ಭಾರತದಲ್ಲಿ ಅದೆಷ್ಟೋ ಪ್ರತಿಭೆಗಳಿಗೆ ಸೂಕ್ತ ಸೌಲಭ್ಯಗಳಿಲ್ಲದೆ ಮುದುಡಿ ಹೋಗುತ್ತಿದೆ. 2020ಕ್ಕೆ ಕಾಲಿಟ್ಟರು ಭಾರತದಲ್ಲಿ ಕ್ರೀಡಾ ಸೌಲಭ್ಯಗಳು ಸೂಕ್ತರಿಗೆ ತಲುಪುತ್ತಿಲ್ಲ. ಆದರೆ ಅಡೆ ತಡೆಗಳನ್ನು ಮೀರಿ ಸಾಧನೆ ಮಾಡಿದವರಿಗೇನು ಕಡಿಮೆ ಇಲ್ಲ. ಹೀಗೆ ಬಾಡಿಗೆ ಸೈಕಲ್ ಪಡೆದ 16 ವರ್ಷದ ರಾಧಿಕಾ ರಾಷ್ಟ್ರೀಯ ಶಾಲಾ ಗೇಮ್ಸ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದಿದ್ದಾಳೆ.
ತಿರುಚಿ(ಜ.25): ಮನೆಯಲ್ಲಿ ಕಡು ಬಡತನ, ಶಾಲೆಗೆ ಕಳುಹಿಸುವುದೆ ಕಷ್ಟ. ಹೀಗಿರುವಾಗ ತನ್ನ ಪ್ರತಿಭೆಗೆ ಕನಿಷ್ಠ 50,000 ರೂಪಾಯಿ ಸೈಕಲ್ ಖರೀದಿಸುವುದಾದರೂ ಹೇಗೆ? ಇದು 16 ವರ್ಷದ ಎ ರಾಧಿಕಾ ಹುಡುಗಿಯ ಪರಿಸ್ಥಿತಿ. ಸೈಕ್ಲಿಂಗ್‌ನಲ್ಲಿ ವಿಶೇಷ ಕೌಶಲ್ಯ ಹೊಂದಿರುವ ರಾಧಿಕಾ ಕೊನೆಗೆ ಬಾಡಿಗೆ ಸೈಕಲ್ ಪಡೆದು, ರಾಷ್ಟ್ರೀಯ ಶಾಲಾ ಗೇಮ್ಸ್‌ನಲ್ಲಿ 3ನೇ ಸ್ಥಾನ ಅಲಂಕರಿಸಿದ್ದಾಳೆ.
ಇದನ್ನೂ ಓದಿ: ಖೇಲೋ ಇಂಡಿಯಾ: ಸೈಕ್ಲಿಂಗ್‌ನಲ್ಲಿ ಕರ್ನಾಟಕಕ್ಕೆ 4 ಪದಕ.
ತಮಿಳುನಾಡಿನ ತಿರುಚಿರಾಪಳ್ಳಿಯ ಎ ರಾಧಿಕ ಇದೀಗ 65ನೇ ರಾಷ್ಟ್ರೀಯ ಶಾಲಾ ಗೇಮ್ಸ್ 2019-20ರಲ್ಲಿ ಈ ಸಾಧನೆ ಮಾಡಿದ್ದಾಳೆ. ಸೈಕ್ಲಿಂಗ್‌ನಲ್ಲಿ ಆಸಕ್ತಿ ಹೊಂದಿರುವ ಎ ರಾಧಿಕಾಗೆ ಸೈಕಲ್ ಕೊಡಿಸುವಷ್ಟು ಶಕ್ತಿ ಪೋಷಕರಲ್ಲಿ ಇಲ್ಲ. ತನ್ನಲ್ಲಿರುವ ಸೈಕಲ್ ಮೂಲಕ ತಾಲೂಕು, ಜಿಲ್ಲಾ, ಹಾಗೂ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಗದ್ದ ರಾಧಿಕಾಗೆ ರಾಷ್ಟ್ರೀಯ ಗೇಮ್ಸ್‌ನಲ್ಲಿ ಅದೇ ಸೈಕಲ್‌ನಲ್ಲಿ ಪ್ರಶಸ್ತಿ ಸಾಧ್ಯವಿಲ್ಲ ಅನ್ನೋ ಸ್ಪಷ್ಟ ಅರಿವಿತ್ತು.
ಇದನ್ನೂ ಓದಿ:ಏಷ್ಯಾಕಪ್ ಸೈಕ್ಲಿಂಗ್: 25 ಪದಕ ಗೆದ್ದ ಭಾರತ
ಎ ರಾಾಧಿಕಾಗೆ ಕಾರ್ಬನ್ ವೀಲ್ ಸೈಕಲ್ ಖರೀದಿಸಲು ಕನಿಷ್ಠ 50,000 ರೂಪಾಯಿ ಬೇಕಿತ್ತು. ಇಷ್ಟು ಮೊತ್ತ ರಾಧಿಕಾ ಪೋಷಕರಿಗೆ ಅಸಾಧ್ಯವಾಗಿತ್ತು. ಹೀಗಾಗಿ ಬಾಡಿಗೆ ಸೈಕಲ್ ಪಡೆದ ರಾಧಿಕಾ, ಪುಣೆಯಲ್ಲಿ ನಡೆದ ರಾಷ್ಟ್ರೀಯ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದಾಳೆ. ಇಷ್ಟೇ ಅಲ್ಲ 3ನೇ ಸ್ಥಾನ ಅಲಂಕರಿಸಿದ್ದಾಳೆ.
ರಾಧಿಕಾಗೆ ಉತ್ತಮ ಸೈಕಲ್ ಹಾಗೂ ನ್ಯೂಟ್ರಿಶಿಯನ್ ಆಹಾರ ದೊರೆತರೆ ಅಂತಾರಾಷ್ಟ್ರ ಮಟ್ಟದಲ್ಲಿ ಪದಕ ಗೆಲ್ಲುವುದು ಖಚಿತ ಎಂದು ರಾಧಿಕಾ ಕೋಚ್, ಮಾಜಿ ಅಂತಾರಾಷ್ಟ್ರೀಯ ಸೈಕ್ಲಿಸ್ಟ್ ಸೆಕೆಂಡುಗಳ ಅಂತರದಲ್ಲಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾಳೆ.