ಜನಾಂಗೀಯ ಸಮಾನತೆಗೆ ಪಣತೊಟ್ಟ ಬಾಸ್ಕೆಟ್ ಬಾಲ್ ಪಟು ಜೋರ್ಡನ್; $100 ಮಿಲಿಯನ್ ಹಣ ದೇಣಿಗೆ!

By Suvarna News  |  First Published Jun 6, 2020, 3:52 PM IST

ಕೊರೋನಾ ವೈರಸ್ ಭೀತಿ ನಡುವೆ  ಅಮೆರಿಕದಲ್ಲಿ ಲಕ್ಷಕ್ಕೂ ಹೆಚ್ಚು ಜನ  ವರ್ಣ ಭೇದ ವಿರುದ್ಧ ಹೋರಾಟ, ಪ್ರತಿಭಟನೆ ನಡೆಸುತ್ತಿದ್ದಾರೆ. ಅಮೆರಿಕ ಪೊಲೀಸರು ಅಮಾನವೀಯವಾಗಿ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಇದರ ಬೆನ್ನಲ್ಲೇ ಅಮೆರಿಕ ಖ್ಯಾತ ಬಾಸ್ಕೆಟ್ ಬಾಲ್ ಪಟು, ಜನಾಂಗೀಯ ಸಮಾನತೆ ಸ್ಥಾಪಿಸಲು 100 ಮಿಲಿಯನ್ ಅಮೆರಿಕನ್ ಡಾಲರ್ ಹಣ ದೇಣಿಗೆ ನೀಡಿದ್ದಾರೆ.


ಅಮೆರಿಕ(ಜೂ.06): ಅಮೆರಿಕ ಅದೆಷ್ಟೇ ಮುಂದುವರಿದ ದೇಶವಾದರೂ ಇಂದೀಗೂ ವರ್ಣ ಭೇದಗಳು ಸದ್ದಿಲ್ಲದೆ ನಡೆಯುತ್ತಿದೆ. ಶತ ಶತಮಾನಗಳ ಕಪ್ಪು ಹಾಗೂ ಬಳಿಯರ ನಡೆವಿನ ಸಂಘರ್ಷ ಅಮೆರಿಕದಲ್ಲಿ ನಿಂತಿಲ್ಲ. ಪ್ರತಿ ದಿನ ಅಮೆರಿಕದಲ್ಲಿ ವರ್ಣ ಭೇದ ಕುರಿತ ಘಟನೆಗಳು ನಡೆಯುತ್ತಲೇ ಇದೆ. ಆದರೆ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬರುವ ಮೊದಲೇ ಕಣ್ಣರೆಯಾಗಿರುತ್ತದೆ. ಆದರೆ ಇತ್ತೀಚೆಗೆ ಅಮೆರಿಕ ಪೊಲೀಸ್ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ದ್ ಹತ್ಯೆ ವಿಶ್ವದಲ್ಲೇ ಸದ್ದು ಮಾಡಿತ್ತು.

ವಾಷ್ಟಿಂಗ್ಟನ್ ಗಾಂಧಿ ಪ್ರತಿಮೆ ವಿಕೃತಗೊಳಿಸಿದ ದುಷ್ಕರ್ಮಿಗಳು

Tap to resize

Latest Videos

ಅಮೆರಿಕನ್ನು ಸರ್ಕಾರ ಹಾಗೂ ಪೊಲೀಸರ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ. ಕೊರೋನಾ ವೈರಸ್ ಭೀತಿ ಲೆಕ್ಕಿಸದೇ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.  ವರ್ಣ ಭೇದ ಅಂತ್ಯಗೊಳಿಸಲು ಆಗ್ರಹ ಕೇಳಿ ಬರುತ್ತಿದೆ. ಇದೀಗ ಅಮೆರಿಕದ ಖ್ಯಾತ ಫುಟ್ಬಾಲ್ ಪಟು ಹಾಗೂ ವಿಶ್ವದ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮೈಕಲ್ ಜೋರ್ಡನ್ ವರ್ಣೀಯ ಭೇದ ಹೊಡೆದೋಡಿಸಿ, ಅಮೆರಿಕದಲ್ಲಿ ಜನಾಂಗೀಯ ಸಮಾನತೆ ಸ್ಥಾಪಿಸಲು ಮುಂದಾಗಿದ್ದಾರೆ.

ಪ್ರತಿಭಟನೆಗೆ ಬೆಚ್ಚಿ ಬಂಕರಲ್ಲಿ ಅಡಗಿದ ಡೊನಾಲ್ಡ್‌ ಟ್ರಂಪ್‌!

ಅಮೆರಿಕದಲ್ಲಿ ಜನಾಂಗೀಯ ಸಮಾನತೆಗೆ ಬರೋಬ್ಬರಿ 100 ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ದೇಣಿಕೆಯಾಗಿ ನೀಡಿದ್ದಾರೆ. ಮುಂದಿನ 10 ವರ್ಷಗಳಲ್ಲಿ ಅಮೆರಿಕ  ಜನಾಂಗೀಯ ಮುಕ್ತ ರಾಷ್ಟ್ರವಾಗಿರಬೇಕು ಅನ್ನೋ ಮಹತ್ವಾಕಾಂಕ್ಷೆಯನ್ನು ಮೈಕಲ್ ಜೋರ್ಡನ್ ಹೊಂದಿದ್ದಾರೆ.

ಕಪ್ಪು ವರ್ಣೀಯ ಜನರ ಬದುಕಿಗಾಗಿ ಹೋರಾಡುವ ಪರಸ್ಥಿತಿ ಬಂದಿದೆ. ಹಲವು ದಶಕಗಳಿಂದ ನಾವು ನೋಡುತ್ತಿದ್ದೇವೆ. ಅನುಭವಿಸುತ್ತಿದ್ದೇವೆ. ಆದರೆ ಇದ್ಯಾವುದು ಕೊನೆಯಾಗಿಲ್ಲ. ಜಾರ್ಜ್ ಫ್ಲಾಯ್ಡ್ ಹತ್ಯ ನನ್ನಲ್ಲಿ ಅತೀವ ನೋವು ಹಾಗೂ ಆಕ್ರೋಶ ತಂದಿದೆ. ಈ ವರ್ಣೀಯ ಹಾಗೂ ಜನಾಂಗೀಯ ನಿಂದನೆ ಅಂತ್ಯಗೊಳಿಸಲು ಪಣತೊಟ್ಟಿದ್ದೇನೆ. ಇದಕ್ಕಾಗಿ ನಾನು ಶಕ್ತಿ ಮೀರಿ ಸಹಾಯ ಮಾಡಲಿದ್ದೇನೆ ಎಂದು ಜೋರ್ಡನ್ ಹೇಳಿದ್ದಾರೆ. 

ಮೈಕಲ್ ಜೋರ್ಡನ್ ಅಮೆರಿಕದ ಖ್ಯಾತ ಬಾಸ್ಕೆಟ್ ಬಾಲ್ ಪ್ಲೇಯರ್. 6 ಬಾರಿ NBA ಬಾಸ್ಕೆಟ್ ಬಾಲ್ ಚಾಂಪಿಯನ್ ಆಗಿದ್ದಾರೆ. ಜನಾಂಗೀಯ ನಿಂದನೆ, ವರ್ಣ ಭೇದ ಕುರಿತು ಸ್ಪಷ್ಟ ಅರಿವಿರುವ ಮೈಕಲ್ ಜೋರ್ಡನ್ ಇದೀಗ ಸಮಾನತೆ ಹಾಗೂ ಶಾಂತಿಗಾಗಿ ಪಣತೊಟ್ಟಿದ್ದಾರೆ.

click me!