಶದ ಹಾಗೂ ಜಗತ್ತಿನ ಅಭಿವೃದ್ಧಿ ಹಾಗೂ ವಿಕಸನದಲ್ಲಿ ಯಾವ ಪಾತ್ರ ನಿರ್ವಹಿಸಲಿದೆ ಅನ್ನೋದನ್ನು ವಿವರಿಸಿದ್ದಾರೆ.

ಟೊಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದು ಇತಿಹಾಸ ನಿರ್ಮಿಸಿದ ವಿ ರೇವತಿ

ಶಿಸ್ತು, ನಾಯಕತ್ವ ಮತ್ತು ಕಠಿಣ ಪರಿಶ್ರಮ. ಈ ಮೌಲ್ಯಗಳು ಕ್ರೀಡೆಯಿಂದ ನಾವು ಕರಗತ ಮಾಡುತ್ತೇವೆ. ಇದರ ಜೊತೆಗೆ ಜೀವನ ಕೌಶಲ್ಯಗಳು,  ಉದ್ಯೋಗ, ಜೀವನೋಪಾಯ ಮತ್ತು ಜೀವನದ ಗುಣಮಟ್ಟ ಹೆಚ್ಚಿಸಲು ಕ್ರೀಡೆ ನೆರವಾಗುತ್ತಿದೆ. ಈ ನಿಟ್ಟನಲ್ಲಿ ಕ್ರೀಡೆಯಿಂದ ದೇಶದ ಹಾಗೂ ಜಗತ್ತಿನ ಚಿತ್ರಣ ಬದಲಾಗಲಿದೆ ಎಂದು ಪ್ರೋ.ಯೂನಸ್ ಹೇಳಿದ್ದಾರೆ.

ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಎಲ್ಲಾ ದೇಶಗಳು ತಯಾರಿ ನಡೆಸುತ್ತಿದೆ. ಈಗಾಗಲೇ ಅರ್ಹತೆ ಪಡೆದ ಕ್ರೀಡಾಪಟುಗಳು ಪದಕ ಗೆದ್ದ ದೇಶಕ್ಕೆ ಕೀರ್ತಿ ತರಲು ತುದಿಗಾಲಲ್ಲಿ ನಿಂತಿದ್ದಾರೆ. ಈ ವೇಳೆ ಒಂದು ಒಲಿಂಪಿಕ್ಸ್ ಸಮಾಜವನ್ನು ಪರಿವರ್ತಿಸುತ್ತದೆ ಎಂದು ಪ್ರೋ.ಯೂನಸ್ ಹೇಳಿದ್ದಾರೆ. ಇದಕ್ಕೆ ವಿವರಣೆಯನ್ನೂ ಯೂನಸ್ ನೀಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌: ಮೇರಿ ಕೋಮ್, ಮನ್‌ಪ್ರೀತ್ ಧ್ವಜಧಾರಿಗಳು.

ಕ್ರೀಡಾಪಟುಗಳಿಗೆ ನಿರ್ಮಿಸುವ ವಿಲೇಜ್, ಆ ಪ್ರದೇಶದ ಬಡ ಜನರಿಗೆ ಶಾಲೆ ಹಾಗೂ ಮೂಲ ಸೌಕರ್ಯ ನಿರ್ಮಾಣ ಸೇರಿದಂತೆ ಒಲಿಂಪಿಕ್ಸ್‌ನಿಂದ ಒಂದು ಸಮಾಜ ಪರಿವರ್ತನೆ ಆಗಲಿದೆ. ಒಲಿಂಪಿಕ್ಸ್ ಗ್ರಾಮದಿಂದ ಈ ಪ್ರದೇಶದ ಮೂಲ ಸೌಕರ್ಯ ಹೆಚ್ಚಾಗಲಿದೆ. ಇದರೊಂದಿಗೆ ದೇಶ ಹಾಗೂ ಜಗತ್ತು ಬದಲಾಗಲಿದೆ ಎಂದು ಯೂನಸ್ ಹೇಳಿದ್ದಾರೆ.

ಕ್ರೀಡಾ ವೃತ್ತಿಜೀವನದ ಬಳಿಕ ಕ್ರೀಡಾ ವ್ಯಕ್ತಿಗಳನ್ನು ಬೆಂಬಲಿಸುವಂತೆ ಸೂಚಿಸಿದಂತೆ, ಅವರನ್ನು ಉದ್ಯೋಗಾಕಾಂಕ್ಷಿಗಳಿಗಿಂತ ಉದ್ಯಮಿಗಳನ್ನಾಗಿ ಮಾಡಲು ಬೆಂಬಲಿಸಬೇಕು. ಇದರಿಂದ ಸಮಾಜದ ಒಂದು ವರ್ಗದಲ್ಲಿ ಆರ್ಥಿಕತೆ ಚಲಾವಣೆ ಹೆಚ್ಚಾಗಲಿದೆ ಎಂದು ಯೂನಸ್ ಹೇಳಿದ್ದಾರೆ.

click me!