ಕೋಚ್‌ ಸೌಮ್ಯದೀಪ್‌ ಫಿಕ್ಸಿಂಗ್‌ ಮಾಡು ಎಂದಿದ್ದರು: ಮನಿಕಾ ಬಾತ್ರಾ ಅಚ್ಚರಿಯ ಹೇಳಿಕೆ!

By Suvarna NewsFirst Published Sep 4, 2021, 12:35 PM IST
Highlights

* ಟೇಬಲ್ ಟೆನಿಸ್ ಕೋಚ್‌ ಮೇಲೆ ಗಂಭೀರ ಆರೋಪ ಮಾಡಿದ ಮನಿಕಾ ಬಾತ್ರಾ

* ಕೋಚ್‌ ಸೌಮ್ಯದೀಪ್‌ ರಾಯ್ ಮ್ಯಾಚ್‌ ಫಿಕ್ಸಿಂಗ್‌ ಮಾಡು ಎಂದಿದ್ದರು

* ನನ್ನಲ್ಲಿ ಎಲ್ಲಾ ರೀತಿಯ ದಾಖಲೆಗಳಿವೆ ಎಂದ ಮನಿಕಾ

ನವದೆಹಲಿ(ಸೆ.04): ಟೋಕಿಯೋ ಒಲಿಂಪಿಕ್ಸ್‌ ಸ್ಪರ್ಧೆ ವೇಳೆ ರಾಷ್ಟ್ರೀಯ ಕೋಚ್‌ ಸಹಾಯ ನಿರಾಕರಿಸಿ ಸುದ್ದಿಯಾಗಿದ್ದ ಟೇಬಲ್‌ ಟೆನಿಸ್‌ ಪಟು ಮನಿಕಾ ಬಾತ್ರಾ, ‘ಕೋಚ್‌ ಸೌಮ್ಯದೀಪ್‌ ರಾಯ್‌ ಮ್ಯಾಚ್‌ ಫಿಕ್ಸಿಂಗ್‌ ಮಾಡಿದ್ದೇ ನನ್ನ ಈ ನಿರ್ಧಾರಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮನಿಕಾ ಬಾತ್ರಾ ಮೂರನೇ ಸುತ್ತು ಪ್ರವೇಶಿಸಿದ್ದರು. ಆದರೆ ಪದಕದ ಸುತ್ತು ಪ್ರವೇಶಿಸಲು ವಿಫಲರಾಗಿದ್ದರು.

ದೋಹಾದಲ್ಲಿ ಒಲಿಂಪಿಕ್ಸ್‌ಗೆ ನಡೆದ ಅರ್ಹತಾ ಟೂರ್ನಿಯಲ್ಲಿ ಕೋಚ್‌ ರಾಯ್‌ ಮ್ಯಾಚ್‌ ಫಿಕ್ಸಿಂಗ್‌ ಮಾಡುವಂತೆ ಪ್ರಸ್ತಾಪಿಸಿದ್ದರು. ಇದೇ ಕಾರಣಕ್ಕೆ ನಾನು ಅವರ ಸಹಾಯ ನಿರಾಕರಿಸಿದೆ ಎಂದಿದ್ದಾರೆ. ನನ್ನಲ್ಲಿ ಇದಕ್ಕೆ ದಾಖಲೆಗಳಿವೆ. ಅದನ್ನು ಸಾಬೀತುಪಡಿಸಲು ಸಿದ್ಧ ಎಂದು ಬಾತ್ರಾ ತಿಳಿಸಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಕೋಚ್‌ ಸಹಾಯ ನಿರಾಕರಿಸಿದ್ದಕ್ಕೆ ಭಾರತ ಟೇಬಲ್‌ ಟೆನಿಸ್‌ ಫೆಡರೇಶನ್‌ ಮನಿಕಾ ಬಾತ್ರಾಗೆ ಶೋಕಾಸ್‌ ನೋಟಿಸ್‌ ನೀಡಿತ್ತು.

ಪ್ಯಾರಾಲಿಂಪಿಕ್ಸ್‌; ಭರ್ಜರಿ ಬೇಟೆ, ಶೂಟರ್‌ ಮನೀಶ್‌ಗೆ ಚಿನ್ನ, ಸಿಂಗ್‌ರಾಜ್‌ಗೆ ಬೆಳ್ಳಿ..!

ಟೇಬಲ್ ಟೆನಿಸ್‌ ಫೆಡರೇಷನ್ ಆಫ್‌ ಇಂಡಿಯಾ ನೀಡಿದ್ದ ಶೋಕಾಸ್‌ ನೋಟಿಸ್‌ಗೆ ಪ್ರತಿಕ್ರಿಯೆ ನೀಡಿರುವ ಬಾತ್ರಾ, ಮ್ಯಾಚ್‌ ಫಿಕ್ಸಿಂಗ್ ಮಾಡಲು ಪ್ರೇರೇಪಿಸಿದ್ದ ವ್ಯಕ್ತಿಯನ್ನು ಹತ್ತಿರದಲ್ಲಿಟ್ಟುಕೊಂಡು ಆಟದತ್ತ ಗಮನ ಕೇಂದ್ರೀಕರಿಸಲು ನನಗೆ ಸಾಧ್ಯವಿಲ್ಲ ಎಂದು ತೀರ್ಮಾನಿಸಿ ಕೋಚ್‌ ಸಹಾಯ ಪಡೆಯದಿರಲು ನಿರ್ಧರಿಸಿದೆ ಎಂದು ಬಾತ್ರಾ ತಿಳಿಸಿದ್ದಾರೆಂದು ವರದಿಯಾಗಿದೆ. 

ಮನಿಕಾ ಬಾತ್ರಾ ಆರೋಪಕ್ಕೆ ಕೋಚ್‌ ಸೌಮ್ಯದೀಪ್‌ ರಾಯ್‌ ಇದುವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಸೌಮ್ಯದೀಪ್‌ ರಾಯ್‌ ಕೂಡಾ ಟೇಬಲ್ ಟೆನಿಸ್‌ ಕ್ರೀಡೆಯಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ ಚಿನ್ನದ ಪದಕ ಜಯಿಸಿದ್ದು, ಅರ್ಜುನ ಪ್ರಶಸ್ತಿ ಪುರಷ್ಕೃತರಾಗಿದ್ದಾರೆ. ಮನಿಕಾ ಬಾತ್ರಾ ರಾಯ್ ಅಕಾಡಮಿಯಲ್ಲಿಯೇ ಅಭ್ಯಾಸ ನಡೆಸಿ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.

click me!