
ಅಮೆರಿಕ(ಜೂ.10): ಕೊರೋನಾ ವೈರಸ್‌ಗೆವಿಶ್ವವೇ ತತ್ತರಿಸಿದೆ. ಜನಜೀವನ ದುಸ್ತರವಾಗಿದೆ. ಎಲ್ಲಾ ಕ್ಷೇತ್ರದಲ್ಲಿ ಉದ್ಯೋಗ ಕಡಿತ ಸಮಸ್ಯೆ ತಲೆದೋರುತ್ತಿದೆ. ಇದೀಗ ಅಮೆರಿಕ ಟೆನಿಸ್ ಅಸೋಸಿಯೇಶನ್ ಉದ್ಯೋಗ ಕಡಿತ ಮಾಡಿದೆ. ಈ ಮೂಲಕ ಕೊರೋನಾ ವೈರಸ್‌ನಿಂದ ಉದ್ಯೋಗ ಕಡಿತ ಮಾಡಿದ ಮೊದಲ ಕ್ರೀಡಾ ಸಂಸ್ಥೆ ಅನ್ನೋ ಅಪಖ್ಯಾತಿಗೆ ಗುರಿಯಾಗಿದೆ.
2021ರ ಆಸ್ಪ್ರೇಲಿಯನ್ ಓಪನ್ ಟೆನಿಸ್ ರದ್ದು?.
ಅಮೆರಿಕ ಟೆನಿಸ್ ಆಸೋಸಿಯೇಶನ್‌ನಲ್ಲಿ 110 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗಿದೆ. ಕೊರೋನಾ ವೈರಸ್ ಕಾರಣ ಟೂರ್ನಿ ನಡೆಸಲು ಸಾಧ್ಯವಾಗಿಲ್ಲ. ಅನಿವಾರ್ಯವಾಗಿ ಉದ್ಯೋಗ ಕಡಿತ ಮಾಡಬೇಕಾಗಿದೆ. 110 ಮಂದಿ ಉದ್ಯೋಗ ಕಡಿತ ಮಾಡುತ್ತಿದ್ದೇವೆ ಎಂದು ಅಮೆರಿಕ ಟೆನಿಸ್ ಸಂಸ್ಥೆ ಮುಖ್ಯಕಾರ್ದರ್ಶಿ ಮೈಕೆಲ್ ಡೌಸ್ ಹೇಳಿದ್ದಾರೆ.
ಕ್ರಿಕೆಟ್ ಕ್ರಾಂತಿ; ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ಗೆ ಬಂದಳಿದ ವೆಸ್ಟ್ ಇಂಡೀಸ್!
2018ರಲ್ಲಿ ಅಮೆರಿಕ ಟೆನಿಸ್ ಸಂಸ್ಥೆಗೆ ಹೊಸ ರೂಪು ರೇಶೆ ನೀಡಲು ಪ್ಲಾನ್ ರೆಡಿಯಾಗಿತ್ತು. ಆದರೆ ಉದ್ಯೋಗ ಕಡಿತದ ಆಲೋಚನೆ ಸಂಸ್ಥೆಗೆ ಇರಲಿಲ್ಲ. ಆದರೆ ಕೊರೋನಾ ವೈರಸ್ ಕಾರಣ ಈಗಾಗಲೇ ಅತೀವ ನಷ್ಟ ಅನುಭವಿಸಿದೆ. ನಷ್ಟ ಸರಿದೂಗಿಲು ಮುಂದಿನ 2 ವರ್ಷಗಳಲ್ಲಿ ಅಸಾಧ್ಯವಾಗಿದೆ. ಕಾರಣ ಕೊರೋನಾ ವೈರಸ್ ಸಂಪೂರ್ಣ ನಿಯಂತ್ರಣಕ್ಕೆ ಬಂದು, ಮತ್ತ ಅಭಿಮಾನಿಗಳು ಕ್ರೀಡಾಂಗಣದತ್ತ ಮುಖ ಮಾಡಲು ಸುದೀರ್ಘ ವರ್ಷಗಳೇ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಮೈಕಲ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.