ಫ್ರೆಂಚ್ ಓಪನ್‌: ಫೆಡರರ್ ಮಿಂಚಿನಾಟಕ್ಕೆ ತಬ್ಬಿಬ್ಬಾದ ಮರಿನ್ ಸಿಲಿಕ್

By Suvarna News  |  First Published Jun 4, 2021, 1:34 PM IST

* ಫ್ರೆಂಚ್ ಓಪನ್ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ ರೋಜರ್ ಫೆಡರರ್

* ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಮರಿನ್ ಸಿಲಿಕ್ ಎರಡನೇ ಸುತ್ತಿನಲ್ಲೇ ಔಟ್

* 2020ರ ಆಸ್ಟ್ರೇಲಿಯನ್ ಓಪನ್‌ ಬಳಿಕ ಮೊದಲ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಪಾಲ್ಗೊಂಡಿರುವ ಫೆಡರರ್


ಪ್ಯಾರಿಸ್‌(ಜೂ.04): ಫ್ರೆಂಚ್‌ ಓಪನ್ ಟೆನಿಸ್ ಟೂರ್ನಿಯಲ್ಲಿ 8ನೇ ಶ್ರೇಯಾಂಕಿತ ಟೆನಿಸ್ ದಿಗ್ಗಜ ರೋಜರ್ ಫೆಡರರ್, ಯುಎಸ್‌ ಓಪನ್ ಚಾಂಪಿಯನ್‌ ಮರಿನ್ ಸಿಲಿಕ್ ಅವರನ್ನು ಮಣಿಸಿ ಮೂರನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

ಫ್ರೆಂಚ್ ಓಪನ್‌ ಟೂರ್ನಿಯ ಎರಡನೇ ಸುತ್ತಿನಲ್ಲೇ ಎರಡು ಆಟಗಾರರು ಗೆಲುವಿಗಾಗಿ ಸಾಕಷ್ಟು ಪೈಪೋಟಿ ನಡೆಸಿದರು. ಸುಮಾರು 2 ಗಂಟೆ 35 ನಿಮಿಷಗಳ ಕಾಲ ನಡೆದ ಪೈಪೋಟಿಯಲ್ಲಿ 20 ಗ್ರ್ಯಾನ್‌ಸ್ಲಾಂ ವಿಜೇತ ರೋಜರ್ ಫೆಡರರ್ 6-2, 2-6, 7-5(4), 6-2 ಸೆಟ್‌ಗಳಿಂದ ಮಣಿಸಿ ಮೂರನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

Tap to resize

Latest Videos

ಫ್ರೆಂಚ್‌ ಓಪನ್‌ನಿಂದ ವಿಶ್ವ ನಂ.1 ಆಶ್ಲೆ ಬಾರ್ಟಿ ಔಟ್‌

Fiery Fed mode activated 🤭

He wins the tiebreak to take the two sets to one lead. pic.twitter.com/GeJxVBkNsB

— Roland-Garros (@rolandgarros)

Fed the Fighter 👏

For a 16th time in Paris, is safely through to the third round overcoming Cilic 6-3, 2-6, 7-6(4), 6-2. pic.twitter.com/7F4cjVCsps

— Roland-Garros (@rolandgarros)

2020ರ ಆಸ್ಟ್ರೇಲಿಯನ್ ಓಪನ್‌ ಟೆನಿಸ್ ಟೂರ್ನಿಯ ಬಳಿಕ ರೋಜರ್ ಫೆಡರರ್ ಪಾಲ್ಗೊಳ್ಳುತ್ತಿರುವ ಮೊದಲ ಗ್ರ್ಯಾನ್‌ಸ್ಲಾಂ ಟೂರ್ನಮೆಂಟ್ ಇದಾಗಿದೆ. ಇದೀಗ ಮೂರನೇ ಸುತ್ತಿನಲ್ಲಿ ರೋಜರ್ ಫೆಡರರ್‌ ಶ್ರೇಯಾಂಕ ರಹಿತ ಜರ್ಮನಿಯ ಆಟಗಾರ ಡೋಮಿನಿಕ್ ಕೋಪರ್ ಅವರನ್ನು ಎದುರಿಸಲಿದ್ದಾರೆ.

click me!