* ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪ
* ಕಳೆದ ಫ್ರೆಂಚ್ ಓಪನ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ ಅರೋಪದಡಿ ರಷ್ಯಾ ಮಹಿಳಾ ಆಟಗಾರ್ತಿಯ ಬಂಧನ
* ರಷ್ಯಾದ 26 ವರ್ಷದ ಆಟಗಾರ್ತಿ ಯಾನಾ ಸಿಜಿಕೋವಾ ಬಂಧಿತ ಆರೋಪಿ
ಪ್ಯಾರಿಸ್(ಜೂ.05): ಕಳೆದ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಹೊತ್ತಿರುವ ರಷ್ಯಾದ 26 ವರ್ಷದ ಆಟಗಾರ್ತಿ ಯಾನಾ ಸಿಜಿಕೋವಾ ಅವರನ್ನು ಫ್ರೆಂಚ್ ಓಪನ್ ಚಾಂಪಿಯನ್‌ಶಿಪ್ ವೇಳೆ ಬಂಧಿಸಲಾಗಿದೆ.
Paris police on Friday detained Russian tennis player Yana Sizikova over the suspected fixing of a doubles match at the French Open last year, a police and legal source told AFP pic.twitter.com/wIo6p1HDDl
— AFP News Agency (@AFP)2020ರ ಸೆಪ್ಟೆಂಬರ್‌ನಲ್ಲಿ ನಡೆದ ಫ್ರೆಂಚ್ ಓಪನ್ ಡಬಲ್ಸ್ ಪಂದ್ಯವೊಂದರ ಮಾಹಿತಿ ನೀಡಿ ಬೆಟ್ಟಿಂಗ್‌ಗೆ ನೆರವಾದ ಆರೋಪದಡಿ ಡಬಲ್ಸ್‌ನಲ್ಲಿ 101ನೇ ಹಾಗೂ ಸಿಂಗಲ್ಸ್‌ನಲ್ಲಿ 765 ಶ್ರೇಯಾಂಕಿತೆ ಯಾನಾರನ್ನು ಬಂಧಿಸಲಾಗಿದೆ. ಪ್ರಾಥಮಿಕ ತನಿಖೆ ವೇಳೆ ಯಾನಾ, ಸಂಘಟಿತ ಭ್ರಷ್ಟಾಚಾರದ ಗುಂಪಿನ ಭಾಗವಾಗಿದ್ದು ಕಂಡುಬಂದಿತ್ತು.
ಫ್ರೆಂಚ್ ಓಪನ್: ನಡಾಲ್, ಫೆಡರರ್ 3ನೇ ಸುತ್ತಿಗೆ
ಪ್ಯಾರಿಸ್: ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್‌ನಲ್ಲಿ ಸ್ಪೇನ್‌ನ ರಾಫೆಲ್ ನಡಾಲ್ ಮತ್ತು ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ 3ನೇ ಸುತ್ತು ಪ್ರವೇಶಿಸಿದ್ದಾರೆ. ಫ್ರಾನ್ಸ್‌ನ ರಿಚರ್ಡ್ ಗ್ಯಾಸ್ಕೆಟ್ ವಿರುದ್ಧ ನಡಾಲ್ 6-0, 7-5, 6-2ರ ಜಯ ಸಾಧಿಸಿದರು. ಫೆಡರರ್, ಕ್ರೊವೇಷಿಯಾದ ಮರಿನ್ ಸಿಲಿಕ್ ವಿರುದ್ಧ 6-2, 2-6, 7-6 (4), 6-2ರಲ್ಲಿ ಗೆಲುವು ಕಂಡರು.
ಫ್ರೆಂಚ್ ಓಪನ್: ಫೆಡರರ್ ಮಿಂಚಿನಾಟಕ್ಕೆ ತಬ್ಬಿಬ್ಬಾದ ಮರಿನ್ ಸಿಲಿಕ್
ಮಹಿಳಾ ಸಿಂಗಲ್ಸ್‌ನಲ್ಲಿ ಸ್ವೀಡನ್‌ನ ರೆಬೆಕ್ಕಾ ಪೀಟರ್ಸನ್ ವಿರುದ್ಧ 6-1, 6-1ರಿಂದ ಗೆದ್ದ ಹಾಲಿ ಚಾಂಪಿಯನ್, ಪೋಲೆಂಡ್‌ನ ಇಗಾ ಸ್ವಾಟೆಕ್ 3ನೇ ಸುತ್ತಿಗೆ ಪ್ರವೇಶ ಪಡೆದರು.