US Open ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ ಟ್ರೋಫಿ ಗಿಫ್ಟ್‌ ನೀಡಿದ ಡೇನಿಲ್‌!

By Kannadaprabha NewsFirst Published Sep 14, 2021, 8:52 AM IST
Highlights

* ಯುಎಸ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಡೇನಿಲ್ ಮೆಡ್ವೆಡೆವ್ ಚಾಂಪಿಯನ್‌

* ನೊವಾಕ್‌ ಜೋಕೋವಿಚ್‌ ಮಣಿಸಿ ಚೊಚ್ಚಲ ಗ್ರ್ಯಾನ್‌ ಸ್ಲಾಂ ಜಯಿಸಿದ ಮೆಡ್ವೆಡೆವ್‌

* 3ನೇ ವಿವಾಹ ವಾರ್ಷಿಕೋತ್ಸವಕ್ಕೆ ಮೆಡ್ವೆಡೆವ್‌ ಸ್ಮರಣೀಯ ಗಿಫ್ಟ್

ನ್ಯೂಯಾರ್ಕ್‌(ಸೆ`14): 2021ರಲ್ಲಿ 27 ಗ್ರ್ಯಾನ್‌ ಸ್ಲಾಂ ಪಂದ್ಯಗಳಲ್ಲಿ ಎದುರಾಗದ ಸೋಲು, ವಿಶ್ವ ನಂ.1 ಟೆನಿಸಿಗ, ಸರ್ಬಿಯಾದ ನೊವಾಕ್‌ ಜೋಕೋವಿಚ್‌ಗೆ ನಿರ್ಣಾಯಕ ಎನಿಸಿದ್ದ ಪಂದ್ಯದಲ್ಲಿ ಎದುರಾಯಿತು. ಕ್ಯಾಲೆಂಡರ್‌ ಸ್ಲಾಂ ಸಾಧನೆ ಮಾಡುವ ಜೋಕೋವಿಚ್‌ ಕನಸಿಗೆ, ವಿಶ್ವ ನಂ.2, ರಷ್ಯಾದ ಡೇನಿಲ್ ಮೆಡ್ವೆಡೆವ್‌ ಅಡ್ಡಿಯಾದರು. ಸೋಮವಾರ ಬೆಳಗ್ಗಿನ ಜಾವ ನಡೆದ ಯುಎಸ್‌ ಓಪನ್‌ ಫೈನಲ್‌ನಲ್ಲಿ ಮೆಡ್ವೆಡೆವ್‌ 6-4, 6-4, 6-4 ಸೆಟ್‌ಗಳಲ್ಲಿ ಗೆದ್ದು, ಚೊಚ್ಚಲ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಎತ್ತಿಹಿಡಿದರು.

Novak Djokovic was going for the Calendar Grand Slam, but had other plans...

Full recap of the Russian's 6-4, 6-4, 6-4 victory 👇

— US Open Tennis (@usopen)

ಪತ್ನಿಗೆ ಸ್ಮರಣೀಯ ಗಿಫ್ಟ್‌

Post-match celebration inspired by ?! YOU are a legend. pic.twitter.com/oMoI0Dgjnk

— US Open Tennis (@usopen)

ಫೈನಲ್‌ ನಡೆದ ದಿನವೇ ಮೆಡ್ವೆಡೆವ್‌ರ 3ನೇ ವಿವಾಹ ವಾರ್ಷಿಕೋತ್ಸವ. ಸ್ಟ್ಯಾಂಡ್ಸ್‌ನಲ್ಲಿ ಕೂತು ತಮ್ಮನ್ನು ಬೆಂಬಲಿಸುತ್ತಿದ್ದ ಪತ್ನಿ ದಾರಿಯಾ ಮೆಡ್ವೆಡೆವಾಗೆ ಡೇನಿಲ್ ಟ್ರೋಫಿಯನ್ನೇ ಉಡುಗೊರೆಯಾಗಿ ನೀಡಿದರು. ಪ್ರಶಸ್ತಿ ಗೆದ್ದ ಬಳಿಕ ಮಾತನಾಡಿದ ಮೆಡ್ವೆಡವ್‌ ‘ನನ್ನ ಯಶಸ್ಸಿನಲ್ಲಿ ಪತ್ನಿಯ ಬೆಂಬಲವೂ ಮಹತ್ವದಾಗಿದೆ. ಪಂದ್ಯ ಸೋತರೆ ಏನು ಮಾಡೋದು, ತಕ್ಷಣಕ್ಕೆ ಎಲ್ಲಿಗೆ ಹೋಗಿ ಉಡುಗೊರೆ ತರಲಿ ಎಂದು ಯೋಚಿಸುತ್ತಿದ್ದೆ. ಗೆದ್ದಿದ್ದರಿಂದ ಟ್ರೋಫಿಯನ್ನೇ ಉಡುಗೊರೆಯಾಗಿ ನೀಡುತ್ತೇನೆ’ ಎಂದರು.

US Open ಜೋಕೋಗೆ ಸೋಲಿನ ಶಾಕ್‌, ಡೇನಿಲ್ ಮೆಡ್ವೆಡೆವ್‌ ಚಾಂಪಿಯನ್‌..!

ರಾಕೆಟ್‌ ಮುರಿದು, ಕಣ್ಣೀರಿಟ್ಟು ಬೇಸರ ಹೊರಹಾಕಿದ ಜೋಕೋ!

ಜೋಕೋವಿಚ್‌ ತಮ್ಮ ಕ್ಯಾಲೆಂಡರ್‌ ಸ್ಲಾಂ ಕನಸು ಕೈಮೀರುತ್ತಿದ್ದೆ ಎಂದು ಅರಿವಾದಾಗಲೇ ರಾಕೆಟ್‌ ಮುರಿದು ಬೇಸರ ವ್ಯಕ್ತಪಡಿಸಿದ್ದರು. ಸೋಲಿನ ಬಳಿಕ ಮುಖದ ಮೇಲೆ ಟವೆಲ್‌ ಹಾಕಿಕೊಂಡು ಕಣ್ಣೀರಿಟ್ಟ ದೃಶ್ಯ ಟೆನಿಸ್‌ ಅಭಿಮಾನಿಗಳಲ್ಲಿ ಬೇಸರ ಮೂಡಿಸಿತು.

click me!