ಭಾರತದ ನೀರಜ್ ಚೋಪ್ರಾನಿಂದ ಚಿನ್ನದ ಪದಕ ಕಿತ್ತುಕೊಂಡ ನದೀಂ 'ಪಂಜಾಬ್' ಹುಡುಗ..! ಈತ ಬೆಂಕಿಯಲ್ಲಿ ಅರಳಿದ ಹೂ

ಕಳೆದ ಟೋಕಿಯೋ ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲೂ ನೀರಜ್ ಚೋಪ್ರಾ ಹಾಗೂ ಅರ್ಷದ್ ನದೀಂ ಫೈನಲ್ ಪ್ರವೇಶಿಸಿದ್ದರು. ಆದರೆ ಟೋಕಿಯೋದಲ್ಲಿ ನೀರಜ್ ಚೋಪ್ರಾ ಚಿನ್ನ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರೆ, ಅರ್ಷದ್ ನದೀಂ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

Arshad Nadeem Son Of Construction Worker Who Struggled To Buy Javeli Is Now Pakistan Olympic Hero kvn

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್‌ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಪಾಕಿಸ್ತಾನದ ಅರ್ಷದ್ ನದೀಂ ಒಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದರೆ, ಭಾರತದ ನೀರಜ್ ಚೋಪ್ರಾ ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಕಷ್ಟು ಕುತೂಹಲ ಕೆರಳಿಸಿದ್ದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತ ಹಾಗೂ ಪಾಕಿಸ್ತಾನದ ಅಥ್ಲೀಟ್‌ಗಳ ನಡುವೆ ಪೈಪೋಟಿ ಏರ್ಪಟ್ಟಿತು. ಆದರೆ ಕೊನೆಗೂ ಅರ್ಷದ್ ಚಿನ್ನ ಗೆದ್ದರೆ, ನೀರಜ್ ರಜತ ಪದಕಕ್ಕೆ ಕೊರಳೊಡ್ಡಿದರು.

ಹೌದು, ಕಳೆದ ಟೋಕಿಯೋ ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲೂ ನೀರಜ್ ಚೋಪ್ರಾ ಹಾಗೂ ಅರ್ಷದ್ ನದೀಂ ಫೈನಲ್ ಪ್ರವೇಶಿಸಿದ್ದರು. ಆದರೆ ಟೋಕಿಯೋದಲ್ಲಿ ನೀರಜ್ ಚೋಪ್ರಾ ಚಿನ್ನ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರೆ, ಅರ್ಷದ್ ನದೀಂ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಅರ್ಷದ್ ನದೀಂ ಬರೋಬ್ಬರಿ 92.97 ಮೀಟರ್ ದೂರ ಜಾವೆಲಿನ್ ಎಸೆದರೆ, ನೀರಜ್ ಚೋಪ್ರಾ 89.45 ಮೀಟರ್ ದೂರ ಜಾವೆಲಿನ್ ಎಸೆಯುವಲ್ಲಿ ಯಶಸ್ವಿಯಾದರು.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಹುಡುಗನಿಗೆ ಬೆಳ್ಳಿ ಕಿರೀಟ, ಭಾರತಕ್ಕೆ ಒಲಿದ 5ನೇ ಪದಕ..!

ಅಂದಹಾಗೆ ದೇಶದ ಹೆಮ್ಮೆಯ ಅಥ್ಲೀಟ್ ನೀರಜ್ ಚೋಪ್ರಾ ನಮ್ಮ ಹರ್ಯಾಣದ ಪಾಣಿಪಠ್ ಮೂಲದವರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ಆರ್ಷದ್ ನದೀಂ ಕೂಡಾ ಪಂಜಾಬಿ ಕುಟುಂಬದ ಹಿನ್ನೆಲೆಯವರು ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. ಹೌದು, ಅರ್ಷದ ನದೀಂ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಖಾನೆವಾಲ್ ಎನ್ನುವ ಸಣ್ಣ ಹಳ್ಳಿಯಲ್ಲಿ ಜನಿಸಿದರು. ತೀರಾ ಕಡುಬಡತನದ ಹಿನ್ನೆಲೆಯನ್ನು ಹೊಂದಿರುವ ಅರ್ಷದ್ ನದೀಂ, ಇದೀಗ ಪಾಕಿಸ್ತಾನದ ನ್ಯಾಷನಲ್ ಹೀರೋ ಎನಿಸಿದ್ದಾರೆ.

ಅರ್ಷದ್ ಬೆಂಕಿಯಲ್ಲಿ ಅರಳಿದ ಹೂ: 

ಅರ್ಷದ್ ನದೀಂ ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ನದೀಂ ಆರ್ಥಿಕ ಹಾಗೂ ಕೌಟುಂಬಿಕ ಹಿನ್ನೆಲೆಯನ್ನು ಗಮನಿಸಿದರೇ ನಿಜಕ್ಕೂ ನಿಮಗೂ ಅಚ್ಚರಿಯಾಗಬಹುದು. ಅರ್ಷದ್ ನದೀಂ ಅವರ ತಂದ ಓರ್ವ ಸಾಮಾನ್ಯ ಮೇಸ್ತ್ರಿಯಾಗಿದ್ದರು. ಜಾವೆಲಿನ್ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ನದೀಂ, ತಮ್ಮ ಜಮೀನಿನಲ್ಲಿಯೇ ಜಾವೆಲಿನ್ ಅಭ್ಯಾಸ ಆರಂಭಿಸಿದರು.

ಅರ್ಷದ್ ನದೀಂ ಅಂತಾರಾಷ್ಟ್ರೀಯ ಕೂಟಗಳಲ್ಲಿ ಪಾಲ್ಗೊಳ್ಳಲು ಊರಿನ ಗ್ರಾಮಸ್ಥರು ದೇಣಿಗೆ ಸಂಗ್ರಹಿಸಿ ಹಣಕಾಸಿನ ವ್ಯವಸ್ಥೆ ಮಾಡಿಕೊಡುತ್ತಿದ್ದರು. ಇನ್ನು ಕಳೆದ ಟೋಕಿಯೋ ಒಲಿಂಪಿಕ್ಸ್‌ಗೆ ಆರ್ಷದ್ ನದೀಂ ಹೊರಟು ನಿಂತಾಗ ಪಾಕಿಸ್ತಾನ ಸರ್ಕಾರ ಒಂದೇ ಒಂದು ರುಪಾಯಿ ಬಿಡಿಗಾಸಿನ ನೆರವನ್ನೂ ನೀಡಿರಲಿಲ್ಲ. ತೀರಾ ಇತ್ತೀಚಿಗಿನವರೆಗೂ ನದೀಂಗೆ ಯಾವುದೇ ದೊಡ್ಡ ಮೊತ್ತದ ಸ್ಪಾನರ್‌ಶಿಪ್ ಕೂಡಾ ಸಿಕ್ಕಿರಲಿಲ್ಲ. ಆರ್ಷದ್ ನದೀಂ ಪರಿಸ್ಥಿತಿ ಹೇಗಿತ್ತು ಎಂದರೆ, ತಮ್ಮಲ್ಲಿರುವ ಹಳೆಯ ಜಾವೆಲಿನ್ ಬದಲು ಹೊಸ ಜಾವೆಲಿನ್ ಖರೀದಿಸಲು ನೆರವಾಗಿ ಎಂದು ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡಿಕೊಂಡಿದ್ದರು.  

ದಿಗ್ಗಜ ಗೋಲ್‌ ಕೀಪರ್ ಶ್ರೀಜೇಶ್ ನಿವೃತ್ತಿಯಾಗುತ್ತಿದ್ದಂತೆಯೇ ಮಹತ್ವದ ಜವಾಬ್ದಾರಿ ಕೊಟ್ಟ ಹಾಕಿ ಇಂಡಿಯಾ..! 

ಇದೀಗ ಅರ್ಷದ್ ಖಾನ್, ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಬರೋಬ್ಬರಿ 92.97 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಒಲಿಂಪಿಕ್ಸ್ ದಾಖಲೆಯಿಂದಿಗೆ ಪ್ಯಾರಿಸ್‌ನಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅಂದಹಾಗೆ ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ಗೆ ಪಾಕಿಸ್ತಾನ ಕೇವಲ 7 ಅಥ್ಲೀಟ್‌ಗಳನ್ನು ಕಳಿಸಿಕೊಟ್ಟಿತ್ತು. ಈ ಪೈಕಿ ನದೀಂ ಚಿನ್ನದ ಪದಕ ಗಳಿಸಿದ ಪಾಕಿಸ್ತಾನದ ಏಕೈಕ ಅಥ್ಲೀಟ್ ಎನಿಸಿದ್ದಾರೆ.
 

Latest Videos
Follow Us:
Download App:
  • android
  • ios