ಪ್ಯಾರಿಸ್(ಜೂ.06): ಫ್ರೆಂಚ್ ಓಪನ್ ಸಿರೀಸ್‌ನಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿ ಮತ್ತೊಂದು ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಇದೀಗ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಈ ವಿಚಾರವನ್ನು ಸ್ವತಃ ರೋಜರ್ ಫೆಜರರ್ ಸ್ಪಷ್ಟಪಡಿಸಿದ್ದಾರೆ.
ಫ್ರೆಂಚ್ ಓಪನ್: ಫೆಡರರ್ ಮಿಂಚಿನಾಟಕ್ಕೆ ತಬ್ಬಿಬ್ಬಾದ ಮರಿನ್ ಸಿಲಿಕ್
ಕಳೆದ ಮೂರು ವರ್ಷಗಳಲ್ಲಿ ಫೆಡರರ್ ಬೆರಳೆಣಿಕೆ ಪಂದ್ಯಗಳನ್ನಾಡಿದ್ದಾರೆ. ಕಾರಣ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಫೆಡರರ್ ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ. ಹೀಗಾಗಿ ಫ್ರೆಂಚ್ ಓಪನ್ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದಾಗಿ ಫೆಡರರ್ ಘೋಷಿಸಿದ್ದಾರೆ.
ಜೂನ್ ತಿಂಗಳ ಅಂತ್ಯದಲ್ಲಿ ಆರಂಭಗೊಳ್ಳಲಿರುವ ವಿಂಬಲ್ಡನ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಫಿಟ್ನೆಸ್ ಕಾಪಾಡಿಕೊಳ್ಳಬೇಕಿದೆ ಎಂದು ಫೆಡರರ್ ಹೇಳಿದ್ದಾರೆ. 20 ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗೆದ್ದಿರುವ ಫೆಡರರ್ ಒಂದೇ ಬಾರಿ ಫ್ರೆಂಚ್ ಒಪನ್ ಗೆದ್ದಿದ್ದಾರೆ. 2009ರಲ್ಲಿ ಗೆದ್ದ ಫ್ರೆಂಚ್ ಓಪನ್ ಮೊದಲು ಹಾಗೂ ಕೊನೆಯಾಗಿದೆ.
ಈ ಬಾರಿ ಫೆಡರರ್ ಫ್ರೆಂಚ್ ಓಪನ್ ಗೆಲ್ಲೋ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಆದರೆ ನಾಲ್ಕನೇ ಸುತ್ತು ಪ್ರವೇಶಿದ ಬೆನ್ನಲ್ಲೇ ದಿಢೀರ್ ಟೂರ್ನಿಯಿಂದಲೇ ಹಿಂದೆ ಸರಿದಿರುವುದು ಅಭಿಮಾನಿಗಳಿಗೆ ತೀವ್ರ ಬೆಸರ ತಂದಿದೆ.