ಒಲಿಂಪಿಕ್ಸ್ ಅರ್ಹತೆ ಪಡೆದ ಕ್ರೀಡಾಪಟುಗಳಿಗೆ 4 ವಾರದ ಬಳಿಕ 2ನೇ ಡೋಸ್ ಲಸಿಕೆ!

By Suvarna NewsFirst Published Jun 7, 2021, 6:45 PM IST
Highlights
  • ಟೊಕಿಯೋ ಒಲಿಂಪಿಕ್ಸ್ ಅರ್ಹತೆ ಪಡೆದ ಕ್ರೀಡಾಪಟುಗಳ ಲಸಿಕೆಗೆ ಪ್ರಮುಖ ಆದ್ಯತೆ
  • ಕ್ರೀಡಾಪಟುಗಳ 2ನೇ ಡೋಸ್ ಅಂತರ 4 ವಾರಕ್ಕೆ ಇಳಿಕೆ
  • ಪ್ರಮುಖ ಸುತ್ತೋಲೆ ಹೊರಡಿಸಿದ ಕೇಂದ್ರ ಆರೋಗ್ಯ ಇಲಾಖೆ 

ನವದೆಹಲಿ(ಜೂ.07): ಕೊರೋನಾ ವೈರಸ್ ಭೀತಿ ನಡುವೆ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ತಯಾರಿ ನಡೆಯುತ್ತದೆ. ಜುಲೈ 23 ರಿಂದ ಜಪಾನ್‌ನ ಟೊಕಿಯೋ ನಗರದಲ್ಲಿ ಪ್ರತಿಷ್ಠಿತ ಕ್ರೀಡಾಕೂಟ ಆರಂಭಗೊಳ್ಳಲಿದೆ. ಟೊಕಿಯೋ ಒಲಿಂಪಿಕ್ಸ್ ಕೂಟಕ್ಕೆ ಅರ್ಹತೆ ಪಡೆದ ಭಾರತೀಯ ಕ್ರೀಡಾಪಟುಗಳಿಗೆ ಮೊದಲ ಆದ್ಯತೆಯಲ್ಲಿ ಲಸಿಕೆ ನೀಡಲು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಇದೀಗ ಕೇಂದ್ರ ಆರೋಗ್ಯ ಇಲಾಖೆ ಮತ್ತೊಂದು ಸುತ್ತೋಲೆ ಹೊರಡಿಸಿದ್ದು, ಕ್ರೀಡಾಪಟುಗಳ 2ನೇ ಜೋಸ್ ಅಂತರವನ್ನು ಕಡಿಮೆಗೊಳಿಸಿದೆ.

ಒಲಿಂಪಿಕ್ಸ್ ತಯಾರಿ ಸಭೆ : ಕ್ರೀಡಾಪಟುಗಳ ಬೇಡಿಕೆಗೆ ಮೊದಲ ಆದ್ಯತೆ ಎಂದ ಪ್ರಧಾನಿ!.

ಒಲಿಂಪಿಕ್ಸ್ ಅರ್ಹತೆ ಪಡೆದ ಭಾರತೀಯ ಕ್ರೀಡಾಪಟುಗಳಿಗೆ 4 ವಾರದ ಬಳಿಕ 2ನೇ ಡೋಸ್ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಇದರ ಜೊತೆಗೆ ಕ್ರೀಡಾಕೂಟಕ್ಕೆ ತೆರಳಿಲಿರುವ ಕೋಚ್ ಹಾಗೂ ಸಿಬ್ಬಂದಿಗಳಿಗೂ 4 ವಾರದ ಬಳಿಕ 2ನೇ ಡೋಸ್ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ಹೇಳಿದೆ ಎಂದು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ನರೀಂದ್ರ ಧ್ರುವ್ ಬಾತ್ರ ಮಾಹಿತಿ ನೀಡಿದ್ದಾರೆ.  

 ತ್ತೀಚೆಗೆ ಲಸಿಕೆ ಡೋಸ್ ನಡುವಿನ ಅಂತರವನ್ನು ನಾಲ್ಕು ವಾರಗಲಿಂದ 12 ವಾರಗಳಿಗೆ ಹೆಚ್ಚಿಸಲಾಗಿತ್ತು. ಆದರೆ ಒಲಿಂಪಿಕ್ಸ್ ಅರ್ಹತೆ ಪಡೆದ ಕ್ರೀಡಾಪಟುಗಳು ಜಪಾನ್‌ಗೆ ತೆರಳಲಿರುವ ಕಾರಣ, ಜೊತೆಗೆ ಕೋವಿಡ್ ಭೀತಿ ನಡುವೆ ಕ್ರೀಡಾಕೂಟದಲ್ಲಿ ಪಾಲ್ಗೊಳುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆ ಹೊಸ ಸುತ್ತೋಲೆ ಹೊರಡಿಸಿದೆ.

ಟೋಕಿಯೋ ಒಲಿಂಪಿಕ್ಸ್‌ಗೆ ಭಾರತದ ಜೆರ್ಸಿ ಅನಾವರಣ...

ಭಾರತ ಪ್ರತಿನಿಧಿಸುವ ಎಲ್ಲಾ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಮಾಡಲಾಗಿರುವ ಸಿದ್ಧತೆ ಕುರಿತು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಸಭೆ ನಡೆಸಿದ್ದರು. ಈ ವೇಳೆ ಎಲ್ಲಾ ಕ್ರೀಡಾಪಟುಗಳಿಗೆ ಮೊದಲ  ಆದ್ಯತೆಯಾಗಗಿ ಲಸಿಕೆ ನೀಡಲು ಸೂಚನೆ ನೀಡಿದ್ದರು. ಜುಲೈ ತಿಂಗಳ ಆರಂಭದಲ್ಲಿ ಒಲಿಂಪಿಕ್ಸ್‌ ಕೂಟದಲ್ಲಿ ಪಾಲ್ಗೊಳ್ಳಲಿರುವ ಕ್ರೀಡಾಪಟುಗಳ ಜೊತೆ ಮೋದಿ ವಿಡಿಯಾ ಸಂವಾದ ನಡೆಸಲಿದ್ದಾರೆ.

ಇತ್ತೀಚೆಗೆ ಕೋವಿಡ್‌ನಿಂದ ಚೇತರಿಸಿಕೊಂಡ ಹಾಗೂ ಅರ್ಹತೆ ಪಡೆದ ಐವರು ಕ್ರೀಡಾಪಟುಗಳಾದ ಬಾಕ್ಸರ್ ಸಿಮ್ರನ್ ಜಿತ್ ಕೌರ್, ಶೂಟರ್‌ಗಳಾದ ಸೌರಭ್ ಚೌದರಿ, ರಾಹಿ ಸರ್ನೋಬತ್, ದೀಪಕ್ ಕುಮಾರ್, ಮೈರಾಜ್ ಅಹಮ್ಮದ್ ಶೇಖ್  ತಕ್ಷಣವೇ ಲಸಿಕೆ ಪಡೆಯಲು ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಶನ್ ಸೂಚಿಸಿದೆ.

click me!