Australian Open : ಸೆಮೀಸ್‌ಗೆ ಲಗ್ಗೆಯಿಟ್ಟ ಮೆಡ್ವೆಡೆವ್‌, ಸಿಟ್ಸಿಪಾಸ್‌

Kannadaprabha News   | Asianet News
Published : Jan 27, 2022, 04:30 AM IST
Australian Open : ಸೆಮೀಸ್‌ಗೆ ಲಗ್ಗೆಯಿಟ್ಟ ಮೆಡ್ವೆಡೆವ್‌, ಸಿಟ್ಸಿಪಾಸ್‌

ಸಾರಾಂಶ

* ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ * ಸ್ವಿಯಾಟೆಕ್‌, ಕಾಲಿನ್ಸ್‌ ಸಹ ಸೆಮೀಸ್‌ ಪ್ರವೇಶ * ಇಂದು ಮಹಿಳಾ ಸಿಂಗಲ್ಸ್ ಸೆಮಿಫೈನಲ್ಸ್

ಮೆಲ್ಬರ್ನ್‌ (ಜ.27): ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ (Australian Open Grand Slam Tennis) ಟೂರ್ನಿಯ ಸೆಮಿಫೈನಲ್‌ ಮುಖಾಮುಖಿ ಖಚಿತವಾಗಿದೆ. ಬುಧವಾರ ನಡೆದ ಪುರುಷರ ಸಿಂಗಲ್ಸ್‌  (Mens Singles)ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಟೆಫಾನೋಸ್‌ ಸಿಟ್ಸಿಪಾಸ್‌ (Stefanos Tsitsipas) ಹಾಗೂ ಡ್ಯಾನಿಲ್‌ ಮೆಡ್ವೆಡೆವ್‌ (Daniil Medvedev) ಜಯಗಳಿಸಿದರೆ, ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಡೇನಿಯಲ್‌ ಕಾಲಿನ್ಸ್‌ (Daniel Collins)ಹಾಗೂ ಇಗಾ ಸ್ವಿಯಾಟೆಕ್‌ (Iga swiatek) ಗೆದ್ದು ಮುನ್ನಡೆದರು.

11ನೇ ಶ್ರೇಯಾಂಕಿತ ಇಟಲಿಯ ಜಾನ್ನೆಕ್‌ ಸಿನ್ನರ್‌ ವಿರುದ್ಧದ ಪಂದ್ಯದಲ್ಲಿ 4ನೇ ಶ್ರೇಯಾಂಕಿತ ಗ್ರೀಸ್‌ನ ಸಿಟ್ಸಿಪಾಸ್‌ 6-3, 6-4, 6-2 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. 9ನೇ ಶ್ರೇಯಾಂಕಿತ ಕೆನಡಾದ ಅಗ್ಯುರ್‌-ಅಲಿಯಾಸಿಮ್‌ ವಿರುದ್ಧ ವಿಶ್ವ ನಂ.2 ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ 6-7, 3-6, 7-6, 7-5, 6-4 ಸೆಟ್‌ಗಳಲ್ಲಿ ಜಯಗಳಿಸಿದರು. ಮೊದಲೆರಡು ಸೆಟ್‌ಗಳಲ್ಲಿ ಸೋತು ಹೊರಬೀಳುವ ಆತಂಕದಲ್ಲಿದ್ದ ಯುಎಸ್‌ ಓಪನ್‌ ಚಾಂಪಿಯನ್‌ ಮೆಡ್ವೆಡೆವ್‌, ತಮ್ಮ ಅನುಭವ ಬಳಸಿ ಕೆನಡಾ ಆಟಗಾರನ ಮೇಲೆ ಮೇಲುಗೈ ಸಾಧಿಸಿದರು. ಶುಕ್ರವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಮೆಡ್ವೆಡೆವ್‌ ಹಾಗೂ ಸಿಟ್ಸಿಪಾಸ್‌ ಎದುರಾಗಲಿದ್ದಾರೆ.

ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ 7ನೇ ಶ್ರೇಯಾಂಕಿತೆ, 2020ರ ಫ್ರೆಂಚ್‌ ಓಪನ್‌ ಚಾಂಪಿಯನ್‌ ಪೋಲೆಂಡ್‌ನ ಇಗಾ ಸ್ವಿಯಾಟೆಕ್‌, ಎಸ್ಟೋನಿಯಾದ ಕಿಯಾ ಕನೆಪಿ ವಿರುದ್ಧ 4-6, 7-6, 6-3 ಸೆಟ್‌ಗಳಲ್ಲಿ ಜಯಗಳಿಸಿದರು. ಮತ್ತೊಂದು ಕ್ವಾರ್ಟರ್‌ನಲ್ಲಿ ಅಮೆರಿಕದ ಕಾಲಿನ್ಸ್‌, ಫ್ರಾನ್ಸ್‌ನ ಅಲೈಜ್‌ ಕಾರ್ನೆಟ್‌ ವಿರುದ್ಧ 7-5, 6-1ರಲ್ಲಿ ಸುಲಭ ಗೆಲುವು ಪಡೆದರು. 63ನೇ ಯತ್ನದಲ್ಲಿ ಗ್ರ್ಯಾನ್‌ ಸ್ಲಾಂ ಕ್ವಾರ್ಟರ್‌ಗೇರಿದ್ದ ಕಾರ್ನೆಟ್‌, ಮುನ್ನಡೆಯುವಲ್ಲಿ ವಿಫಲರಾದರು.

ಇಂದು ಸೆಮೀಸ್‌: ಮಹಿಳಾ ಸಿಂಗಲ್ಸ್‌ ಸೆಮಿಫೈನಲ್‌ ಪಂದ್ಯಗಳು ಗುರುವಾರ ನಡೆಯಲಿವೆ. ಮೊದಲ ಸೆಮೀಸ್‌ನಲ್ಲಿ ವಿಶ್ವ ನಂ.1 ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ ಹಾಗೂ ಅಮೆರಿಕದ ಮ್ಯಾಡಿಸನ್‌ ಕೀಸ್‌ ಮುಖಾಮುಖಿಯಾಗಲಿದ್ದಾರೆ. 2ನೇ ಸೆಮೀಸ್‌ನಲ್ಲಿ ಕಾಲಿನ್ಸ್‌ ಹಾಗೂ ಸ್ವಿಯಾಟೆಕ್‌ ಸೆಣಸಲಿದ್ದಾರೆ.

ಏಕದಿನ ಶ್ರೇಯಾಂಕ 2ನೇ ಸ್ಥಾನದಲ್ಲೇ ಕೊಹ್ಲಿ
ದುಬೈ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ಐಸಿಸಿ ಏಕದಿನ ಬ್ಯಾಟರ್‌ಗಳ ರಾರ‍ಯಂಕಿಂಗ್‌ ಪಟ್ಟಿಯಲ್ಲಿ 2ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ನಾಯಕ ರೋಹಿತ್‌ ಶರ್ಮಾ (Rohit Sharma) 3ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ದ.ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕೊಹ್ಲಿ ಒಟ್ಟು 116 ರನ್‌ ಗಳಿಸಿದ್ದರು. ಪಾಕಿಸ್ತಾನದ ನಾಯಕ ಬಾಬರ್‌ ಆಜಂ 873 ರೇಟಿಂಗ್‌ ಅಂಕಗಳೊಂದಿಗೆ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಕೊಹ್ಲಿ 836 ರೇಟಿಂಗ್‌ ಅಂಕ ಹೊಂದಿದ್ದರೆ, ರೋಹಿತ್‌ 801 ಅಂಕ ಗಳಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳಾದ ಕ್ವಿಂಟನ್ ಡಿ ಕಾಕ್ ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಅವರು ತಮ್ಮ ತಂಡವು ಭಾರತದ ವಿರುದ್ಧ ಸ್ಮರಣೀಯ 3-0 ಸರಣಿ ಜಯವನ್ನು ಗೆಲುವಿಗೆ ಸಹಾಯ ಮಾಡಿದ ಸಾಹಸದ ನಂತರ ಐಸಿಸಿ ಪುರುಷರ ODI ಆಟಗಾರರ ಶ್ರೇಯಾಂಕದಲ್ಲಿ ಭಾರಿ ಏರಿಕೆ ಕಂಡಿದ್ದಾರೆ. ಕೇಪ್ ಟೌನ್‌ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ 124 ಸೇರಿದಂತೆ 229 ರನ್‌ಗಳನ್ನು ಬಾರಿಸಿದ ಡಿ ಕಾಕ್ ಮೊದಲ ಬಾರಿಗೆ ಅಗ್ರ ಐವರು ಬ್ಯಾಟ್ಸ್ ಮನ್ ಗಳ ಲಿಸ್ಟ್ ನಲ್ಲಿ ಸ್ಥಾನ ಪಡೆದಿದ್ದಾರೆ, ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ತಮ್ಮ ಅಭೂತಪೂರ್ವ ನಿರ್ವಹಣೆಗಾಗಿ ಸರಣಿಶ್ರೇಷ್ಠ ಗೌರವವನ್ನೂ ಪಡೆದಿದ್ದರು.

ಗಾಯಾಳು ಅಶ್ವಿನ್ 6 ವಾರ ಕ್ರಿಕೆಟ್‌ನಿಂದ ಔಟ್‌
ದ.ಆಫ್ರಿಕಾ ವಿರುದ್ಧ ಏಕದಿನ ಸರಣಿ ವೇಳೆ ಗಾಯಗೊಂಡ ಹಿರಿಯ ಸ್ಪಿನ್ನರ್‌ ಆರ್‌.ಅಶ್ವಿನ್‌ (R. Ashwin), ಒಂದೂವರೆ ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಅವರು ವಿಂಡೀಸ್‌, ಲಂಕಾ ವಿರುದ್ಧ ಸರಣಿಗಳಿಗೆ ಗೈರಾಗಲಿದ್ದು, ಐಪಿಎಲ್‌ ಆರಂಭಗೊಳ್ಳುವ ವೇಳೆಗೆ ಫಿಟ್‌ ಆಗುವ ನಿರೀಕ್ಷೆ ಇದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!