ಯುಎಸ್‌ ಓಪನ್‌: ಪ್ರೇಕ್ಷಕರಿಗೆ ಮಾಸ್ಕ್‌, ಲಸಿಕೆ ದಾಖಲೆ ಕಡ್ಡಾಯವಲ್ಲ

By Suvarna News  |  First Published Aug 27, 2021, 10:48 AM IST

* ಯುಎಸ್‌ ಓಪನ್ ಟೆನಿಸ್ ಟೂರ್ನಿ ಆಗಸ್ಟ್ 30ರಿಂದ ಆರಂಭ

* 100% ಸಾಮರ್ಥ್ಯದೊಂದಿಗೆ ಪ್ರೇಕ್ಷಕರಿಗೆ ಅನುಮತಿ ನೀಡಲಾಗಿದೆ

* ಪ್ರೇಕ್ಷಕರು ಕೋವಿಡ್‌ ಲಸಿಕೆ ಹಾಕಿಸಿಕೊಂಡ ಪ್ರಮಾಣ ಪತ್ರವನ್ನೂ ತೋರಿಸುವ ಅಗತ್ಯವಿಲ್ಲ


ನ್ಯೂಯಾರ್ಕ್(ಆ.27): ಯುಎಸ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೂರ್ನಿಯಲ್ಲಿ ಪಾಲ್ಗೊಳ್ಳುವ ಪ್ರೇಕ್ಷಕರು ಮಾಸ್ಕ್‌ ಧರಿಸುವ ಅಗತ್ಯವಿಲ್ಲ ಎಂದು ಟೂರ್ನಿಯ ಆಯೋಜಕರು ತಿಳಿಸಿದ್ದಾರೆ.

ಟೂರ್ನಿಯ ಪ್ರಧಾನ ಸುತ್ತು ನ್ಯೂಯಾರ್ಕ್‌ನಲ್ಲಿ  ಆಗಸ್ಟ್ 30ಕ್ಕೆ ಆರಂಭವಾಗಲಿದ್ದು, 100% ಸಾಮರ್ಥ್ಯದೊಂದಿಗೆ ಪ್ರೇಕ್ಷಕರಿಗೆ ಅನುಮತಿ ನೀಡಲಾಗಿದೆ. ಪ್ರೇಕ್ಷಕರು ಕೋವಿಡ್‌ ಲಸಿಕೆ ಹಾಕಿಸಿಕೊಂಡ ಪ್ರಮಾಣ ಪತ್ರವನ್ನೂ ತೋರಿಸುವ ಅಗತ್ಯವೂ ಇಲ್ಲ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ.

The U.S. Open starts next week in NYC.

Here are their covid protocols for the 10s of 1000s who will be in attendance, including for indoor spaces:
* no vax required
* no negative test required
* no mask required

This is extraordinarily reckless. This needs to be fixed.

— Mark D. Levine (@MarkLevineNYC)

Latest Videos

undefined

ಯುಎಸ್‌ ಓಪನ್‌ ಅರ್ಹತಾ ಸುತ್ತು: ಪ್ರಜ್ನೇಶ್‌ಗೆ ಮುನ್ನಡೆ

ನ್ಯೂಯಾರ್ಕ್: ಭಾರತದ ಅಗ್ರ ಶ್ರೇಯಾಂಕಿತ ಪ್ರಜ್ನೇಶ್‌ ಗುಣೇಶ್ವರನ್‌ ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂ ಟೂರ್ನಿಯ ಅರ್ಹತಾ ಸುತ್ತಿನಲ್ಲಿ 2ನೇ ಹಂತ ಪ್ರವೇಶಿಸಿದ್ದಾರೆ. ಮೊದಲ ಪಂದ್ಯದಲ್ಲಿ ಕೆನಡಾದ ಬ್ರೈಡೆನ್‌ ಸ್ನುರ್‌ ವಿರುದ್ಧ ಪ್ರಜ್ನೇಶ್‌ 6​-4, 7-​6 ನೇರ ಸೆಟ್‌ಗಳಲ್ಲಿ ಗೆದ್ದುಕೊಂಡರು. ಮುಂದಿನ ಸುತ್ತಿನಲ್ಲಿ ಪ್ರಜ್ನೇಶ್‌ ಅಮೆರಿಕಾದ ಕ್ರಿಸ್ಟೋಪರ್‌ ಎಬಂಕ್ಸ್‌ ವಿರುದ್ಧ ಸೆಣಸಲಿದ್ದಾರೆ.

ಯುಎಸ್‌ ಓಪನ್‌: ಪ್ರಧಾನ ಸುತ್ತಿಗೇರದ ನಗಾಲ್‌, ರಾಮ್‌ಕುಮಾರ್‌

ಈ ಮೊದಲು ಭಾರತದ ಪುರುಷರ ಸಿಂಗಲ್ಸ್‌ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲೇ ಸುಮಿತ್‌ ನಗಾಲ್‌ ಹಾಗೂ ರಾಮ್‌ಕುಮಾರ್‌ ರಾಮನಾಥನ್‌ ಸೋತು ಹೊರಬಿದ್ದರೆ, ಮಹಿಳಾ ಸಿಂಗಲ್ಸ್‌ನಲ್ಲಿ ಅಂಕಿತಾ ರೈನಾ ಮೊದಲ ಪಂದ್ಯದಲ್ಲೇ ಪರಾಭವಗೊಂಡು ನಿರ್ಗಮಿಸಿದ್ದರು.
 

click me!