ಬೆಳ್ಳಿ ಪದಕಕ್ಕೆ ಮುಂದುವರೆದ ವಿನೇಶ್ ಫೋಗಟ್ ಹೋರಾಟ; ಮಹತ್ವದ ನಿರ್ಧಾರ ಪ್ರಕಟಿಸಿದ ಕ್ರೀಡಾ ನ್ಯಾಯ ಮಂಡಳಿ

By Naveen Kodase  |  First Published Aug 9, 2024, 6:40 PM IST

ತಮ್ಮನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಕ್ರೀಡಾ ನ್ಯಾಯ ಮಂಡಳಿ ಮೆಟ್ಟಿಲೇರಿದ ವಿನೇಶ್ ಫೋಗಟ್ ಅವರ ಕುರಿತಂತೆ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ


ಭಾರತದ ತಾರಾ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರ ತೂಕ ಅನರ್ಹ ಪ್ರಕರಣದ ಕುರಿತಂತೆ ಜಾಗತಿಕ ಕ್ರೀಡಾ ಮೇಲ್ಮನವಿ ನ್ಯಾಯಾಲಯ ಮಹತ್ವದ ಪ್ರಕಟಣೆ ಹೊರಡಿಸಿದೆ. ವಿನೇಶ್ ಫೋಗಟ್ ಮಹಿಳೆಯ 50 ಕೆ.ಜಿ. ಪ್ರಿಸ್ಟೈಲ್ ಕುಸ್ತಿ ಪಂದ್ಯದಲ್ಲಿ ಫೈನಲ್ ಪ್ರವೇಶಿಸಿದ್ದರು. ಆದರೆ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ತೂಕ ಪರೀಕ್ಷೆ ವೇಳೆ ವಿನೇಶ್ ಫೋಗಟ್ ಅವರ ತೂಕ ಕೇವಲ 100 ಗ್ರಾಮ್ ಹೆಚ್ಚಳವಾಗಿರುವುದು ಕಂಡು ಬಂದಿತ್ತು. ಹೀಗಾಗಿ ಆಯೋಜಕರು ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ್ದರು. 

ಇದರ ಬೆನ್ನಲ್ಲೇ ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ವಿನೇಶ್‌ ಫೋಗಟ್‌ ಜಾಗತಿಕ ಕ್ರೀಡಾ ಮೇಲ್ಮನವಿ ನ್ಯಾಯಾಲಯ(ಸಿಎಎಸ್‌)ದ ಮೆಟ್ಟಿಲೇರಿದ್ದರು. ಈ ಬಗ್ಗೆ ಅವರು ಬುಧವಾರ ಸಂಜೆ ಸಿಎಎಸ್‌ಗೆ ಮೇಲ್‌ ಸಂದೇಶ ಕಳುಹಿಸಿದ್ದರು. ‘50 ಕೆ.ಜಿ. ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದು, ಬೆಳ್ಳಿ ಪದಕವನ್ನು ತಮಗೆ ನೀಡಬೇಕು’ ಎಂದು ಮನವಿ ಮಾಡಿದ್ದರು. ವಿನೇಶ್ ಫೋಗಟ್ ಅವರ ಮನವಿಯನ್ನು ಸ್ವೀಕರಿಸಿದ್ದ  ಸಿಎಎಸ್‌ ಈ ಕುರಿತಂತೆ ವಾದ-ಪ್ರತಿವಾದವನ್ನು ಆಲಿಸಿ ಇಂದು ತೀರ್ಪು ನೀಡುವುದಾಗಿ ಘೋಷಿಸಿತ್ತು. ಈ ಕುರಿತಂತೆ ವಾದ-ಪ್ರತಿವಾದ ಆಲಿಸಿದ ಜಾಗತಿಕ ಕ್ರೀಡಾ ಮೇಲ್ಮನವಿ ನ್ಯಾಯಾಲಯ, ಪ್ಯಾರಿಸ್ ಒಲಿಂಪಿಕ್ಸ್ ಮುಗಿಯುವುದರೊಳಗಾಗಿ ಅಂತಿಮ ತೀರ್ಮಾನ ಪ್ರಕಟಿಸುವುದಾಗಿ ತಿಳಿಸಿದೆ.

Tap to resize

Latest Videos

undefined

ಭಾರತದ ನೀರಜ್ ಚೋಪ್ರಾನಿಂದ ಚಿನ್ನದ ಪದಕ ಕಿತ್ತುಕೊಂಡ ನದೀಂ 'ಪಂಜಾಬ್' ಹುಡುಗ..! ಈತ ಬೆಂಕಿಯಲ್ಲಿ ಅರಳಿದ ಹೂ

ವಿನೇಶ್ ಫೋಗಟ್ ಅವರು ತಮ್ಮನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಆಗಸ್ಟ್ 07ರಂದು ಕ್ರೀಡಾ ನ್ಯಾಯ ಮಂಡಳಿ ಬಳಿ ಮನವಿ ಸಲ್ಲಿಸಿದ್ದರು. ಇದೀಗ ಆಗಸ್ಟ್ 11ರಂದು ಪ್ಯಾರಿಸ್ ಒಲಿಂಪಿಕ್ಸ್‌ ಮುಕ್ತಾಯವಾಗಲಿದ್ದು, ಒಲಿಂಪಿಕ್ ಕೂಟ ಮುಗಿಯುವ ಮುನ್ನವೇ ಫೋಗಟ್‌ಗೆ ಜಂಟಿ ಬೆಳ್ಳಿ ಪದಕ ನೀಡುವ ಬಗ್ಗೆ ತೀರ್ಮಾನ ಪ್ರಕಟಿಸುವುದಾಗಿ ತಿಳಿಸಿದೆ.

ಒಲಿಂಪಿಕ್ಸ್‌ ಪದಕ ಸಿಗದ ನೋವಿನಲ್ಲೇ ಕುಸ್ತಿಗೆ ವಿದಾಯ ಘೋಷಿಸಿದ ವಿನೇಶ್‌ ಫೋಗಟ್‌!

ಪ್ಯಾರಿಸ್‌: ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಪದಕ ಗೆಲ್ಲುವ ಕಾತರದಲ್ಲಿದ್ದ ಭಾರತದ ತಾರಾ ಕುಸ್ತಿಪಟು ವಿನೇಶ್ ಫೋಗಟ್‌, ತಮ್ಮ ಕನಸು ಭಗ್ನಗೊಂಡ ಬೇಸರದಲ್ಲಿ ಕುಸ್ತಿ ವೃತ್ತಿ ಬದುಕಿಗೆ ನಿವೃತ್ತಿ ಪ್ರಕಟಿಸಿದ್ದಾರೆ. ಮಹಿಳೆಯರ 50 ಕೆ.ಜಿ. ವಿಭಾಗದ ಫೈನಲ್‌ಗೂ ಮುನ್ನ ತಮ್ಮ ತೂಕ ಜಾಸ್ತಿಯಿದ್ದ ಕಾರಣ ವಿನೇಶ್‌ ಒಲಿಂಪಿಕ್ಸ್‌ನಿಂದಲೇ ಅನರ್ಹಗೊಂಡಿದ್ದರು. ಗುರುವಾರ ಸಾಮಾಜಿಕ ತಾಣಗಳಲ್ಲಿ 29 ವರ್ಷದ ವಿನೇಶ್‌, ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ.

Big Breaking: ವಿನೇಶ್ ಫೋಗಾಟ್ ಮನವಿ ಅಂಗೀಕರಿಸಿದ ಕ್ರೀಡಾ ನ್ಯಾಯ ಮಂಡಳಿ..! ಸಿಹಿ ಸುದ್ದಿಗೆ ಕ್ಷಣಗಣನೆ

2 ಬಾರಿ ವಿಶ್ವಚಾಂಪಿಯನ್‌ಶಿಪ್‌ ಕಂಚು, 2018ರ ಏಷ್ಯನ್‌ ಗೇಮ್ಸ್‌ ಹಾಗೂ 3 ಬಾರಿ ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಆಗಿರುವ ವಿನೇಶ್‌ ಈ ಬಾರಿ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಘಟಾನುಘಟಿಗಳನ್ನೇ ಮಣಿಸಿ ಫೈನಲ್‌ ಪ್ರವೇಶಿಸಿದ್ದ ಅವರು, ಪಂದ್ಯಕ್ಕೂ ಮುನ್ನ ತಮ್ಮ ದೇಹ ತೂಕ ಹೆಚ್ಚಾದ ಕಾರಣಕ್ಕೆ ಅನರ್ಹಗೊಂಡಿದ್ದರು.

click me!